Updated on: May 30, 2022 | 8:30 AM
ಬಿಸಿ ನೀರು: ಬೆಳಿಗ್ಗೆ ಎದ್ದ ತಕ್ಷಣ ಒಂದು ದೊಡ್ಡ ಲೋಟದಲ್ಲಿ ಬಿಸಿ ನೀರು ತೆಗೆದುಕೊಳ್ಳಿ. ಅದಕ್ಕೆ ನಿಂಬೆ ರಸ ಹಾಕಿ. ಜೇನುತುಪ್ಪ ಕೂಡಾ ಹಾಕಿ ಕುಡಿಯಬಹುದು. ಪ್ರತಿನಿತ್ಯ ಹೀಗೆ ಮಾಡಿದರೆ. ತೂಕ ಕಡಿಮೆಯಾಗುತ್ತದೆ.
ವ್ಯಾಯಾಮ: ದಿನಕ್ಕೆ ಕನಿಷ್ಠ ಅರ್ಧ ಗಂಟೆ ಸಮಯ ವ್ಯಾಯಾಮ ಮಾಡಿ. ಇದು ಒಳ್ಳೆಯ ಅಭ್ಯಾಸ. ಆರೋಗ್ಯಕ್ಕೂ ಒಳ್ಳೆಯದು.
ಹಣ್ಣು ಅಥವಾ ತರಕಾರಿ: ಹಸಿವಾದಾಗ ಜಂಕ್ ಫುಡ್ ತಿನ್ನುವ ಬದಲು ಹಣ್ಣು ಅಥವಾ ತರಕಾರಿ ಸೇವಿಸಿ. ಅಥವಾ ಅದರ ಜ್ಯೂಸ್ ಕುಡಿಯಿರಿ.
ರಾತ್ರಿ ಊಟ: ರಾತ್ರಿ ಊಟ ಮಿತವಾಗಿರಲಿ. ಒಂದು ಚಪಾತಿ ಜೊತೆಗೆ ತರಕಾರಿ ಅಥವಾ ಹಣ್ಣು ಸೇವಿಸಿ.
ನೀರು: ಮನುಷ್ಯ ದಿನಕ್ಕೆ ಕನಿಷ್ಠ 3ರಿಂದ 4 ಲೀಟರ್ ನೀರು ಕುಡಿಯಬೇಕು. ನೀರು ಕುಡಿದರೆ ಅರೋಗ್ಯಕ್ಕೂ ಒಳ್ಳೆಯದು.