ಅಪಘಾತಕ್ಕೀಡಾಗಿ ಪಲ್ಟಿಯಾಗಿ ಹೊತ್ತಿ ಉರಿದ ಖಾಸಗಿ ಬಸ್: ಐವರ ಮೃತದೇಹ ಪತ್ತೆ ಹಚ್ಚಿರುವ ರಕ್ಷಣಾ ಸಿಬ್ಬಂದಿ
Kalaburagi Bus Accident: ಮೊಬೈಲ್ ಕೊಡಿಸದಿದ್ದಕ್ಕೆ ಹೆತ್ತ ತಾಯಿಯನ್ನೇ ಮಗ ಕೊಂದಿರುವಂತಹ ಘಟನೆ ನಗರದ ಬೇಗೂರಿನ ಮೈಲಸಂದ್ರದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ.
ಕಲಬುರಗಿ: ಅಪಘಾತಕ್ಕೀಡಾಗಿ ಪಲ್ಟಿಯಾದ ಖಾಸಗಿ ಬಸ್ ಹೊತ್ತಿ ಉರಿದಿದ್ದು, ಐವರ ಮೃತದೇಹvನ್ನು ರಕ್ಷಣಾ ಸಿಬ್ಬಂದಿ ಪತ್ತೆ ಹಚ್ಚಿರುವಂತಹ ಘಟನೆ ಜಿಲ್ಲೆಯ ಕಮಲಾಪುರ ಹೊರವಲಯದಲ್ಲಿ ನಡೆದಿದೆ. ಗೋವಾದಿಂದ ಖಾಸಗಿ ಬಸ್ ಹೈದ್ರಾಬಾದ್ಗೆ ಹೋಗುತ್ತಿದ್ದಾ ಅಪಘಾತ ಸಂಭವಿಸಿದ್ದು, ಗಾಯಗೊಂಡಿದ್ದ ಹನ್ನೆರಡು ಜನರ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಯಿತು. ದುರಂತಕ್ಕೀಡಾದ ಬಸ್ನಲ್ಲಿ 35 ಜನ ಪ್ರಯಾಣಿಸುತ್ತಿದ್ದು, 12 ಜನರಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಬಸ್ ಸಿಬ್ಬಂದಿಯನ್ನು ಕಲಬುರಗಿ ಪೊಲೀಸರು ಸಂಪರ್ಕಿಸಿದ್ದು, ಓರ್ವ ವ್ಯಕ್ತಿ ಹೆಸರಿನಲ್ಲಿ 30 ಸೀಟ್ ಬುಕ್ ಮಾಡಲಾಗಿತ್ತು. ಒಂದೇ ಕುಟುಂಬದ ಅನೇಕರು ಹೆಚ್ಚಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ತಮ್ಮವರು ಕಣ್ಮುಂದೆ ಸಜೀವ ದಹನವಾಗುವುದನ್ನು ಕಂಡು ಸಹ ಪ್ರಯಾಣಿಕರು ಕಣ್ಣೀರಧಾರೆ ಹರಿಸಿದ್ದಾರೆ.
AR_02_5472 ಅರುಣಾಚಲ್ ಪಾಸಿಂಗ್ ಇರೋ ಬಸ್ ಇದಾಗಿದ್ದು, 25.10.2023 ರವರಗೆ ಪಿಟ್ನಸ್ ಸರ್ಟಿಫಿಕೇಟ್ ಹೊಂದಿದೆ. 21.10.2022 ರವರಗೆ ವಿಮಾ ಭದ್ರತೆ ಇದೆ. 30.9.2023 ರವರಗೆ ಆಲ್ ಇಂಡಿಯಾ ಪರ್ಮಿಟ್ ಬಸ್ ಹೊಂದಿದೆ. ತೆಲಂಗಾಣ ಸಾರಿಗೆ ಸಚಿವರಿಂದ ಕಲಬುರಗಿ ಪೊಲೀಸ್ರಿಗೆ ಕರೆ ಮಾಡಿದ್ದು ಮಾಹಿತಿ ಪಡೆದಿದ್ದಾರೆ.
ಮೊಬೈಲ್ ಕೊಡಿಸದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಮಗ
ಬೆಂಗಳೂರು; ಮೊಬೈಲ್ ಕೊಡಿಸದಿದ್ದಕ್ಕೆ ಹೆತ್ತ ತಾಯಿಯನ್ನೇ ಮಗ ಕೊಂದಿರುವಂತಹ ಘಟನೆ ನಗರದ ಬೇಗೂರಿನ ಮೈಲಸಂದ್ರದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. ತಾಯಿ ಫಾತಿಮಾ ಮೇರಿಯನ್ನು ಕತ್ತುಹಿಸುಕಿ ದೀಪಕ್ ಹತ್ಯೆಗೈದಿದ್ದಾನೆ. ಕಳೆದ 1 ವಾರದಿಂದ ಮೊಬೈಲ್ ಕೊಡಿಸುವಂತೆ ಒತ್ತಾಯಿಸುತ್ತಿದ್ದ. ನಿನ್ನೆ ಕೂಡ ಮೊಬೈಲ್ ಕೊಡಿಸುವಂತೆ ತಾಯಿ ಜತೆ ಜಗಳವಾಡಿದ್ದ. ದುಡ್ಡಿಲ್ಲವೆಂದು ಮೊಬೈಲ್ ಕೊಡಿಸಲು ನಿರಾಕರಿಸಿದ್ದ ತಾಯಿ ಫಾತಿಮಾ ಮೇರಿ, ಕುಪಿತಗೊಂಡು ಪುತ್ರ ದೀಪಕ್ನಿಂದ ಕತ್ತು ಹಿಸುಕಿ ತಾಯಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಹೇಳಿಕೆ ನೀಡಿದ್ದು, ಮೇ 1ರಂದು ಕೊಲೆಯಾಗಿರುವ ಬಗ್ಗೆ ಠಾಣೆಗೆ ಮಾಹಿತಿ ಬಂದಿತ್ತು. ತನಿಖೆ ಬಳಿಕ 50 ವರ್ಷದ ಮಹಿಳೆ ಕೊಲೆಯಾಗಿರೋದು ಗೊತ್ತಾಗಿದೆ. ತನಿಖೆ ವೇಳೆ ಪುತ್ರನೇ ಫಾತಿಮಾಳನ್ನು ಕೊಂದ ಬಗ್ಗೆ ತಿಳಿದು ಬಂದಿದೆ. ತಾಯಿಯನ್ನ ಕೊಲೆಗೈದು 700 ರೂಪಾಯಿ ತೆಗೆದುಕೊಂಡು ಹೋಗಿದ್ದ. ಸದ್ಯ ಆರೋಪಿ ದೀಪಕ್ನನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದರು.
ಮದುವೆಗೆ ಹೆಣ್ಣು ಸಿಗದಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ
ಬೆಳಗಾವಿ: ಮದುವೆಗೆ ಹೆಣ್ಣು ಸಿಗದಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕರಗುಪ್ಪಿ ಯಲ್ಲಾಪುರ ಗ್ರಾಮದಲ್ಲಿ ನಡೆದಿದೆ. ರಮೇಶ ಬಾಳಪ್ಪ ಪಾಟೀಲ್(25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಮೇಶ್ ಸೇರಿ ಮೂವರು ಸೋದರರಿಗೆ ಹೆಣ್ಣು ಸಿಗದಿದ್ದರಿಂದ ಬೇಸರಗೊಂಡಿದ್ದ. ಹಲವು ವರ್ಷಗಳಿಂದ ಹೆಣ್ಣು ಹುಡುಕಿ ಬೇಸತ್ತಿದ್ದ ರಮೇಶ್ ಬಾಳಪ್ಪ, ವಿವಾಹವಾಗಲು ಹೆಣ್ಣು ಸಿಗ್ತಿಲ್ಲವೆಂದು ಖಿನ್ನತೆಗೆ ಒಳಗಾಗಿದ್ದ. ತಮ್ಮ ತೋಟದಲ್ಲಿ ಮಾವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಕಳ್ಳರ ಬಂಧನ
ಕೋಲಾರ: ದ್ವಿಚಕ್ರ ವಾಹನ ಕಳ್ಳರನ್ನು ಜಿಲ್ಲೆಯ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರಿಂದ ಬಂಧನ ಮಾಡಲಾಗಿದೆ. ಕೋಲಾರದ ಕೂತಾಂಡ್ಲಹಳ್ಳಿ ಗ್ರಾಮದ ಶಶಿಕುಮಾರ್, ಮುಳಬಾಗಿಲಿನ ಹೊನ್ನಿಕೆರೆ ಗ್ರಾಮದ ಅಂಬರೀಶ್ ಬಂಧಿತರು. ಬಂಧಿತರಿಂದ 2 ಬುಲೆಟ್ ಬೈಕ್, 1 ಪಲ್ಸರ್, 3 ಸ್ಪ್ಲೆಂಡರ್, 1 ಆಕ್ಟಿವಾ,1 ಡಿಯೋ ವಶಕ್ಕೆ ಪಡೆಯಲಾಗಿದೆ. ಮುಳಬಾಗಿಲು ಗ್ರಾಮಾಂತರ ಠಾಣೆಯ ಸಿಪಿಐ ಲಕ್ಷ್ಮೀಕಾಂತ್ ತಂಡದಿಂದ ಕಾರ್ಯಾಚರಣೆ ಮಾಡಿ ಕಳ್ಳರ ಬಂಧನ ಮಾಡಲಾಗಿದೆ.
ಹಣಕಾಸಿನ ವಿಚಾರಕ್ಕೆ ಸ್ನೇಹಿತರಿಬ್ಬರ ನಡೆವೆ ಬಡಿದಾಟ
ನೆಲಮಂಗಲ: ಸ್ನೇಹಿತರಿಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ಬಡಿದಾಟವಾಗಿದ್ದು, ಚಾಕುವಿನಿಂದ ಇರಿಯಲು ಯತ್ನಿಸಿರುವಂತಹ ಘಟನೆ ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕೆಂಗಲ್ ಕೆಂಪೋಹಳ್ಳಿ ನಡೆದಿದೆ. ಮಂಜನ ಸ್ನೇಹಿತನ ಬಳಿ ಸ್ವಾಮಿ ಮೂರು ಸಾವಿರ ಹಣ ಪಡೆದುಕೊಂಡಿದ್ದ. ಸ್ನೇಹಿತನೊಂದಿಗೆ ಹಣ ವಾಪಸ್ ಕೇಳಲು ಆಟೋದಲ್ಲಿ ಬಂದಿದ್ದ ಮಂಜ, ಮಾತಿಗೆ ಮಾತು ಬೆಳೆದು ಸ್ವಾಮಿ ಮತ್ತು ಮಂಜನ ನಡುವೆ ಬಡಿದಾಟ ಆರಂಭವಾಗಿದೆ. ಹಣ ಹಿಂದಿರುಗಿಸದ ಸ್ವಾಮಿ ಮೇಲೆ ಚಾಕುವಿನಿಂದ ಇರಿಯಲು ಮಂಜ ಮುಂದಾಗಿದ್ದಾನೆ. ಇರಿಯಲು ಹೋಗುತ್ತಿದ್ದಂತೆ ಸ್ಥಳೀಯರು ಬಿಡಿಸಿದ್ದಾರೆ. ಒಂದು ಕ್ಷಣ ಯಾಮಾರಿದ್ರು ಸ್ವಾಮಿಯ ಪ್ರಾಣ ಹಾರುತ್ತಿತ್ತು. ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಬಂಧನ
ಬೆಂಗಳೂರು: ನಗರದಲ್ಲಿ ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಬಂಧನ ಮಾಡಿದ್ದು, 45 ಲಕ್ಷ ಮೌಲ್ಯದ 221 ಗ್ರಾಂ 586 ಎಂಡಿಎಂಎ ಮಾತ್ರೆಗಳು, ಟೊಯೋಟಾ ಕಾರು, 2 ಮೊಬೈಲ್ ಜಪ್ತಿ ಮಾಡಲಾಗಿದೆ. ಕ್ಲಿಂಟನ್ ಕೋಸಿ ಇಫೆಜಿಕಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಾರತ್ತಹಳ್ಳಿ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ಮಾಡುತ್ತಿದ್ದ ಕ್ಲಿಂಟನ್, ದೆಹಲಿಯಲ್ಲಿರುವ ನೈಜೀರಿಯಾ ಪ್ರಜೆಯಿಂದ ಡ್ರಗ್ಸ್ ಖರೀದಿ ಮಾಡುತ್ತಿದ್ದ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:45 am, Fri, 3 June 22