ಇಡಿ ದಾಳಿಯಲ್ಲಿ ಮಹದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜ್​ ಸ್ಟೈಫಂಡ್ ಹಗರಣ ಸಾಬೀತು

ಮಹದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸ್ಟೈಫಂಡ್ ಹಣದಲ್ಲಿ 81.21 ಕೋಟಿ ರೂ. ದುರುಪಯೋಗವಾಗಿದೆ ಎಂದು ಇಡಿ ದಾಳಿಯಿಂದ ಬಹಿರಂಗವಾಗಿದೆ. ಭೀಮಾಶಂಕರ್ ಬಿಲ್ಗುಂಡಿ, ಎಸ್.ಎಂ. ಪಾಟೀಲ್ ಮತ್ತು ಸುಭಾಷ್ ಜಗನ್ನಾಥ್ ಅವರ ಮೇಲೆ 282 ಪಿಜಿ ವಿದ್ಯಾರ್ಥಿಗಳ ಹಣ ದುರುಪಯೋಗಪಡಿಸಿಕೊಂಡ ಆರೋಪವಿದೆ. ಕಲಬುರಗಿಯಲ್ಲಿ 7 ಕಡೆ ದಾಳಿ ನಡೆಸಲಾಗಿದೆ. ಖಾಲಿ ಚೆಕ್‌ಗಳನ್ನು ಬಳಸಿ ಅಕ್ರಮ ನಡೆದಿದೆ ಎನ್ನಲಾಗಿದೆ.

ಇಡಿ ದಾಳಿಯಲ್ಲಿ ಮಹದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜ್​ ಸ್ಟೈಫಂಡ್ ಹಗರಣ ಸಾಬೀತು
ಭೀಮಾಶಂಕರ್ ಬಿಲ್ಗುಂಡಿ
Edited By:

Updated on: May 05, 2025 | 8:47 PM

ಬೆಂಗಳೂರು, ಮೇ 05: ಮಹದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜು (Mahadevappa Rampure Medical College) ವಿದ್ಯಾರ್ಥಿಗಳ ಸ್ಟೈಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ದಾಳಿ ವೇಳೆ 81.21 ಕೋಟಿ ರೂ. ದುರುಪಯೋಗಪಡಿಸಿಕೊಂಡಿದ್ದು ಸಾಬೀತಾಗಿದೆ. ಬಿಲ್ಗುಂಡಿ, ಎಸ್ ಎಂ ಪಾಟೀಲ್, ಸುಭಾಷ್ ಜಗನ್ನಾಥ್ ಅವರು 282 ಪಿಜಿ ವಿದ್ಯಾರ್ಥಿಗಳ 81.21 ಕೋಟಿ ರೂ. ಹಣವನ್ನು ದುರುಪಯೋಗ ಪಡಿಸಕೊಂಡಿರುವುದು ಇಡಿ ತನಿಖೆ ವೇಳೆ ತಿಳಿದುಬಂದಿದೆ.

ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕಲಬುರಗಿಯ 7 ಕಡೆ ದಾಳಿ ನಡೆಸಿದ್ದರು. ಹೆಚ್​ಕೆಇ ಮಾಜಿ ಅಧ್ಯಕ್ಷ ಭೀಮಾಶಂಕರ್ ಬಿಲ್ಗುಂಡಿ, ಎಮ್​ಆರ್​ಎಮ್​ಸಿ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಎಸ್ ಎಂ ಪಟೇಲ್, ಲೆಕ್ಕಪರಿಶೋಧಕ ಸುಭಾಷ್ ಚಂದ್ರ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು.

ಏನಿದು ಪ್ರಕರಣ?

2018 ರಿಂದ 2024 ರ ವರೆಗೆ ಹೈದರಾಬಾದ್ ಶಿಕ್ಷಣ ಸಂಸ್ಥೆಯ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಭೀಮಾಶಂಕರ್ ಬಿಲಗುಂದಿ ವಿರುದ್ಧ ಎಂಆರ್​ಎಂಸಿ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸ್ಟೈಫಂಡ್ ಹಗರಣ ಆರೋಪ ಕೇಳಿಬಂದಿತ್ತು. 700 ಜನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸುಮಾರು 80 ಕೋಟಿ ರೂ. ಅಧಿಕ ಹಣ ನೀಡದೆ ವಂಚನೆ ಮಾಡಿರುವ ಆರೋಪ ಇವರ ಮೇಲೆ ಕೇಳಿಬಂದಿತ್ತು. ಕಳೆದ ವರ್ಷ ಸುಮಾರು 400ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಸ್ಟೈಫಂಡ್ ಹಣ ನೀಡದೆ ವಂಚಿಸಿದ್ದ ಬಗ್ಗೆ ಟಿವಿ9 ವರದಿ ಮಾಡಿತ್ತು.

ಇದನ್ನೂ ಓದಿ: ಕಲಬುರಗಿ ಕಾಂಗ್ರೆಸ್ ಮುಖಂಡ, HKE ಮಾಜಿ ಅಧ್ಯಕ್ಷನ ಮೇಲೆ ಇಡಿ ದಾಳಿ

ವೈದ್ಯಕೀಯ ವಿದ್ಯಾರ್ಥಿಗಳಿಂದ ಖಾಲಿ ಚೆಕ್​ಗೆ ಸಹಿ ಮಾಡಿಸಿಕೊಂಡು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿಗಳಿಗೆ ಹಣ ಜಮೆ ಆಗ್ತಿದ್ದಂತೆ ಚೆಕ್​ಗಳನ್ನು ಬಳಸಿ ಆರೋಪಿಗಳು ರೀಫಂಡ್ ಮಾಡಿಕೊಳುತ್ತಿದ್ದರು. ಅಕ್ರಮದ ಬಗ್ಗೆ ಕಲಬುರಗಿಯ ಸಿಇಎನ್​ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಈ ಎಫ್​ಐಆರ್ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ