AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲಯಾಳಂ ಚಿತ್ರರಂಗದ ಮೇಲೆ ನಿಗಾ: ಚಿತ್ರೀಕರಣ ಸೆಟ್​ನಲ್ಲಿ ಮಾರುವೇಷದಲ್ಲಿ ಪೊಲೀಸರು

Malayalam Movie Industry: ಮಲಯಾಳಂ ಚಿತ್ರರಂಗದ ಮೇಲೆ ಕೇರಳ ಪೊಲೀಸರ ಕಣ್ಣು ಬಿದ್ದಿದೆ. ಚಿತ್ರೀಕರಣ ಸೆಟ್​ನಲ್ಲಿ ಮಾರುವೇಷದಲ್ಲಿ ಕೇರಳ ಪೊಲೀಸರು ಗಸ್ತು ತಿರುಗಲಿದ್ದಾರೆ.

ಮಲಯಾಳಂ ಚಿತ್ರರಂಗದ ಮೇಲೆ ನಿಗಾ: ಚಿತ್ರೀಕರಣ ಸೆಟ್​ನಲ್ಲಿ ಮಾರುವೇಷದಲ್ಲಿ ಪೊಲೀಸರು
ಕೇರಳ ಚಿತ್ರರಂಗ
ಮಂಜುನಾಥ ಸಿ.
|

Updated on:May 09, 2023 | 10:41 PM

Share

ಕೇರಳ ಚಿತ್ರರಂಗಕ್ಕೆ (Sandalwood) ಡ್ರಗ್ಸ್ (Drugs) ಕಳಂಕ ಅಂಟಿಕೊಂಡಿದೆ. ಕೇರಳ ಚಿತ್ರರಂಗದ ನಿರ್ಮಾಪಕರ (Producer) ಸಂಘವೇ, ಮಲಯಾಳಂ ಚಿತ್ರರಂಗದ (Malayalam Movie Industry) ಕೆಲವು ಖ್ಯಾತ ನಟರು ಡ್ರಗ್ಸ್ ಚಟಕ್ಕೆ ಗುರಿಯಾಗಿರುವುದಾಗಿ ಹೇಳಿದ್ದಾರೆ. ಡ್ರಗ್ಸ್ ಚಟ ಹೊಂದಿರುವ ಇಬ್ಬರು ನಟರನ್ನು ಡ್ರಗ್ಸ್ ಹಾಗೂ ಇನ್ನಿತರೆ ಕಾರಣಗಳನ್ನು ನೀಡಿ ಚಿತ್ರರಂಗದಿಂದ ಹೊರಗಿಟ್ಟಿದ್ದಾರೆ. ಇದರ ಜೊತೆಗೆ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಇರುವ ಬಗ್ಗೆ ಗಮನ ಸೆಳೆದಿದ್ದರು. ಈ ಬಗ್ಗೆ ಪೊಲೀಸರು ಗಮನವಹಿಸುವಂತೆಯೂ ಮನವಿ ಸಲ್ಲಿಸಿದ್ದರು. ಅಂತೆಯೇ ಇದೀಗ ಕೇರಳ ಪೊಲೀಸರು ಮಲಯಾಳಂ ಚಿತ್ರರಂಗದ ಮೇಲೆ ಕಣ್ಣಿಟ್ಟಿದ್ದಾರೆ.

ಇಬ್ಬರು ನಟರನ್ನು ಹೊರ ಹಾಕಿದ ಕೂಡಲೇ ಮಲಯಾಳಂ ಚಿತ್ರರಂಗದ ಕೆಲವು ನಿರ್ಮಾಪಕರು, ನಟರು ಚಿತ್ರರಂಗದಲ್ಲಿರುವ ಡ್ರಗ್ಸ್ ಬಳಕೆ ಬಗ್ಗೆ ಮಾತನಾಡಿದ್ದು, ಹಲವು ನಟರು ಚಿತ್ರೀಕರಣದ ಸಮಯದಲ್ಲಿಯೇ ಡ್ರಗ್ಸ್ ಬಳಕೆ ಮಾಡುತ್ತಾರೆ ಎಂದಿದ್ದಾರೆ. ಹಿರಿಯ ನಟ ಟೈನ್ ಟಾಮೊ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಇತ್ತೀಚೆಗೆ ಯುವ ನಟರೊಬ್ಬರೊಡನೆ ಕೆಲಸ ಮಾಡಿದೆ. ಮಾದಕ ವಸ್ತು ಬಳಕೆಯಿಂದ ಅವನ ಹಲ್ಲುಗಳೆಲ್ಲ ಕೊರೆದಂತಾಗಿದ್ದವು ಎಂದಿದ್ದರು ಮಾತ್ರವಲ್ಲದೆ, ನನ್ನ ಮಕ್ಕಳು ಚಿತ್ರರಂಗಕ್ಕೆ ಬರದೇ ಇರುವಂತೆ ನೋಡಿಕೊಳ್ಳುತ್ತೇನೆ ಏಕೆಂದರೆ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಅತಿಯಾಗಿದೆ” ಎಂದಿದ್ದಾರೆ.

ಡ್ರಗ್ಸ್ ಕುರಿತಾಗಿ ಕೇರಳ ನಿರ್ಮಾಪಕರ ಸಂಘ, ಕೆಲವು ಹಿರಿಯ ನಟರು ಆಡಿರುವ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಪೊಲೀಸರು ಮಲಯಾಳಂ ಚಿತ್ರರಂಗದ ಮೇಲೆ ನಿಗಾ ಇರಿಸಿದ್ದಾರೆ. ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಕೊಚ್ಚಿ ನಗರ ಪೊಲೀಸ್ ಆಯುಕ್ತ ಕೆ ಸೇತುರಾಮನ್, ”ಮಾರುವೇಷದಲ್ಲಿ ಪೊಲೀಸರನ್ನು ಚಿತ್ರೀಕರಣ ಸೆಟ್​ಗಳಲ್ಲಿ ಇಡಲಾಗುತ್ತದೆ. ಮಾತ್ರವಲ್ಲದೆ ದೂರುಗಳು ಬಂದರೆ ನಟರುಗಳ ವಿಚಾರಣೆ, ಡ್ರಗ್ಸ್ ಬಳಕೆ, ಮಾರಾಟದ ಅನುಮಾನ ಬಂದರೆ ರೇಡ್​ಗಳನ್ನು ಸಹ ಮಾಡಲಾಗುತ್ತದೆ ಎಂದಿದ್ದಾರೆ.

ಕೇರಳದ ಸಿನಿಮಾ ಕಲಾವಿದರ ಸಂಘದ ಸದಸ್ಯ ಹಾಗೂ ಮಲಯಾಳಂ ಚಿತ್ರರಂಗದ ಹಿರಿಯ ನಟ ಬಾಬುರಾಜ್ ಮಾತನಾಡಿದ್ದು, ”ಮಲಯಾಳಂ ಚಿತ್ರರಂಗದಲ್ಲಿ ಮಾದಕ ವಸ್ತು ಬಳಕೆ ತೀವ್ರ ಗತಿಯಲ್ಲಿ ಹೆಚ್ಚುತ್ತಿದೆ. ಮಾದಕ ವಸ್ತುವಿನ ಬಳಕೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ನಟರು ಮಾತ್ರವಲ್ಲ ಚಿತ್ರರಂಗದ ಇತರೆ ವಿಭಾಗಗಳಲ್ಲಿಯೂ ಇದು ಇದೆ. ಸಿನಿಮಾ ಸಂಸ್ಥೆಗಳು ಹಾಗೂ ಪೊಲೀಸರ ಬಳಿ ಮಾದಕ ವಸ್ತು ಬಳಸುವ ಚಿತ್ರರಂಗದ ಎಲ್ಲರ ಪಟ್ಟಿ ಇದೆ. ಅಮ್ಮ (ಮಲಯಾಳಂ ಚಿತ್ರರಂಗದ ಕಲಾವಿದರ ಸಂಘ) ಸಂಸ್ಥೆಯ ಬಳಿಯೂ ಇದೆ ಎಂದಿದ್ದಾರೆ. ಆದರೆ ಅಮ್ಮ ಕಾರ್ಯದರ್ಶಿ ಎಡವೇಲ ಬಾಬು, ಬಾಬುರಾಜ್​ರ ಹೇಳಿಕೆಗಳನ್ನು ಅಲ್ಲಗಳೆದಿದ್ದು, ಅಮ್ಮ ಬಳಿ ಆ ರೀತಿಯ ಯಾವುದೇ ಪಟ್ಟಿ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ:ಅಶಿಸ್ತು: ಮಲಯಾಳಂ ಚಿತ್ರರಂಗದಿಂದ ಇಬ್ಬರು ಜನಪ್ರಿಯ ನಟರ ಬ್ಯಾನ್

ಚಿತ್ರೀಕರಣ ಸೆಟ್​ನಲ್ಲಿ ಡ್ರಗ್ಸ್ ಬಳಸುತ್ತಿದ್ದರು, ಅಶಿಸ್ತು ಪ್ರದರ್ಶನ, ಡೇಟ್ಸ್​ಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ನೀಡಿದ್ದಾರೆ ಇನ್ನಿತರೆ ಕಾರಣಗಳನ್ನು ನೀಡಿ ಕೇರಳ ಸಿನಿಮಾ ನಿರ್ಮಾಪಕರ ಸಂಘವು ನಟರಾದ ಶೇನ್ ನಿಗಮ್ ಹಾಗೂ ಶ್ರೀನಾಥ್ ಬಸಿ ಅವರುಗಳನ್ನು ಚಿತ್ರರಂಗದಿಂದ ನಿಷೇಧ ಹೇರಿದೆ. ಇದೀಗ, ಮತ್ತೊಂದು ನಿರ್ಧಾರವನ್ನು ನಿರ್ಮಾಪಕ ಸಂಘ ಪ್ರಕಟಿಸಿದ್ದು, ಡ್ರಗ್ಸ್ ಬಳಸುವ ಯಾವುದೇ ನಟರೊಟ್ಟಿಗೆ ಕೆಲಸ ಮಾಡುವುದಿಲ್ಲ ಎಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:03 pm, Tue, 9 May 23

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ