Updated on: May 10, 2023 | 6:30 AM
‘ಆದಿಪುರುಷ್’ ಸಿನಿಮಾ ಜೂನ್ 16ರಂದು ವಿಶ್ವಾದ್ಯಂತ 3ಡಿ ಅವತರಣಿಕೆಯಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿದೆ. 3 ನಿಮಿಷ 19 ಸೆಕೆಂಡ್ನ ಟ್ರೇಲರ್ ಗಮನ ಸೆಳೆದಿದೆ.
ರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸೀತೆಯ ಪಾತ್ರಕ್ಕೆ ಕೃತಿ ಸನೋನ್ ಬಣ್ಣ ಹಚ್ಚಿದ್ದಾರೆ. ಟ್ರೇಲರ್ ಮೂಲಕ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಸೀತೆಯನ್ನು ರಾವಣ ಅಪಹರಿಸುತ್ತಾನೆ. ನಂತರ ಆಕೆಯನ್ನು ಮರಳಿ ಕರೆತರಲು ರಾಮ ತೆರಳುತ್ತಾನೆ. ಟ್ರೇಲರ್ನಲ್ಲಿ ಈ ಎಲ್ಲಾ ವಿಚಾರಗಳನ್ನು ತೋರಿಸಲಾಗಿದೆ.
ಈಗಾಗಲೇ ರಾಮಾಯಣ ಆಧರಿಸಿ ಹಲವು ಧಾರಾವಾಹಿ ಹಾಗೂ ಸಿನಿಮಾಗಳು ಬಂದು ಹೋಗಿವೆ. ಆದಾಗ್ಯೂ ಓಂ ರಾವತ್ ಇದೇ ಕಥೆ ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದಾರೆ.
ರಾಮಾಯಣದ ಕಥೆಯೇ ಆದರೂ ಮೇಕಿಂಗ್ ವಿಚಾರದಲ್ಲಿ ‘ಆದಿಪುರುಷ್’ ಗಮನ ಸೆಳೆಯುವ ಸಾಧ್ಯತೆ ಇದೆ. ಸಿನಿಮಾ 3ಡಿಯಲ್ಲಿ ಮೂಡಿ ಬರುತ್ತಿದೆ ಅನ್ನೋದು ವಿಶೇಷ.
‘ಆದಿಪುರುಷ್’ನಲ್ಲಿ ಬರುವ ರಾಮ, ಸೀತೆ ಪಾತ್ರಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಕೆಲವು ವಿಚಾರಗಳು ಟ್ರೋಲ್ಗೆ ಆಹ್ವಾನ ಮಾಡಿಕೊಟ್ಟಿದೆ. ಟ್ರೋಲ್ ಆಗಿಯೂ ಯಶಸ್ಸು ಕಂಡ ಹಲವು ಸಿನಿಮಾಗಳಿವೆ. ಆ ಸಾಲಿಗೆ ‘ಆದಿಪುರುಷ್’ ಕೂಡ ಸೇರುತ್ತದೆಯೇ ಎನ್ನುವುದು ಸದ್ಯದ ಕುತೂಹಲ.