AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶಿಸ್ತು: ಮಲಯಾಳಂ ಚಿತ್ರರಂಗದಿಂದ ಇಬ್ಬರು ಜನಪ್ರಿಯ ನಟರ ಬ್ಯಾನ್

Malayalam Movie Industry: ಅಶಿಸ್ತು ಪ್ರದರ್ಶಿಸಿದ ಆರೋಪದ ಮೇಲೆ ಮಲಯಾಳಂ ಚಿತ್ರರಂಗದ ಇಬ್ಬರು ಜನಪ್ರಿಯ ನಟರ ಮೇಲೆ ಚಿತ್ರರಂಗವು ನಿಷೇಧ ಹೇರಿದೆ.

ಅಶಿಸ್ತು: ಮಲಯಾಳಂ ಚಿತ್ರರಂಗದಿಂದ ಇಬ್ಬರು ಜನಪ್ರಿಯ ನಟರ ಬ್ಯಾನ್
ಮಲಯಾಳಂ ನಟರು
ಮಂಜುನಾಥ ಸಿ.
|

Updated on: Apr 25, 2023 | 9:48 PM

Share

ಮಲಯಾಳಂ (Malayalam) ಚಿತ್ರರಂಗವು ಇಬ್ಬರು ಜನಪ್ರಿಯ ನಾಯಕ ನಟರಾದ ಶ್ರೀನಾಥ್ ಬಾಸಿ (Sreenath Bhasi) ಹಾಗೂ ಶೇನ್ ನಿಗಮ್ (Shane Nigam) ಅವರುಗಳನ್ನು ಚಿತ್ರರಂಗದಿಂದ (Movie Industry) ಬ್ಯಾನ್ ಮಾಡಿದೆ. ಶೂಟಿಂಗ್ ಸೆಟ್​ನಲ್ಲಿ (Shooting Set) ಅಶಿಸ್ತು ತೋರಿದ ಕಾರಣ ಈ ಇಬ್ಬರಿಗೆ ಬ್ಯಾನ್ ಶಿಕ್ಷೆ ನೀಡಲಾಗಿದೆ. ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ ಹಾಗೂ ಕೇರಳ ಸಿನಿಮಾ ನಿರ್ಮಾಪಕರ ಸಂಘವು ಜಂಟಿಯಾಗಿ ಈ ನಿರ್ಧಾರ ತೆಗೆದುಕೊಂಡಿದೆ. ಜನಪ್ರಿಯ ಮಲಯಾಳಂ ಸಿನಿಮಾ ಕುಂಬಳಂಗಿ ನೈಟ್ಸ್ ನಲ್ಲಿ ಶ್ರೀನಾಥ್ ಬಾಸಿ ಹಾಗೂ ಶೇನ್ ನಿಗಮ್ ಒಟ್ಟಿಗೆ ನಟಿಸಿದ್ದರು. ಮಾತ್ರವೇ ಅಲ್ಲದೆ ಇನ್ನೂ ಹಲವು ಸಿನಿಮಾಗಳಲ್ಲಿ ಇವರಿಬ್ಬರು ನಟಿಸಿದ್ದರು.

ಈ ಇಬ್ಬರು ನಟರ ವಿರುದ್ಧ ಸತತವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ, ಕೇರಳ ಸಿನಿಮಾ ನಿರ್ಮಾಪಕರ ಸಂಘ ಹಾಗೂ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಒಕ್ಕೂರಲಿನಿಂದ ಈ ಇಬ್ಬರು ನಟರ ಮೇಲೆ ನಿಷೇಧ ಹೇರುವ ನಿರ್ಧಾರ ಪ್ರಕಟಿಸಿದೆ. ಇನ್ನು ಮುಂದೆ ಈ ನಟರನ್ನು ಯಾವುದೇ ಸಿನಿಮಾಕ್ಕೆ ಹಾಕಿಕೊಳ್ಳದ ಹಾಗೂ ಈ ಇಬ್ಬರು ನಟರು ಇರುವ ಸಿನಿಮಾಕ್ಕೆ ಸಹಕಾರ ನೀಡದೇ ಇರಲು ಈ ಸಂಘಟನೆಗಳು ನಿರ್ಧರಿಸಿವೆ.

ಕೇರಳ ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ ರಂಜಿತ್ ಆರೋಪ ಮಾಡಿರುವಂತೆ, ಈ ಇಬ್ಬರು ನಟರು ಸಿನಿಮಾದ ಸೆಟ್​ನಲ್ಲಿ ಸದಾ ಮಾದಕ ವ್ಯಸನದ ಗುಂಗಿನಲ್ಲಿರುತ್ತಾರೆ. ಇದರಿಂದಾಗಿ ಸಿನಿಮಾದ ನಿರ್ಮಾಪಕರಿಗೆ, ಸೆಟ್​ನಲ್ಲಿನ ಇತರೆ ತಂತ್ರಜ್ಞರಿಗೆ ಹಾಗೂ ಸಹ ನಟರಿಗೆ ಸಮಸ್ಯೆ ಆಗುತ್ತಿದೆ, ಚಿತ್ರೀಕರಣಕ್ಕೂ ತೊಂದರೆ ಆಗುತ್ತಿದೆ ಎಂದಿದ್ದಾರೆ. ಈ ಇಬ್ಬರು ನಟರ ಬಗ್ಗೆ ಆಗಾಗ್ಗೆ ದೂರುಗಳು ಬರುತ್ತವೇ ಇದ್ದವು ಎಂದು ಸಹ ರಂಜಿತ್ ಹೇಳಿದ್ದಾರೆ.

ನಿರ್ಣಯವನ್ನು ಅನುಮೋದಿಸಿರುವ ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ ಸಂಘದ ಕಾರ್ಯದರ್ಶಿ ಎಡವೇಲ ಬಾಬು, ಸಿನಿಮಾ ಸೆಟ್​ನಲ್ಲಿ ಮಾದಕ ವಸ್ತು ಸೇವಿಸುವ ನಟರುಗಳ ಬಗ್ಗೆ ಆಗಾಗ್ಗೆ ದೂರುಗಳು ಬರುತ್ತಲೇ ಇವೆ, ಅಮ್ಮಾ ಸಂಘವು ದೂರು ಬಂದಿರುವ ನಟರುಗಳ ಪಟ್ಟಿಯನ್ನು ಸರ್ಕಾರಕ್ಕೆ ನೀಡಲಿದೆ. ಈ ರೀತಿಯ ನಟರುಗಳಿಗೆ ಸಂಘವು ಸಹಕಾರ ನೀಡುವುದಿಲ್ಲ ಮತ್ತು ಸೆಟ್​ನಲ್ಲಿ ಅಶಿಸ್ತು ಪ್ರದರ್ಶಿಸುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಕೆಲವು ವಾರಗಳ ಹಿಂದಷ್ಟೆ, ನಟ ಶೇನ್ ನಿಗಮ್, ಆರ್​ಡಿಎಕ್ಸ್ ಹೆಸರಿನ ಸಿನಿಮಾದಿಂದ ಹೊರಗೆ ಹೋಗಿದ್ದರು. ಆ ಸಿನಿಮಾದಲ್ಲಿ ಶೇನ್ ನಿಗಮ್ ಜೊತೆಗೆ ಲಾಲ್ ಮತ್ತು ಅಂಟೋನಿ ವರ್ಗೀಸ್ ಅಂಥಹಾ ದೊಡ್ಡ ನಟರುಗಳು ಸಹ ಇದ್ದರು. ಸಿನಿಮಾದ ಚಿತ್ರೀಕರಣ 90 ಪ್ರತಿಶತ ಮುಗಿದು ಹೋಗಿತ್ತು ಆ ಸಂದರ್ಭದಲ್ಲಿ ನಟ ಶೇನ್ ನಿಗಮ್​ ಸೆಟ್​ನಿಂದ ಹೊರಗೆ ಹೋಗಿದ್ದರು. ಇದು ನಿರ್ಮಾಪಕರಿಗೆ ಹಾಗೂ ಇತರ ನಟರಿಗೆ ತೀವ್ರ ಅಸಮಾಧಾನ ತಂದಿತ್ತು.

ಇದನ್ನೂ ಓದಿ: ಒಂದೇ ಸಿನಿಮಾ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​-ಜಾನ್​ ಅಬ್ರಾಹಂ; ಮಲಯಾಳಂ ಚಿತ್ರಕ್ಕೆ ಸ್ಟಾರ್​ ನಟರು ಫಿದಾ

ಶ್ರೀನಾಥ್ ಬಾಸಿ ವಿರುದ್ಧವೂ ಕೆಲವು ನಿರ್ಮಾಪಕರು ಆರೋಪ ಮಾಡಿದ್ದು, ಬಾಸಿಯು ಉದ್ದೇಶಪೂರ್ವಕವಾಗಿ ಒಂದೇ ಡೇಟ್ಸ್​ಗಳನ್ನು ವಿವಿಧ ನಿರ್ಮಾಪಕರಿಗೆ ನೀಡುವ ಮೂಲಕ ದೊಡ್ಡ ನಷ್ಟ ಉಂಟು ಮಾಡಿದ್ದಾನೆ ಎಂದಿದ್ದಾರೆ. ಶೇನ್ ಹಾಗೂ ಶ್ರೀನಾಥ್ ಬಾಸಿ ಇಬ್ಬರೂ ಪ್ರತಿಭಾವಂತ ನಟರು. ಕುಂಬಲಂಗಿ ನೈಟ್ಸ್ ಸಿನಿಮಾದಲ್ಲಿ ಈ ಇಬ್ಬರು ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿತ್ತು.

ಶೇನ್ ನಿಗಮ್, ಇಷ್ಕ್, ಈದ, ಕೇರ್ ಆಫ್ ಸಾಯಿರಾ ಬಾನು, ಕಮ್ಮಾಟಿಪದಂ, ವಾಲಿಯಪೆರುನ್ನಾಲ್, ಕೊರೊನಾ ಪೇಪರ್ಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಆರು ಸಿನಿಮಾಗಳಿವೆ. ಇನ್ನು ಶ್ರೀನಾಥ್ ಬಾಸಿ, ವೈರಸ್, ಟ್ರ್ಯಾನ್ಸ್, ಕಪ್ಪೆಲ, ಹೋಮ್, ಭೀಷ್ಮ ಪರ್ವಂ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರೂ ಪ್ರಸ್ತುತ ಆರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ