ಶಸ್ತ್ರಚಿಕಿತ್ಸೆಗೆ ಹಣ ಇಲ್ಲದೆ ಮೃತಪಟ್ಟ ಖ್ಯಾತ ಕಲಾವಿದ; 49ನೇ ವಯಸ್ಸಿಗೆ ಹಾರಿಹೋಯ್ತು ಜೀವ
Harish Pengan Passes Away: ಈ ತಿಂಗಳ ಆರಂಭದಲ್ಲಿ ವೈದ್ಯರು ಹರೀಶ್ ಅವರಿಗೆ ಯಕೃತ್ತಿನ ಕಸಿ ಮಾಡಲು ಶಿಫಾರಸು ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆಗೆ ಒಳಗಾಗಲು ಕುಟುಂಬದ ಬಳಿ ಹಣವಿರಲಿಲ್ಲ.
ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ (Harish Pengan) ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ ಕೆಲ ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಒಂದು ತಿಂಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಅವರು ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಹಂಚಿಕೊಂಡು ಸಂತಾಪ ಕೋರಲಾಗುತ್ತಿದೆ.
ಈ ತಿಂಗಳ ಆರಂಭದಲ್ಲಿ ವೈದ್ಯರು ಹರೀಶ್ ಅವರಿಗೆ ಯಕೃತ್ತಿನ ಕಸಿ ಮಾಡಲು ಶಿಫಾರಸು ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆಗೆ ಒಳಗಾಗಲು ಕುಟುಂಬದ ಬಳಿ ಹಣವಿರಲಿಲ್ಲ. ನಟ ನಂದನ್ ಉನ್ನಿ ಅವರು ಸಹಾಯಕ್ಕೆ ಬಂದರು. ನಟನಿಗೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಕೋರಿದ್ದರು. ಆದರೆ, ಆಪರೇಷನ್ಗೆ ಸಾಕಾಗುವಷ್ಟು ಹಣ ಬಂದಿಲ್ಲ. ಹೀಗಾಗಿ ಅವರು ಮೃತಪಟ್ಟರು.
ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್ ಅವರು ಹರೀಶ್ ಫೋಟೋ ಹಂಚಿಕೊಂಡು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಭಿಮಾನಿಗಳು ಈ ಪೋಸ್ಟ್ನ ಕಮೆಂಟ್ ಬಾಕ್ಸ್ನಲ್ಲಿ ಸಂತಾಪ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ‘ಹರೀಶ್ ಪೆಂಗನ್ ಓರ್ವ ಅದ್ಭುತ ಕಲಾವಿದ. ಹಲವು ಪಾತ್ರಕ್ಕೆ ಅವರು ಜೀವ ತುಂಬಿದ್ದರು’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 2018 Movie: ‘2018’ ಚಿತ್ರದ ಒಟಿಟಿ ಬಿಡುಗಡೆಗೆ ದಿನಾಂಕ ನಿಗದಿ; ಈ ಸಿನಿಮಾದಲ್ಲಿದೆ ನಿಜವಾದ ಕೇರಳ ಸ್ಟೋರಿ
ಹರೀಶ್ ಪೆಂಗನ್ ಅವರು ಮಲಯಾಳಂನಲ್ಲಿ ಖ್ಯಾತಿ ಪಡೆದಿದ್ದರು. ‘ಪ್ರತೀಕಾರಂ’, ‘ಮಿನ್ನಲ್ ಮುರಳಿ’, ‘ವೆಳ್ಳರಿಪಟ್ಟಣಂ’, ‘ಜಾನೆ ಮನ್’, ‘ಜಯ ಜಯ ಜಯ ಹೇ’, ‘ಜೋ & ಜೋ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿ ಫೇಮಸ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:36 am, Wed, 31 May 23