ED Raid: ಕಲಬುರಗಿ ಕಾಂಗ್ರೆಸ್ ಮುಖಂಡ, HKE ಮಾಜಿ ಅಧ್ಯಕ್ಷನ ಮೇಲೆ ಇಡಿ ದಾಳಿ
ಕಲಬುರಗಿ ಜಿಲ್ಲಾ ಕಾಂಗ್ರೆಸ್ ಮುಖಂಡನ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಾಲ್ವರು ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಎಂಆರ್ ಎಂ ಸಿ ಮೇಡಿಕಲ್ ಕಾಲೇಜ್ ಶಿಷ್ಯವೇತನ ಹಗರಣ ಸಂಬಂಧ ಇಡಿ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.

ಕಲಬುರಗಿ, (ಏಪ್ರಿಲ್ 30): ಹೆಚ್ಕೆಇ ಸೊಸೈಟಿಯ (Hyderabad Karnataka Education Society) ಮಾಜಿ ಅಧ್ಯಕ್ಷ, ಕಲಬುರಗಿ ಕಾಂಗ್ರೆಸ್ (Kalaburagi Congress) ಮುಖಂಡ ಭೀಮಾಶಂಕರ್ ಬಿಲಗುಂದಿ (Bhimashankar C Bilgundi) ನಿವಾಸದಲ್ಲಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಂದು (ಏಪ್ರಿಲ್ 30) ನಾಲ್ವರು ಅಧಿಕಾರಿಗಳ ತಂಡ ಏಕಕಾಲಕ್ಕೆ ಕಲಬುರಗಿಯ ರಿಂಗ್ ರೋಡ್ ಬಳಿಯಿರುವ ಭೀಮಾಶಂಕರ್ ಬಿಲಗುಂದಿ ಅವರ ಮನೆ ಮೇಲೆ ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಎಂಆರ್ ಎಂ ಸಿ ಮೇಡಿಕಲ್ ಕಾಲೇಜಿನ 700 ಜನ ಎಂಬಿಬಿಎಸ್ ವಿದ್ಯಾರ್ಥಿಗಳ ಶಿಷ್ಯವೇತನ(ಸ್ಕಾಲರ್ಶಿಪ್) ಹಗರಣ ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
2018 ರಿಂದ 2024 ರ ವರೆಗೆ ಹೈದರಾಬಾದ್ ಶಿಕ್ಷಣ ಸಂಸ್ಥೆಯ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಭೀಮಾಶಂಕರ್ ಬಿಲಗುಂದಿ ವಿರುದ್ಧ ಎಂಆರ್ ಎಂ ಸಿ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಶಿಷ್ಯವೇತನ ಹಗರಣ ಆರೋಪ ಕೇಳಿಬಂದಿತ್ತು. 700 ಜನ ಎಂಬಿಬಿಎಸ್ ವಿದ್ಯಾರ್ಥಿಗಳ ಸುಮಾರು 80 ಕೋಟಿ ರೂ. ಅಧಿಕ ಹಣ ನೀಡದೆ ವಂಚನೆ ಮಾಡಿರುವ ಆರೋಪ ಇವರ ಮೇಲೆ ಕೇಳಿಬಂದಿತ್ತು. ಕಳೆದ ವರ್ಷ ಸುಮಾರು 400ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಣ ನೀಡದೇ ವಂಚಿಸಿದ್ದ ಬಗ್ಗೆ ಟಿವಿ9 ವರದಿ ಮಾಡಿತ್ತು. ಸದ್ಯ ಅದೇ ಹಗರಣದ ಹಣಕಾಸಿನ ಅವ್ಯವಹಾರದ ಬಗ್ಗೆ ಇಡಿ ಅಧಿಕಾರಿಗಳು ದಾಳಿ ಮಾಡಿರಬಹುದು ಎನ್ನಲಾಗಿದೆ.
Published On - 3:36 pm, Wed, 30 April 25