ಕಲಬುರಗಿ RPF ಕಚೇರಿ ಬಳಿ ಮಂಗನ ನೆನಪಿನಲ್ಲಿ ಕಟ್ಟಲಾದ ಬಾಲ ಹನುಮನ ಮಂದಿರ ತೆರವಿಗೆ ನಿರ್ಧಾರ; ಹಿಂದೂ ಪರ ಸಂಘಟನೆಗಳಿಂದ ಧರಣಿ

ದಶಕಗಳ ಹಿಂದೆ ನಿರ್ಮಾಣವಾಗಿದ್ದ ಬಾಲ ಹನುಮನ ಮಂದಿರ ಶಿಥಿಲಾವಸ್ಥೆ ತಲುಪಿದ್ದರಿಂದ ಮರುನಿರ್ಮಾಣ ಮಾಡಲಾಗಿದೆ. ಆದ್ರೆ ಇದೀಗ ದೇಗುಲ ತೆರವು ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಹನುಮನ ದೇವಸ್ಥಾನದ ಎದುರು ಹಿಂದೂ ಪರ ಸಂಘಟನೆಗಳು ಧರಣಿಗೆ ಮುಂದಾಗಿವೆ.

ಕಲಬುರಗಿ RPF ಕಚೇರಿ ಬಳಿ ಮಂಗನ ನೆನಪಿನಲ್ಲಿ ಕಟ್ಟಲಾದ ಬಾಲ ಹನುಮನ ಮಂದಿರ ತೆರವಿಗೆ ನಿರ್ಧಾರ; ಹಿಂದೂ ಪರ ಸಂಘಟನೆಗಳಿಂದ ಧರಣಿ
ಬಾಲ ಹನುಮನ ಮಂದಿರ ತೆರವಿಗೆ ವಿರೋಧಿಸಿ ಹಿಂದೂ ಪರ ಸಂಘಟನೆಗಳಿಂದ ಧರಣಿ
Follow us
TV9 Web
| Updated By: ಆಯೇಷಾ ಬಾನು

Updated on: Dec 31, 2022 | 8:16 AM

ಕಲಬುರಗಿ: ಕಲಬುರಗಿ ರೈಲ್ವೆ ನಿಲ್ದಾಣದ RPF ಕಚೇರಿ(RPF Office) ಬಳಿಯಿರುವ ಬಾಲ ಹನುಮನ ಮಂದಿರ(Bala Hanuman Temple) ತೆರವಿಗೆ ರೈಲ್ವೆ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ರೈಲ್ವೆ ಇಲಾಖೆ(Railway Department) ವಿರುದ್ಧ ಹಿಂದೂ ಪರ ಸಂಘಟನೆಗಳ(Pro-Hindu Organisations) ಆಕ್ರೋಶ ಹೊರ ಹಾಕಿವೆ. ದಶಕಗಳ ಹಿಂದೆ ನಿರ್ಮಾಣವಾಗಿದ್ದ ಬಾಲ ಹನುಮನ ಮಂದಿರ ಶಿಥಿಲಾವಸ್ಥೆ ತಲುಪಿದ್ದರಿಂದ ಮರುನಿರ್ಮಾಣ ಮಾಡಲಾಗಿದೆ. ಆದ್ರೆ ಇದೀಗ ದೇಗುಲ ತೆರವು ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಹನುಮನ ದೇವಸ್ಥಾನದ ಎದುರು ಹಿಂದೂ ಪರ ಸಂಘಟನೆಗಳು ಧರಣಿಗೆ ಮುಂದಾಗಿವೆ. ಹನುಮನ ದೇವಸ್ಥಾನ ತೆರವು ಮಾಡದಂತೆ ರೈಲ್ವೆ ಇಲಾಖೆಗೆ ಆಗ್ರಹಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಲಬುರಗಿ ರೈಲ್ವೆ ನಿಲ್ಧಾಣದ ಗೋಡೆಗೆ ಹಸಿರು ಬಣ್ಣ ಬಳಿದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಅಧಿಕಾರಿಗಳು, ಇದೀಗ ರೈಲ್ವೆ ನಿಲ್ದಾಣದಲ್ಲಿಯೇ ಇರುವ ಬಾಲ ಹನುಮಾನ ದೇವಸ್ಥಾನದ ಜಿರ್ಣೋದ್ದಾರ ಕೆಲಸಕ್ಕೆ ಅಡ್ಡಿ ಮಾಡಿ, ಮತ್ತೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರೈಲ್ವೆ ಇಲಾಖೆಯ ಅಧಿಕಾರಿಗಳ ಧೋರಣೆ ಖಂಡಿಸಿ, ನಿನ್ನೆಯಿಂದ ಹಿಂದೂಪರ ಸಂಘಟನೆಗಳು ರೈಲ್ವೆ ಇಲಾಖೆಯ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಆರಂಭಿಸಿವೆ.

ಏನಿದು ವಿವಾದ, ಯಾಕೆ ವಿರೋಧ?

ಕಲಬುರಗಿ ನಗರದ ರೈಲ್ವೆ ನಿಲ್ದಾಣದ ಹೊರವಲಯದಲ್ಲಿ ಆರ್​ಪಿಎಫ್ ಕಚೇರಿಯಿದ್ದು. ಅಲ್ಲಿಯೇ ಪುಟ್ಟದಾದ ಬಾಲ ಹನುಮಾನ ಮಂದಿರವಿದೆ. ಐದು ದಶಕಗಳ ಹಿಂದೆಯೇ ಪುಟ್ಟ ಮಂದಿರ ನಿರ್ಮಾಣವಾಗಿದ್ದು, ಇದೀಗ ಅದು ಹಾಳಾಗಿದ್ದರಿಂದ, ರೈಲ್ವೆ ಇಲಾಖೆಯ ಕೆಲ ಸಿಬ್ಬಂದಿ ಮತ್ತು ಸಾರ್ವಜನಿಕರು ಹೊಸದಾಗಿ ಬಾಲ ಹನುಮಾನ ಮಂದಿರ ನಿರ್ಮಾಣ ಆರಂಭಿಸಿದ್ದರು. ಆದರೆ ಪರವಾನಗಿಯನ್ನು ಪಡೆಯದೇ, ಬಾಲ ಹನುಮಾನ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಅಂತ ರೈಲ್ವೆ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೈಲ್ವೆ ಇಲಾಖೆಯ ಜಾಗದಲ್ಲಿ ಯಾವುದೇ ದೇವಸ್ಥಾನ ನಿರ್ಮಾಣ ಮಾಡಬೇಕಾದರೆ ಪರವಾನಗಿ ಪಡೆಯಬೇಕು, ಆದರೆ ದೇವಸ್ಥಾನ ನಿರ್ಮಾಣ ಮಾಡುವವರು ಯಾರಿಂದಲೂ ಪರವಾನಗಿ ಪಡೆದಿಲ್ಲಾ. ಹೀಗಾಗಿ ನಿರ್ಮಾಣ ಹಂತದಲ್ಲಿರುವ ದೇವಸ್ಥಾನವನ್ನು ತೆರವುಗೊಳಿಸೋದಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳು ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.

Bala Hanuman temple (1)

ಬಾಲ ಹನುಮನ ಮಂದಿರ

ರೈಲ್ವೆ ಇಲಾಖೆ ವಿರುದ್ದ ಹಿಂದೂ ಸಂಘಟನೆಗಳ ಕಿಡಿ

ಇನ್ನು ನಿರ್ಮಾಣ ಹಂತದ ದೇವಸ್ಥಾನವನ್ನು ತೆರವುಗೊಳಿಸೋದಾಗಿ ಹೇಳಿಕೆ ನೀಡಿದ್ದ ರೈಲ್ವೆ ಇಲಾಖೆಯ ಅಧಿಕಾರಿಗಳ ವಿರುದ್ದ ಹಿಂದೂ ಸಂಘಟನೆಗಳು ಕಿಡಿ ಕಾರಿವೆ. ನಿನ್ನೆ(ಡಿ.29) ಮಧ್ಯಾಹ್ನದಿಂದ ಸ್ಥಳದಲ್ಲಿ ಪ್ರತಿಭಟನೆ ಕೂಡಾ ನಡೆಸಿವೆ. ನಿರ್ಮಾಣ ಹಂತದ ದೇವಸ್ಥಾನವನ್ನು ತೆರವುಗೊಳಿಸಬಾರದು. ದೇವಸ್ಥಾನ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಅಲ್ಲಿ ಬಾಲ ಹನುಮಾನ ಮೂರ್ತಿಯ ಪೂಜೆಗೆ ಅವಕಾಶ ನೀಡಬೇಕು ಅಂತ ಆಗ್ರಹಿಸಿದ್ದಾರೆ.

ದೇವಸ್ಥಾನದ ಹಿನ್ನಲೆ

ಇನ್ನು ಐದು ದಶಕದ ಹಿಂದೆ, ರೈಲ್ವೆ ನಿಲ್ದಾಣದಲ್ಲಿ ಮಂಗವೊಂದು ಮೃತಪಟ್ಟಿತ್ತು. ಆಗ ಕೆಲ ಸ್ಥಳೀಯರು ಮತ್ತು ರೈಲ್ವೆ ಇಲಾಖೆಯ ಕೆಲ ಸಿಬ್ಬಂದಿ, ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ, ಆರ್​ಪಿಎಫ್ ಕಚೇರಿ ಮುಂದೆ ಮಂಗನ ಅಂತ್ಯಸಂಸ್ಕಾರ ಮಾಡಿದ್ದರು. ಜೊತೆಗೆ ಅಲ್ಲಿಯೇ ಪುಟ್ಟದಾದ ಬಾಲ ಹನುಮಾನ ಮಂದಿರ ನಿರ್ಮಾಣ ಮಾಡಿದ್ದರು. ಕಳೆದ ಐದು ದಶಕಗಳಿಂದ ಇರೋ ಪುಟ್ಟ ದೇವಸ್ಥಾನದಲ್ಲಿನ ಮೂರ್ತಿಗೆ ಪ್ರತಿನಿತ್ಯ ಅನೇಕರು ಭಕ್ತಿಯಿಂದ ನಮಸ್ಕರಿಸಿ ಹೋಗುವ ಸಂಪ್ರದಾಯವನ್ನು ಹೊಂದಿದ್ದಾರೆ. ಆದರೆ ಪುಟ್ಟ ದೇವಸ್ಥಾನ ಶಿಥಿಲಗೊಂಡಿದ್ದರಿಂದ, ಸದ್ಯ ಇರುವ ದೇವಸ್ಥಾನದ ಹಿಂಭಾಗದಲ್ಲಿಯೇ ಹೊಸದಾಗಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕರೇ ಹಣ ಸಂಗ್ರಹ ಮಾಡಿ, ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು.

ಇನ್ನು ವಿವಾದ ತೀರ್ವ ಸ್ವರೂಪ ಪಡೆಯುತ್ತಿದ್ದಂತೆ, ಎಚ್ಚೆತ್ತ ಅಧಿಕಾರಿಗಳು ಇದೀಗ ದೇವಸ್ಥಾನ ತೆರವು ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ. ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಸದ್ಯ ತೆರವು ಕಾರ್ಯಾಚರಣೆ ಮಾಡೋದಿಲ್ಲಾ. ಮೇಲಾಧಿಕಾರಿಗಳ ನಿರ್ದೇಶನದಂತೆ ನಡೆದುಕೊಳ್ಳೋದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೇ ನೀಡಿರ ಹೆಸರು ಹೇಳಲಿಚ್ಚಿಸದ ಅಧಿಕಾರಿಯೋರ್ವರು, ರೈಲ್ವೆ ಇಲಾಖೆ ಜಾಗದಲ್ಲಿ ಪರವಾನಗಿ ಪಡೆಯದೇ ದೇವಸ್ಥಾನ ನಿರ್ಮಾಣಕ್ಕೆ ಕೆಲವರು ಮುಂದಾಗಿದ್ದಾರೆ. ಹೀಗಾಗಿಯೇ ತೆರವು ಮಾಡೋದಾಗಿ ಹೇಳಲಾಗಿತ್ತು. ಆದರೆ ಇದೀಗ ಘಟನೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇನ್ನು ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಹಿಂದೂಪರ ಕಾರ್ಯಕರ್ತ ಲಕ್ಷ್ಮಿಕಾಂತ್ ಸ್ವಾದಿ, ಕಲಬುರಗಿ ರೈಲ್ವೆ ಇಲಾಖೆ ಅಧಿಕಾರಿಗಳು ಬಹುಸಂಖ್ಯಾತ ಹಿಂದುಗಳ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಈ ಹಿಂದೆ ರೈಲ್ವೆ ನಿಲ್ದಾಣಕ್ಕೆ ಹಸಿರು ಬಣ್ಣ ಬಳಿದು ಮಸೀದಿಯಂತೆ ಮಾಡಿದ್ದರು. ಇದೀಗ ದೇವಸ್ಥಾನ ತೆರವು ಮಾಡೋದಾಗಿ ಹೇಳುತ್ತಿರುವದು ಸರಿಯಲ್ಲಾ. ದೇವಸ್ಥಾನ ನಿರ್ಮಾಣಕ್ಕೆ ಯಾವುದೇ ಅಡ್ಡಿಯನ್ನುಂಟು ಮಾಡಬಾರದು.

ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕನ್ನಡ, ಕಲಬುರಗಿ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು