ಬಸವಕಲ್ಯಾಣದ ಮೂಲ ಅನುಭವ ಮಂಟಪಕ್ಕಾಗಿ ಜೂನ್ 12ರಂದು ಪ್ರತಿಭಟನೆ; ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ

| Updated By: sandhya thejappa

Updated on: May 30, 2022 | 9:03 AM

ಬಸವಣ್ಣನವರು ಮುಸ್ಲಿಂ ಮತದಿಂದ ಬಂದು ಧರ್ಮ ಸ್ಥಾಪಿಸಿದ್ದಾರಾ? ಶೈವ ಬ್ರಾಹ್ಮಣ ಸಮಾಜದಿಂದ ಬಂದು ಧರ್ಮ ಸ್ಥಾಪಿಸಿದ್ದಾರಾ? ಎಂದು ಪ್ರಶ್ನಿಸಿರುವ ಸಿದ್ದಲಿಂಗಶ್ರೀ, ಮುಸ್ಲಿಮರ ಕೃತ್ಯ, ಆಚರಣೆಗಳು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿವೆ.

ಬಸವಕಲ್ಯಾಣದ ಮೂಲ ಅನುಭವ ಮಂಟಪಕ್ಕಾಗಿ ಜೂನ್ 12ರಂದು ಪ್ರತಿಭಟನೆ; ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ
ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ
Follow us on

ಕಲಬುರಗಿ: ಬಸವಕಲ್ಯಾಣದ ಮೂಲ ಅನುಭವ ಮಂಟಪಕ್ಕಾಗಿ (Anubhava Mantapa) ಜೂನ್ 12ರಂದು ವಿವಿಧ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ (Siddalinga Shree) ಹೇಳಿಕೆ ನೀಡಿದ್ದಾರೆ. ಮಾತೆ ಮಹಾದೇವಿ ಪರಂಪರೆಯ ಓರ್ವ ಸ್ವಾಮೀಜಿ ಅಪಸ್ವರ ಎತ್ತಿದ್ದಾರೆ. ಲಿಂಗಾಯತ-ಮುಸ್ಲಿಮರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವೀರಶೈವ ಮಠಾಧೀಶರ ಹೋರಾಟ ತಮಗೆ ಸಂಬಂಧವಿಲ್ಲ ಅಂದಿದ್ದಾರೆ. ಅನುಭವ ಮಂಟಪಕ್ಕಾಗಿ ಹೋರಾಟದ ಅವಶ್ಯಕತೆ ಅವರಿಗೆ ಇಲ್ಲ. ಯಾವ ಆಧಾರದಲ್ಲಿ ಅಣ್ಣತಮ್ಮಂದಿರು ಅಂತಾ ಹೇಳಿದ್ದೀರಿ ಅಂತ ಸ್ಪಷ್ಟಪಡಿಸಿ ಎಂದು ಸಿದ್ದಲಿಂಗಶ್ರೀ ಆಗ್ರಹಿಸಿದ್ದಾರೆ.

ಬಸವಣ್ಣನವರು ಮುಸ್ಲಿಂ ಮತದಿಂದ ಬಂದು ಧರ್ಮ ಸ್ಥಾಪಿಸಿದ್ದಾರಾ? ಶೈವ ಬ್ರಾಹ್ಮಣ ಸಮಾಜದಿಂದ ಬಂದು ಧರ್ಮ ಸ್ಥಾಪಿಸಿದ್ದಾರಾ? ಎಂದು ಪ್ರಶ್ನಿಸಿರುವ ಸಿದ್ದಲಿಂಗಶ್ರೀ, ಮುಸ್ಲಿಮರ ಕೃತ್ಯ, ಆಚರಣೆಗಳು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿವೆ. ದಯವೇ ಧರ್ಮದ ಮೂಲವಯ್ಯಾ, ದಯೆವಿರಲಿ ಸಕಲ ಪ್ರಾಣಿಗಳಲ್ಲಿ ಅಂತ 12ನೇ ಶತಮಾನದಲ್ಲೇ ಜಗಜ್ಯೋತಿ ಬಸವೇಶ್ವರರು ಹೇಳಿದ್ದಾರೆ. ಆದರೆ ಮುಸಲ್ಮಾನರು ಎಲ್ಲಾ ಪ್ರಾಣಿಗಳನ್ನು ಕೊಂದು ತಿನ್ನುತ್ತಾರೆ. ಮುಸ್ಲಿಂ ಧರ್ಮದಲ್ಲಿ ಯಾವುದೇ ದಯವೇ ಇಲ್ಲ ಎಂದರು.

ಇದನ್ನೂ ಓದಿ: ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ ಪ್ರಕರಣ: ಪ್ರಿನ್ಸಿಪಾಲ್, ಪಿಎಸ್ಐ ಮತ್ತು ಐವರು ಕಾನ್ಸ್‌ಟೇಬಲ್​ಗಳು ಸೇರಿ 7 ಜನರ ವಿರುದ್ಧ ಎಫ್​ಐಆರ್​ ದಾಖಲು

ಇದನ್ನೂ ಓದಿ
Weight Loss: ದೇಹದ ತೂಕ ಇಳಿಸಲು ಈ ಅಭ್ಯಾಸವನ್ನು ರೂಢಿಸಿಕೊಳ್ಳಿ
ಉತ್ತರ ಪ್ರದೇಶದ ಲಖೀಂಪುರ ಖೇರಿ ಬಳಿ ಅಪಘಾತ ಪ್ರಕರಣ; ಮಧ್ಯಾಹ್ನ 3 ಗಂಟೆಗೆ ಬೀದರ್ ತಲುಪಲಿದೆ 8 ಮೃತದೇಹಗಳು
Trending: ಲೈಂಗಿಕ ವರ್ಧಕ ಕಾಫಿ ಸೇವಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲು! ಏನಿದು ಕಾಫಿ? ಸೇವನೆಯ ಅಡ್ಡ ಪರಿಣಾಮಗಳು ಇಲ್ಲಿವೆ ನೋಡಿ
ವಕ್ಫ್ ಬೋರ್ಡ್ ಸಮಸ್ಯೆ ಬಗೆಹರಿಸಲು 30 ವರ್ಷ ಬೇಕು; ಕಲಬುರಗಿಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಪ್ರತಿಕ್ರಿಯೆ

ಪೀರ್ ಪಾಷಾ ದರ್ಗಾದಲ್ಲಿ ಮೂಲ ಅನುಭವ ಮಂಟಪ ವಿವಾದಕ್ಕೆ ವಿಭಿನ್ನ ಹೇಳಿಕೆ;

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪೀರ್ ಪಾಷಾ ದರ್ಗಾದಲ್ಲೇ ಮೂಲ ಅನುಭವ ಮಂಟಪ ಇರುವ ವಿಚಾರಕ್ಕೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಬಸವಕಲ್ಯಾಣ ‌ಶಾಸಕ ಶರಣು ಸಲಗರ ಪೀರ್ ಪಾಷಾ ದರ್ಗಾದಲ್ಲಿಯೇ ಮೂಲ ಅನುಭವ ಮಂಟಪ ಇದೆ ಎನ್ನುತ್ತಾರೆ. ಆದರೆ ಬಸವಕಲ್ಯಾಣ ಅನುಭವ ಮಂಟಪದ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿಕೆಯೇ ಬೇರೆಯಾಗಿದೆ. ಶೈವ ಪರಂಪರೆ ಕಟ್ಟಡದ ರೂಪದಲ್ಲಿ ಪೀರ್ ಪಾಷಾ ದರ್ಗಾ ಇದೆ. ಮೂಲ ಅನುಭವ ಮಂಟಪ ಪೀರ್ ಪಾಷಾ ದರ್ಗಾ ಆಗಿದೆ. ಜಿಲ್ಲೆಯ ಬಹಳಷ್ಟು ಜನರ ಹೇಳುತ್ತಾರೆ. ಮಠಾಧೀಶರು ಜನರು ಹೇಳಿಕೆ ಒಂದೆ ಆಗಿದೆ ಪೀರ್ ಪಾಷಾ ದರ್ಗಾದಲ್ಲೆ ಅನುಭವ ಮಂಟಪ ಆಗಬೇಕೆಂದು ಬೆಂಬಲವಿದೆ ಎಂದು ಶಾಸಕರು ಹೇಳಿದರು.

ಬಸವಣ್ಣನವರು ಸ್ಥಾವರಕ್ಕೆ ಮಹತ್ವ ಕೊಟ್ಟಿರಲಿಲ್ಲ. ಹೀಗಾಗಿ ಅನುಭವ ಮಂಟಪ ಸಾಧಾರಣ ಕಟ್ಟಡವಾಗಿರಬಹುದು ಎಂದು ಹೇಳಿಕೆ ನೀಡಿರುವ ಬಸವಲಿಂಗ ಪಟ್ಟದೇವರು, ಅನುಭವ ಮಂಟಪ ಹಂಚಿನ‌ ಮನೆಯಾಗಿರಬಹುದು ಇಲ್ಲಾ ಸಾಧಾರಣ ಕಟ್ಟಡವಿರಬಹುದು. ಪೀರಾ ಪಾಷಾ ದರ್ಗಾದಲ್ಲೇ ಅನುಭವ ಮಂಟಪ ಇತ್ತು ಅನ್ನೊದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆದರೆ ಇತಿಹಾಸಕಾರರು ‌ಸಂಶೋಧಕರು ಇದರ ಬಗ್ಗೆ ಸಂಶೋಧನೆ ಮಾಡಿದರೆ ಗೊತ್ತಾಗುತ್ತದೆ ಎಂದಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 am, Mon, 30 May 22