AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಸಬ್ಸಿಡಿ ಹಣದ ಆಸೆಗೆ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ ಕಳೆದುಕೊಂಡ ಉದ್ಯಮಿ

ಕಲಬುರಗಿಯಲ್ಲಿ ಉದ್ಯಮಿಯೊಬ್ಬರಿಗೆ ಕೇಂದ್ರ ಸರ್ಕಾರದ ಸಬ್ಸಿಡಿ ಹಣದ ಆಸೆ ತೋರಿಸಿ ವಂಚಿಸಲಾಗಿದೆ. ಖತರ್ನಾಕ್​ ಗ್ಯಾಂಗ್​ ಮಾತು ನಂಬಿ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಯನ್ನ ಬ್ಯಾಂಕ್​ನಲ್ಲಿ ಅಡವಿಟ್ಟಿದ್ದ ಕುಟುಂಬ ಬೀದಿಗೆ ಬಂದಿದ್ದು, ವಂಚನೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಶಾಮೀಲಾತಿಯ ಬಗ್ಗೆಯೂ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಲಬುರಗಿ: ಸಬ್ಸಿಡಿ ಹಣದ ಆಸೆಗೆ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ ಕಳೆದುಕೊಂಡ ಉದ್ಯಮಿ
ಆಸ್ತಿ ಸೀಜ್​ ಮಾಡಿರುವ ಬ್ಯಾಂಕ್​
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಪ್ರಸನ್ನ ಹೆಗಡೆ|

Updated on:Nov 02, 2025 | 7:26 AM

Share

ಕಲಬುರಗಿ, ನವೆಂಬರ್​ 02: ಕೇಂದ್ರ ಸರ್ಕಾರದ ಸಬ್ಸಿಡಿ ಹಣದ ಆಸೆ ತೋರಿಸಿ ಉದ್ಯಮಿಯೋರ್ವರಿಗೆ ಖತರ್ನಾಕ್​ ಗ್ಯಾಂಗ್​ ವಂಚಿಸಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಐನಾತಿ ಗ್ಯಾಂಗ್​ ಮಾತು ನಂಬಿ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಯನ್ನ ಬ್ಯಾಂಕ್​ಗೆ ಶ್ಯೂರಿಟಿಯಾಗಿ ಅಡವಿಟ್ಟಿದ್ದ ಉದ್ಯಮಿ ಈಗ ಬೀದಿಗೆ ಬಂದಿದ್ದು, ಅತ್ತ ಹಣ ಕೈಸೇರುತ್ತಿದ್ದಂತೆ ಆರೋಪಿಗಳು ಎಸ್ಕೇಪ್​ ಆಗಿದ್ದಾರೆ.

ಘಟನೆ ಏನು?

ಕಲಬುರಗಿ ನಗರದ ಸುಪರ್ ಮಾರ್ಕೆಟ್ ಏರಿಯಾದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಜಾಗ ಹೊಂದಿದ್ದ ಉದ್ಯಮಿ ಬಸವರಾಜ ಮರತೂರು ಅವರಿಗೆ ಏಳು ಜನರ ಗ್ಯಾಂಗ್​  ಕೇಂದ್ರ ಸರ್ಕಾರದ ಸಬ್ಸಿಡಿ ಆಸೆ ತೋರಿಸಿತ್ತು. ಟೆಕ್ಸ್​ಟೈಲ್​ ಉದ್ಯಮಕ್ಕೆ ಸರ್ಕಾರ ಶೇ. 90ರಷ್ಟು ಸಬ್ಸಿಡಿ ಕೊಡುತ್ತೆ. ಹೀಗಾಗಿ ನಿಮ್ಮ ಜಾಗದಲ್ಲಿ ಉದ್ಯಮ ಮಾಡೋಣ ಅಂತ ನಂಬಿಸಿತ್ತು. ಇವರ ಮಾತು ನಂಬಿ ಬಸವರಾಜ ತಮ್ಮ ಕೋಟಿ ಕೋಟಿ ಬೆಲೆಯ ಆಸ್ತಿಯನ್ನ ಬ್ಯಾಂಕ್​ಗೆ ಶ್ಯೂರಿಟಿಯಾಗಿ ಅಡವಿಟ್ಟು ಬರೋಬ್ಬರಿ 3.35 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಅತ್ತ ಬ್ಯಾಂಕ್​ನಿಂದ ಹಣ ಬರುತ್ತಿದ್ದಂತೆ ಆರೋಪಿಗಳಾದ ಶರಣಬಸಪ್ಪ ಪಾಟೀಲ್ ,ಚಂದ್ರಕಲಾ, ಕಿರಣ್, ವಿಜಯಲಕ್ಷ್ಮೀ ಸೇರಿದಂತೆ ಏಳು ಜನ ಎಸ್ಕೇಪ್​ ಆಗಿದ್ದಾರೆ. ಇತ್ತ ಪಡೆದ ಸಾಲ ಮರುಪಾವತಿ ಮಾಡದ ಕಾರಣ ಬಸವರಾಜ ಅವರ ಆಸ್ತಿಯನ್ನ ಬ್ಯಾಂಕ್​ ಸೀಜ್​ ಮಾಡಿದ್ದು, ಹರಾಜಿಗೂ ಮುಂದಾಗಿದೆ.

ಇದನ್ನೂ ಓದಿ: ಆಳಂದ ಕ್ಷೇತ್ರದಲ್ಲಿ ಮತಗಳ್ಳತನ: ಬಂಧನ ಭೀತಿಯಿಂದ ಪಾರಾದ ಬಿಜೆಪಿ ಮಾಜಿ ಶಾಸಕ

ಘಟನೆ ಸಂಬಂಧ ಮೋಸ ಹೋಗಿರುವ ಉದ್ಯಮಿ ಬಸವರಾಜ ಕುಟುಂಬ ಬ್ಯಾಂಕ್​ ಅಧಿಕಾರಿಗಳ ವಿರುದ್ಧವೂ ಆರೋಪ ಮಾಡಿದೆ. ಈ ವಂಚನೆ ಕೃತ್ಯದಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಉದ್ಯಮಕ್ಕೆ ಸಾಮಗ್ರಿ ಕಳಿಸೋ ಕಂಪನಿಗೆ ಹಣ ನೀಡುವ ಬದಲು ವಂಚಕರ ಖಾತೆಗೆ ಹಣ ಹಾಕಲಾಗಿದೆ. ಅಲ್ಲದೇ, ಒಂದೇ ಒಂದು ನೋಟಿಸ್ ನೀಡದೆ ಏಕಾ ಏಕಿ ಆಸ್ತಿ ಸೀಜ್ ಮಾಡಿದ್ದಾರೆ. ಎಲ್ಲರೂ ಸೇರಿಕೊಂಡು ನಮ್ಮ ಆಸ್ತಿ ಲಪಟಾಯಿಸೋಕೆ ಪ್ಲ್ಯಾನ್​ ಮಾಡಿದ್ದಾರೆ ಎಂದು ಆರೋಪಿಸಿದೆ. ಈ ಆಸ್ತಿ ನಮ್ಮ ಕೈತಪ್ಪಿ ಹೋದರೆ ಬೀದಿಗೆ ಬಂದು ವಿಷ ಕುಡಿಯಬೇಕಾಗುತ್ತೆ ಎಂದೂ ತಿಳಿಸಿದೆ. ಬಸವರಾಜ ಅವರನ್ನ ಆರೋಗ್ಯ ಸಮಸ್ಯೆ ಕೂಡ ಕಾಡುತ್ತಿದ್ದು, ಲಿವರ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ನಡುವೆ ವಂಚನೆಯಿಂದ ಉದ್ಯಮಿ ಕುಟುಂಬಸ್ಥರು ಕಂಗಾಲಾಗಿದ್ದು, ಹೇಗಾದರೂ ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:22 am, Sun, 2 November 25

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?