ಕಲಬುರಗಿ: ನಗರದಲ್ಲೊಂದು ಮನಕಲುಕುವ ಘಟನೆ ನಡೆದಿದೆ. ಹೆತ್ತವರು ಹೀಗೂ ಮಾಡುತ್ತಾರ ಎಂಬ ಪ್ರಶ್ನೆ ಮೂಡಿಸುತ್ತದೆ. ಹೌದು ಅನಾರೋಗ್ಯದಿಂದ ಮೃತಪಟ್ಟ 4 ವರ್ಷದ ಮಗನನ್ನ ಹೆತ್ತವರು ಅಂತ್ಯಕ್ರಿಯೆ ಮಾಡದೇ ಶವವನ್ನ ರಸ್ತೆ ಪಕ್ಕದ ಗುಂಡಿಯಲ್ಲಿ ಬಿಟ್ಟು ಹೋದ ಅಮಾನುಷ ಘಟನೆ ಕಲಬುರಗಿ(Kalaburagi)ಯ ತಾರಪೈಲ್ ಬಡಾವಣೆ ಬಳಿ ನಡೆದಿದೆ. ಇದನ್ನು ನೋಡಿದ ಸ್ಥಳೀಯರು ಬಾಲಕನ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಮೃತ ಬಾಲಕನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಹುಣಸೂರಿನ ರತ್ನಪುರಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಸೈಯದ್ ಖಲೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಬೈಕ್ ಪರಿಶೀಲನೆ ವೇಳೆ ಆರೋಪಿ ಸೈಯದ್ ಪರಾರಿಯಾಗುತ್ತಿದ್ದ. ಈ ವೇಳೆ ಆತನನ್ನ ಬೆನ್ನಟ್ಟಿ ಪೊಲೀಸರು ಹಿಡಿದಿದ್ದಾರೆ. ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Koppala News: ಕಲುಷಿತ ನೀರು ಸೇವಿಸಿ ಮೂವರ ಸಾವು ಪ್ರಕರಣ; ಪಿಡಿಓ ಅಮಾನತು
ಕೋಲಾರ: ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅದರಂತೆ ಇದೀಗ ತಾಲೂಕಿನ ಧನಮಟ್ನಹಳ್ಳಿಯಲ್ಲಿ ಚಿರತೆ ಓಡಾಡುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಹೌದು ವೆಂಕಟೇಶ್ ಎಂಬುವರ ಮನೆ ಕಾಂಪೌಂಡ್ ಬಳಿ ಚಿರತೆ ಓಡಾಟ ನಡೆಸಿದೆ. ಇದರಿಂದ ಆತಂಕಗೊಂಡಿರುವ ಧನಮಟ್ನಹಳ್ಳಿ ಗ್ರಾಮದ ನಿವಾಸಿಗಳು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ