Temple Tour: ರೋಗ ರುಜಿನ ದೂರ ಮಾಡುವ ಹನುಮಂತರಾಯ

ದೇವಾಲಯಕ್ಕೆ ಅಂತದ್ದೊಂದು ಐತಿಹ್ಯ ಬಂದಿದ್ದು ಹೇಗೆ ಅನ್ನೋದನ್ನ ಆನಂತರ ಹೇಳ್ತೀವಿ. ಅದಕ್ಕೂ ಮೊದಲು ಈ ದೇವಾಲಯದ ಪ್ರತೀತಿಯ ಬಗ್ಗೆ ನಿಮಗೆ ಹೇಳಲೇಬೇಕಿದೆ.

ಹನುಮನನ್ನ ಭಕ್ತಿ ಭಾವದಿಂದ ಪೂಜಿಸುವ ಸಾಕಷ್ಟ ಮಂದಿ ಭಕ್ತರು ಜಗತ್ತಿನ ಎಲ್ಲಾ ಕಡೆಯಲ್ಲೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಕೋರಂಟಿ ಹನುಮ ದೇವಾಲಯದ ಮಹಿಮೆಯನ್ನ, ಆ ದೇಗುಲದ ವಿಶೇಷತೆಯನ್ನ ನೀವು ತಿಳಿಯಿರಿ. ಕೊರೊನಾ ಬಂದ ಮೇಲೆ ಎಲ್ಲರ ಬಾಯಲ್ಲಿ ಇದೀಗ ಕ್ವಾರಂಟೈನ್ ಅನ್ನೋ ಶಬ್ದ ಹೆಚ್ಚು ಓಡಾಡ್ತಿದೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಈ ಪದ ದಶಕಗಳ ಹಿಂದೆಯೇ ಚಾಲ್ತಿಯಲ್ಲಿತ್ತು. ಅದಕ್ಕೆ ಮೂಲ ಕಾರಣವೇ ಕಲಬುರಗಿಯಲ್ಲಿರುವ ಕೋರಂಟಿ ಹನುಮ ದೇವಾಲಯ. ಈ ಕ್ವಾರಂಟೈನ್ ಬದಲಾಗಿ ಜನರು ಅದನ್ನು ಕೋರಂಟಿ ಅಂತ ಮಾಡಿಕೊಂಡಿದ್ದಾರೆ. ದೇವಾಲಯಕ್ಕೆ ಅಂತದ್ದೊಂದು ಐತಿಹ್ಯ ಬಂದಿದ್ದು ಹೇಗೆ ಅನ್ನೋದನ್ನ ಆನಂತರ ಹೇಳ್ತೀವಿ. ಅದಕ್ಕೂ ಮೊದಲು ಈ ದೇವಾಲಯದ ಪ್ರತೀತಿಯ ಬಗ್ಗೆ ನಿಮಗೆ ಹೇಳಲೇಬೇಕಿದೆ. ಛತ್ರಪತಿ ಶಿವಾಜಿ ಆಸ್ಥಾನದಲ್ಲಿ ರಾಜ ಗುರುವಾಗಿದ್ದ ರಾಮದಾಸರಿಂದ ಸ್ಥಾಪಿತವಾದ ದೇವಸ್ಥಾನವಿದು. ಕೋರಂಟಿ ಹನುಮಾನ, ಉದ್ಭವ ಮೂರ್ತಿ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ ಭಜರಂಗಿ ಇವನು. ರೋಗ ರುಜಿನಗಳನ್ನು ನಿವಾರಿಸುವ ಹನುಮಂತ ಬರುವ ಭಕ್ತರಿಗೆ ಶಾಂತಿ, ಸಮೃದ್ಧಿ ದೊರೆಯುವದೆಂಬ ನಂಬಿಕೆ ಭಕ್ತರದ್ದು.

Click on your DTH Provider to Add TV9 Kannada