AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ಪಿಡಬ್ಲೂಡಿ ಜೆಇ ಶಾಂತಗೌಡ ಬಿರಾದರ್ ಮನೆಯ ಪೈಪ್​ನಲ್ಲಿ ಎಸಿಬಿ ಅಧಿಕಾರಿಗಳಿಗೆ ಕಂತೆ ಕಂತೆ ಹಣ ಸಿಕ್ಕಿದ್ದು ಹೀಗೆ

ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪಿಡಬ್ಲೂಡಿ ಜೆಇ ಶಾಂತಗೌಡ ಬಿರಾದರ್ ಮನೆಯ ವಾಟರ್ ಪೈಪ್​ನಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿತ್ತು. ಕಲಬುರಗಿ ಜಿಲ್ಲೆಯ ಗುಬ್ಬಿ ಕಾಲೋನಿಯಲ್ಲಿರುವ ಅವರ ಮನೆಯ ಪೈಪ್​ನಲ್ಲಿ ಸುಮಾರು 54.5 ಲಕ್ಷ ಹಣ ಪತ್ತೆಯಾಗಿದೆ.

ಕಲಬುರಗಿ ಪಿಡಬ್ಲೂಡಿ ಜೆಇ ಶಾಂತಗೌಡ ಬಿರಾದರ್ ಮನೆಯ ಪೈಪ್​ನಲ್ಲಿ ಎಸಿಬಿ ಅಧಿಕಾರಿಗಳಿಗೆ ಕಂತೆ ಕಂತೆ ಹಣ ಸಿಕ್ಕಿದ್ದು ಹೀಗೆ
ಶಾಂತಗೌಡ ಬಿರಾದರ್ ಮನೆಯ ಪೈಪ್​ನಲ್ಲಿ ಸಿಕ್ಕ ಹಣ
TV9 Web
| Edited By: |

Updated on:Nov 25, 2021 | 9:41 AM

Share

ಕಲಬುರಗಿ: ನಿನ್ನೆ (ನ.24) ಒಂದೇ ದಿನ ರಾಜ್ಯದಲ್ಲಿ ಸುಮಾರು 15 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಭ್ರಷ್ಟ ಅಧಿಕಾರಿಗಳು ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಭ್ರಷ್ಟರಿಗೆ ಎಸಿಬಿ ನಿನ್ನೆ ಶಾಕ್ ಕೊಟ್ಟು, ದಾಖಲೆಗಳು ಸೇರಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕಲಬುರಗಿಯ ಶಾಂತಗೌಡ ಬಿರಾದರ್ ಮನೆಯ ಪೈಪ್ನಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿ ಪೈಪ್ನಲ್ಲಿ ಇದ್ದ ಹಣವನ್ನು ಪತ್ತೆ ಮಾಡಿದ್ದೇ ರೋಚಕವಾಗಿದೆ.

ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪಿಡಬ್ಲೂಡಿ ಜೆಇ ಶಾಂತಗೌಡ ಬಿರಾದರ್ ಮನೆಯ ವಾಟರ್ ಪೈಪ್​ನಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿತ್ತು. ಕಲಬುರಗಿ ಜಿಲ್ಲೆಯ ಗುಬ್ಬಿ ಕಾಲೋನಿಯಲ್ಲಿರುವ ಅವರ ಮನೆಯ ಪೈಪ್​ನಲ್ಲಿ ಸುಮಾರು 54.5 ಲಕ್ಷ ಹಣ ಪತ್ತೆಯಾಗಿದೆ. ಆದರೆ ಪೈಪ್​ನಲ್ಲಿ ಇದ್ದ ಹಣವನ್ನ ಪತ್ತೆ ಮಾಡಿದ್ದೇ ರೋಚಕವಾಗಿದೆ. ಹಣ ಸಿಕ್ಕಿದ್ದ ಪೈಪ್ ವಾಷಿಂಗ್ ಮಷಿನ್ನಿಂದ ನೀರು ಹೊರ ಹೋಗಲು ಸಂಪರ್ಕ ಹೊಂದಿದೆ. ಕಳೆದ ಎರಡು ತಿಂಗಳಿಂದ ವಾಷಿಂಗ್ ಮಷಿನ್ ಬಳಸಿರಲಿಲ್ಲ. ಎಸಿಬಿ ಅಧಿಕಾರಿಗಳು ಬಂದ ತಕ್ಷಣ ಶಾಂತಗೌಡ ಬಿರಾದರ್ ಕಂತೆ ಕಂತೆ ಹಣವನ್ನು ಪೈಪ್​ನಲ್ಲಿ ಹಾಕಿದ್ದಾರೆ. ಹಣ ಹಾಕಿದ ನಂತರ ಪ್ಲೇಟ್ ಬದಲಾಗಿ ಅದರ ಮೇಲೆ ಕಲ್ಲು ಇಟ್ಟಿದ್ದರು.

ಶಾಂತಗೌಡ ಬಿರಾದರ್ ಮನೆಯ ಟಾಯ್ಲೇಟ್ ಬಳಿ ವಾಷಿಂಗ್ ಮಷಿನ್ ಇಟ್ಟಿದ್ದಾರೆ. ಎಸಿಬಿ ದಾಳಿ ನಡೆಸಿದ ವೇಳೆ ಪದೇ ಪದೇ ಟಾಯ್ಲೇಟ್​ಗೆ ಹೋಗಿ ಬರೋದಾಗಿ ಹೇಳುತ್ತಿದ್ದರು. ಹಣ ಸಿಕ್ಕಿದ ಪೈಪ್ ಬಳಿ ಶಾಂತಗೌಡ ಮತ್ತು ಅವರ ಪುತ್ರ ಹೋಗುತ್ತಿದ್ದರು. ತಂದೆ ಮಗ ಪೈಪ್ ಬಳಿಯೇ ಹೆಚ್ಚು ಓಡಾಟ ನಡೆಸುತ್ತಿದ್ದರು. ಅನುಮಾನಗೊಂಡ ಎಸಿಬಿ ಸಿಬ್ಬಂದಿ ಪೈಪ್ ಮೇಲಿನ ಕಲ್ಲು ತಳ್ಳಿದ್ದಾರೆ. ಆಗ ಪೈಪ್​ನಲ್ಲಿ ಹಣ ಇರುವುದು ಕಣ್ಣಿಗೆ ಬಿದ್ದಿದೆ. ಮನೆ ಹೊರಗಡೆಯಿಂದ ಪೈಪ್ ಕತ್ತರಿಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ.

ಇದನ್ನೂ ಓದಿ

ಕೇವಲ 30 ನಿಮಿಷಗಳ ವಾಕಿಂಗ್; ನಿಮ್ಮಲ್ಲಿ ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಹರಿಸಿ

ಮೇಘಾಲಯದಲ್ಲಿ ಕಾಂಗ್ರೆಸ್​​ಗೆ ಬಿಗ್​ ಶಾಕ್​; ಮಾಜಿ ಸಿಎಂ ಸೇರಿ 12 ಶಾಸಕರು ತೃಣಮೂಲ ಕಾಂಗ್ರೆಸ್​​ಗೆ

Published On - 9:34 am, Thu, 25 November 21