ಟಿವಿ9 ಇಂಪ್ಯಾಕ್ಟ್​: ಕಲಬುರಗಿ ಜೈಲಿನ ಕರ್ಮಕಾಂಡದ ವರದಿ ಪ್ರಸಾರ ಬೆನ್ನಲ್ಲೇ ಜೈಲಿಗೆ ಭೇಟಿ ನೀಡಿದ ಬಂಧಿಖಾನೆ ಡಿಐಜಿ

ತಪ್ಪು ಮಾಡಿ ಬಂದ ಖೈದಿಗಳ ಮನವರ್ತನೆ ಮಾಡುವ ಜಾಗವಾದ ಜೈಲಿನಲ್ಲಿ ಶಿಸ್ತು, ಸಂಯಮದ ಪಾಠ ಮಾಡಬೇಕು. ಆದ್ರೆ, ಕಲಬುರಗಿ ಜೈಲಿನಲ್ಲಿ ಮನವರ್ತನೆ ಹೋಗಲಿ, ಐಷಾರಾಮಿ ಜೀವನ ನಡೆಸುವ ಅಡ್ಡೆಯಾಗಿತ್ತು. ಇಲ್ಲಿನ‌ ಐಷಾರಾಮಿ ಜೀವನದ ಬಗ್ಗೆ ಟಿವಿ9 ಸಾಕ್ಷ್ಯ ಸಮೇತ ಬಟಾಬಯಲು ಮಾಡುತ್ತಿದ್ದಂತೆ ಸದ್ಯ ತನಿಖೆ ಶುರುವಾಗಿದೆ.

ಟಿವಿ9 ಇಂಪ್ಯಾಕ್ಟ್​: ಕಲಬುರಗಿ ಜೈಲಿನ ಕರ್ಮಕಾಂಡದ ವರದಿ ಪ್ರಸಾರ ಬೆನ್ನಲ್ಲೇ ಜೈಲಿಗೆ ಭೇಟಿ ನೀಡಿದ ಬಂಧಿಖಾನೆ ಡಿಐಜಿ
ಕಲಬುರಗಿ ಕೇಂದ್ರ ಕಾರಾಗೃಹ
Updated By: ಕಿರಣ್ ಹನುಮಂತ್​ ಮಾದಾರ್

Updated on: Dec 21, 2023 | 8:59 PM

ಕಲಬುರಗಿ, ಡಿ.21: ಕಲಬುರಗಿ ಸೆಂಟ್ರಲ್ ಜೈಲಿ(Kalaburagi Central Jail)ನ ಕರ್ಮಕಾಂಡದ ಬಗ್ಗೆ ಟಿವಿ9 ಡಿಜಿಟಲ್​ ನಿನ್ನೆ(ಡಿ.20) ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಪಿಎಸ್​ಐ, ಕೆಇಎ ಅಕ್ರಮದ‌ ಕಿಂಗ್ ಫಿನ್ ಸೇರಿ ಜೈಲಿನಲ್ಲಿರುವ ನಟೋರಿಯಸ್​ಗಳಿಗೆ ರಾಜಾತೀಥ್ಯ ನೀಡುವ ಬಗ್ಗೆ ಸಾಕ್ಷ್ಯ ಸಮೇತ ಎಕ್ಸಪೋಸ್ ಮಾಡಲಾಗಿತ್ತು. ಈ ಸದ್ದಿ ಪ್ರಸಾರ ಮಾಡಿ 3 ಗಂಟೆ ಕಳೆಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ನಗರ ಪೊಲೀಸ್ ಆಯಕ್ತ ಆರ್ ಚೇತನ್​ಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ಮಾಡಿದ್ದರು. ಅದರಂತೆ ಸದ್ಯ ಕಲಬುರಗಿ ಸೆಂಟ್ರಲ್ ಜೈಲ್ ಬಂಧಿಖಾನೆ ಡಿಐಜಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಇನ್ನು ಕಲಬುರಗಿ ಸೆಂಟ್ರಲ್ ಜೈಲಿನ ಸೆಕ್ಯೂರಿಟಿ ಹೊಣೆ ಹೊತ್ತಿರುವ ಇನ್ಸ್​ಪೆಕ್ಟರ್ ವಿಶ್ವನಾಥ್​, ಪೊಲೀಸ್ ಪಾಟೀಲ್​ನೇ ಈ ಎಲ್ಲಾ ಅಕ್ರಮದ ರೂವಾರಿ ಎನ್ನುವುದು ಬಟಬಯಲಾಗಿದೆ. ಖುದ್ದು ಅಲ್ಲಿನ ಸಿಬ್ಬಂದಿಗಳೇ ಹಗರಣ ಬಯಲಗೆಳೆದಿದ್ದು, ಈ ಬಗ್ಗೆ ಆಂತರಿಕ ವಿಭಾಗದ ಐಜಿಪಿಗೂ ಪತ್ರ ಬರೆದಿದ್ದನ್ನ ಸಾಕ್ಷಿ ಸಮೇತ ಬಿತ್ತರಿಸಿದ್ದೆವು. ಕೆಎಸ್​ಐಎಸ್ಏಫ್​ ಸಿಬ್ಬಂದಿಗಳೇ ಪತ್ರ ಬರೆದ್ದಿದ್ದರು‌. ಅದೆಲ್ಲವೂ ಕೂಡ ತನಿಖಾಧಿಕಾರಿಗಳು ಪರೀಶಿಲ‌ನೆ ಮಾಡುತ್ತಿದ್ದಾರೆ. ಅಲ್ಲದೇ ಖುದ್ದು ಜೈಲು ಸಿಬ್ಬಂದಿ, ಭದ್ರತೆ ಹೊಣೆ ಹೊತ್ತಿರುವ ಕೆಎಸ್ಐಎಸ್​ಎಫ್​ ಸಿಬ್ಬಿಂದಿಗಳಿಂದಲೂ ಮಾಹಿತಿ ಪಡೆಯುತ್ತಿದ್ದು, ಜೈಲಿನೊಳಗೆ ಅದ್ಯಾವ ಕುಮ್ಮಕ್ಕು, ಅನುಮತಿಯೊಂದಿಗೆ ನಿಷೇಧಿತ ವಸ್ತುಗಳಾದ ಸಿಗರೇಟ್, ಗುಟ್ಕಾ, ಕೂಲ್ ಡ್ರಿಂಕ್ಸ್ ಜೊತೆಗೆ ಕೆಲ ನಿಗೂಢ ವಸ್ತುಗಳ ಸಪ್ಲೈ ಆಗಿದೆ. ಈ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗೇ ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆಯೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:Tv9 Impact: ಸಭೆಯಲ್ಲಿ ಟಿವಿ9ನ ಕಲಬುರಗಿ ಸೆಂಟ್ರಲ್​​ ಜೈಲಿ ವರದಿ ಪ್ರಸ್ತಾಪಿಸಿ ಅಧಿಕಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ತರಾಟೆ

ಒಟ್ಟಿನಲ್ಲಿ ಟಿವಿ9 ನಲ್ಲಿ ಬಿತ್ತರವಾದ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ನಡೆಯುತ್ತಿರುವ ರಾಜ್ಯಾತೀಥ್ಯದ ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.‌ ನಾಳೆಯೊಳಗೆ ತಪ್ಪಿತಸ್ಥ ಅಧಿಕಾರಿ ತಲೆದಂಡವಾಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ ಇದಕ್ಕೆ ಪರೋಕ್ಷವಾಗಿ ಸಾಥ್ ನೀಡಿದ ಕೆಲವರಿಗೂ ಕಂಟಕ ಎದುರಾಗಬಹುದು ಎನ್ನಲಾಗಿದೆ. ಅದು ಏನೇ ಇರಲಿ ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎನ್ನುವ ಗಾದೆ ಮಾತಿನಂತೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ