PSI ಅಕ್ರಮದ ಕಿಂಗ್ಪಿನ್ಗೆ ರಾಜಾತಿಥ್ಯ! ಟಿವಿ9 ಸಾಕ್ಷ್ಯ ಸಮೇತ ಬಯಲು ಮಾಡ್ತಿದೆ ಕಲಬುರಗಿ ಜೈಲಿನ ಕರ್ಮಕಾಂಡ
Kalaburagi jail irregularities: ಕೊಲೆ, ಸುಲಿಗೆ, ದರೋಡೆಗಿಂತಲೂ ಭಯಾನಕವಾಗಿ ರಾಜ್ಯವನ್ನ ಬೆಚ್ಚಿಬೀಳಿಸಿದ ಪಿಎಸ್ ಐ ಅಕ್ರಮ ನೇಮಕಾತಿಯ ಕಿಂಗ್ ಪಿನ್ ಗೆ ಕಲಬುರಗಿ ಸೆಂಟ್ರಲ್ ಜೈಲ್ ರಾಜಾತಿಥ್ಯ ನೀಡಲಾಗ್ತಿದೆ. ಸೆಂಟ್ರಲ್ ಜೈಲಿನಲ್ಲಿ ನಟೋರಿಯಸ್ ಗಳೆಲ್ಲಾ ಬಿಂದಾಸ್ ಲೈಫ್ ಕಳೆಯುತ್ತಿದ್ದಾರೆ. ಇವರಿಗೆ ಸಮಯಕ್ಕೆ ತಕ್ಕ ಹಾಗೇ ಲಿಕ್ಕರ್, ಗುಟ್ಕಾ, ಸಿಗರೇಟ್ ಅಷ್ಟೆ ಏಕೆ ಗಾಂಜಾ ಕೂಡಾ ಸಪ್ಲೈ ಆಗ್ತಿದೆ ಅಂದ್ರೆ ನಂಬ್ಲೇಬೇಕು.
ಅದು ರಾಜ್ಯದ ದೊಡ್ಡ ಜೈಲುಗಳಲ್ಲೊಂದು. ಅಲ್ಲಿ ದುಡ್ಡು ಕೊಟ್ರೆ ನಿಮಗೆ ಐಷಾರಾಮಿ ಜೀವನದ ವ್ಯವಸ್ಥೆ ಸಿಗುತ್ತೆ. ಟಿವಿ9 (TV9) ಬಯಲು ಮಾಡ್ತಿದೆ ರಾಜ್ಯದ ಮತ್ತೊಂದು ಜೈಲ್‌ನ ಕರ್ಮಕಾಂಡ.. ಹಾಗಿದ್ರೆ ಆ ಜೈಲ್ ಯಾವುದು, ಅಲ್ಲಿ ನಡೆಯುತ್ತಿರೋ ಕರಾಳ ದಂದೆ ಎಂತಹುದು ಎನ್ನೋದನ್ನೆ ಏಳೆ ಎಳೆಯಾಗಿ ಈ ವರದಿಯಲ್ಲಿದೆ ಓದಿ. ಹೌದು. ನೀವೆಲ್ಲಾ ಬೆಂಗಳೂರಿನ ಪರಪ್ಪನ ಅಗ್ರಹಾರ, ಬೆಳಗಾವಿಯ ಹಿಂಡಲಗಾ ಜೈಲಿನ ಕರ್ಮಕಾಂಡ ಕೇಳಿದ್ದಿರಿ ಮತ್ತು ಖುದ್ದು ಟಿವಿ9 ಅಲ್ಲಿನ ಕರ್ಮಕಾಂಡದ ಬಗ್ಗೆ ವಿಸ್ತೃತ ವರದಿ ಮಾಡಿ ಬಟಾಬಯಲು ಮಾಡಿದ್ದನ್ನ ಕೂಡಾ ನೋಡಿದ್ದಿರಿ. ಸದ್ಯ ಅಂತಹುದೇ ಮತ್ತೊಂದು ಜೈಲಿನ ಕರಾಳ ದಂದೆ ವಿವರಗಳು ಇಲ್ಲಿ ಏಕ್ಸಪೋಸ್ ಆಗಿವೆ. ಇದು ಬರೀ ಆರೋಪದ ಮಾತಲ್ಲ. ಸಾಕ್ಷ್ಯ ಸಮೇತ ರಾಜ್ಯದ ಮತ್ತೊಂದು ಸೆಂಟ್ರಲ್ ಜೈಲ್ ನ ಕರ್ಮಕಾಂಡ. ಯಸ್ ಕಲಬುರಗಿ ಸೆಂಟ್ರಲ್ ಜೈಲ್ (Kalaburagi jail) ನಲ್ಲಿ ನೀವು ದುಡ್ಡು ಕೊಟ್ರೆ ಸಾಕು ನಿಮಗೆ ಐಷಾರಾಮಿ ಜೀವನ ಸಿಗುತ್ತೆ. ಹಣ ಕೊಟ್ರೆ ಹೆಣವೂ ಬಾಯಿ ತೆರೆಯುತ್ತೆ ಅನ್ನೋ ಗಾದೆ ಮಾತು ಅಕ್ಷರಶಃ ಇಲ್ಲಿ ನಿಜವಾಗಿದೆ.
ಯಾಕೆಂದ್ರೆ ಕೊಲೆ, ಸುಲಿಗೆ, ದರೋಡೆಗಿಂತಲೂ ಭಯಾನಕವಾಗಿ ರಾಜ್ಯವನ್ನ ಬೆಚ್ಚಿಬೀಳಿಸಿದ ಪಿಎಸ್ ಐ ಅಕ್ರಮ ನೇಮಕಾತಿಯ ಕಿಂಗ್ ಪಿನ್ (PSI recruitment scam) ಗೂ ಇಲ್ಲಿ ರಾಜಾತಿಥ್ಯ ನೀಡಲಾಗ್ತಿದೆ. ಸೆಂಟ್ರಲ್ ಜೈಲಿನಲ್ಲಿ ನಟೋರಿಯಸ್ ಗಳೆಲ್ಲಾ ಬಿಂದಾಸ್ ಲೈಫ್ ಕಳೆಯುತ್ತಿದ್ದಾರೆ. ಇವರಿಗೆ ಸಮಯಕ್ಕೆ ತಕ್ಕ ಹಾಗೇ ಲಿಕ್ಕರ್, ಗುಟ್ಕಾ, ಸಿಗರೇಟ್ ಅಷ್ಟೆ ಏಕೆ ಗಾಂಜಾ ಕೂಡಾ ಸಪ್ಲೈ ಆಗ್ತಿದೆ ಅಂದ್ರೆ ನೀವ್ ನಂಬ್ಲೇಬೇಕು.
ಯಾಕೆಂದ್ರೆ ಟಿವಿ9 ಸುಖಾಸುಮ್ನೆ ಆರೋಪದ ಬಗ್ಗೆ ವರದಿ ಮಾಡ್ತಿಲ್ಲ. ಬದಲಾಗಿ ಸಾಕ್ಷ್ಯ ಸಮೇತ ಕಲಬುರಗಿ ಸೆಂಟ್ರಲ್ ಜೈಲಿನ ಕರಾಳ ದಂದೆಯನ್ನ ಬಟಾಬಯಲು ಮಾಡ್ತಿದೆ. ಇಲ್ಲಿ ಹಣ ಕೊಟ್ರೆ ನಿಮಗೆ ಬೇಕಾದ್ದು ಸಿಗುತ್ತೆ ಎನೋದಕ್ಕೆ ಈ ದೃಶ್ಯಗಳೇ ಸಾಕ್ಷಿ. ಬಂಡಲ್ ಗಟ್ಟಲೇ ಸಿಗರೆಟ್, ಬ್ಯಾಗ್ ಗಟ್ಟಲೇ ಗುಟ್ಕಾ, ಏಂಜಾಯ್ ಮಾಡೋಕೆ ಕೂಲ್ ಡ್ರಿಂಕ್ಸ್, ಎನರ್ಜಿ ಡ್ರಿಂಕ್ ಇವೆಲ್ಲಾ ಪ್ರತಿನಿತ್ಯವೂ ಸಪ್ಲೈ ಆಗುತ್ತೆ.
ಅಷ್ಟೆ ಏಕೆ ಗಾಂಜಾ ಬೇಕಾ ಅದು ಕೂಡಾ ನಿಮಗೆ ಕೊಡೊಕೆ ಇಲ್ಲಿನ ಅಧಿಕಾರಿಗಳು ರೆಡಿ ಇದ್ದಾರೆ. ಅರೆ ಸೆಂಟ್ರಲ್ ಜೈಲ್ ನಲ್ಲಿ ಹುಲ್ಲು ಕಡ್ಡಿಯೂ ಒಳಗಡೆ ಹೋಗಲ್ಲ ಅಂತ ನೀವ್ ಅನ್ಕೊಂಡಿರಬಹುದು. ಈ ಸ್ಡೋರಿ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ದುಡ್ಡು ಕೊಟ್ಟರೆ ಬೇಕಾದ್ದು ಸಿಗುತ್ತೆ ಅಂತ. ಅಷ್ಟಕ್ಕೂ ಇಲ್ಲಿ ಖೈದಿಗಳು, ವಿಚಾರಣಾಧೀನ ಖೈದಿಗಳಿಗೆ ಈ ಪರಿ ರಾಜರೋಷವಾಗಿ ಸಪ್ಲೈ ಮಾಡ್ತಿರೋದು ಯಾರು ಅಂತೀರಾ? ಒನ್ಸ್ ಅಗೇನ್ ಅವರದೇ ಅಧಿಕಾರಿಗಳೇ ಎಂಜಲು ಕಾಸಿನಾಸೆಗೆ ಎಲ್ಲವನ್ನೂ ಸಪ್ಲೈ ಮಾಡ್ತಿದ್ದಾರೆ. ಸದ್ಯ ಕಲಬುರಗಿ ಜೈಲಿನಲ್ಲಿ ಆರ್ ಡಿ ಪಾಟೀಲ್, ಬಚ್ಚನ್, ಜಾನ್ ಎನ್ನೋ ನಟೋರಿಯಸ್ ಗಳನ್ನ ಹಿಡಿದು, 800 ಕ್ಕೂ ಹೆಚ್ಚು ಖೈದಿಗಳಿದ್ದಾರೆ.
ಹೌದು. ಇಷ್ಟೆಲ್ಲಾ ನಿಷೇಧಿತ ವಸ್ತುಗಳು ಜೈಲಿನೊಳಗೆ ಬಿಂದಾಸ್ ಆಗಿ ಎಂಟ್ರಿ ಕೊಡೋಕೆ ಇದೇ ಅಧಿಕಾರಿ ಕಾರಣವಂತೆ. ಹೌದು ಜೈಲು ಸೆಕ್ಯುರಿಟಿ ಹೊಣೆ ಹೊತ್ತಿರೋ ವಿಶ್ವನಾಥ ಪೊಲೀಸ್ ಪಾಟೀಲ್ ನೇ ಈ ಅಕ್ರಮದ ರೂವಾರಿಯಂತೆ. ಯಾಕೆಂದ್ರೆ ಈತ ಕಲಬುರಗಿ ಸೆಂಟ್ರಲ್ ಜೈಲ್ ನ ಸೆಕ್ಯೂರಿಟಿ ಹೊಣೆ ಹೊತ್ತಿದ್ದಾನೆ. ಅಂದ್ರೆ KSISF (Karnataka state industrial security force) ಇನ್ಸಪೆಕ್ಟರ್ ಆಗಿರೋ ವಿಶ್ವನಾಥ ಜೈಲಿನ ಒಳಗಡೆ ಹೋಗೋ ಪ್ರತಿಯೊಂದು ವಸ್ತುವಿನ ತಪಾಸಣೆ ಮಾಡಬೇಕು.
ಅದಕ್ಕಂತಲೇ ರಾಜ್ಯದ ಎಲ್ಲಾ ಸೆಂಟ್ರಲ್ ಜೈಲ್, ವಿಮಾನ ನಿಲ್ದಾಣ, ಹೈಕೋರ್ಟ್ ಸೆಕ್ಯೂರಿಟಿಗೆ ಅಂತ ಕೆಐಎಸ್ಐಎಫ್ ಅಧಿಕಾರಿಗಳನ್ನ ನಿಯೋಜನೆ ಮಾಡಿದೆ. ಜೈಲ್ ಒಳಗೆ ಸಣ್ಣ ಹುಲ್ಲು ಕಡ್ಡಿ ಹೋಗಬೇಕು ಅಂದ್ರು ಇವರ ಅನುಮತಿ ಬೇಕೆ ಬೇಕು. ಅಷ್ಟೆ ಏಕೆ ಖುದ್ದು ಜೈಲಿನ ಜೈಲರ್ ಕೂಡಾ ಮೇನ್ ಗೇಟ್ ನ ಬಳಿ ಇವರಿಂದ ತಪಾಸಣೆಗೊಳಪಟ್ಟೆ ಒಳ ಹೋಗಬೇಕು.
ಅಂತಹುದ್ದರಲ್ಲಿ ರಾಜರೋಷವಾಗಿ ಕಲಬುರಗಿ ಸೆಂಟ್ರಲ್ ಜೈಲ್ ನೊಳಗೆ ಅದ್ಯಾವುದೋ ಖಾಸಗಿ ವಾಹನಗಳು ಎಂಟ್ರಿ ಕೊಡ್ತಿವೆ. ಅದರಲ್ಲಿ ಏನೆಲ್ಲಾ ಇವೆ ಅನ್ನೋದು ಕೂಡಾ ಚೆಕ್ ಆಗ್ತಿಲ್ಲ ಎನ್ನೋದೆ ದೊಡ್ಡ ದುರಂತ. ಯಾಕೆಂದ್ರೆ ಜೈಲಿನ ಮೇಲಾಧಿಕಾರಿಗೊಂದಿಗೆ ಡೀಲ್ ಮಾಡಿಕೊಂಡಿರೋ ವಿಶ್ವನಾಥ, ಯಾವುದನ್ನೂ ಚೆಕ್ ಮಾಡದೇ ಖೈದಿಗಳಿಗೆ ಎಲ್ಲವನ್ನೂ ಸಪ್ಲೈ ಮಾಡ್ತಿದ್ದಾನೆ.
ಈ ಬಗ್ಗೆ ಖುದ್ದು ಕೆಐಎಸ್ ಐಎಫ್ ಸಿಬ್ಬಂದಿಗಳೇ ರಾಜ್ಯ ಆಂತರಿಕ ವಿಭಾಗದ ಐಜಿಪಿಗೆ ದೂರು ನೀಡಿದ್ದಾರೆ. ಸುಮಾರು ಮೂರ್ನಾಲ್ಕು ಪುಟಗಳ ದೂರು ನೀಡಿರೋ ಸಿಬ್ಬಂದಿ, ಯಾವುದೇ ಚೆಕ್ಕಿಂಗ್ ಇಲ್ಲದೇ ಬೇಕಾಬಿಟ್ಟಿ ಸಾಗಾಣೆ ಆಗ್ತಿದೆ. ಇದ್ರಿಂದ ಹೆಚ್ಚು ಕಮ್ಮಿ ಏನಾದ್ರು ಆದ್ರೆ ಯಾರು ಹೊಣೆ ಎನ್ನೋದನ್ನ ಸಾಕ್ಷಿ ಸಮೇತ ಪತ್ರ ಬರೆದಿದ್ದಾರೆ. ಯಾಕೆಂದ್ರೆ ಇಂದು ಗುಟ್ಕಾ, ಸಿಗರೇಟ್, ಗಾಂಜಾ ಸಪ್ಲೈ ಮಾಡೋ ವಾಹನದಲ್ಲಿ ಮಾರಾಕಾಸ್ತ್ರ, ಪಿಸ್ತೂಲ್ ಸಪ್ಲೈ ಆದ್ರೆ ಅದ್ರ ಹೊಣೆ ಯಾರು ಹೊರುತ್ತಾರೆ. ಹೀಗಾಗೇ ಸರಿಯಾಗಿ ಚೆಕ್ಕಿಂಗ್ ವ್ಯವಸ್ಥೆ ಮಾಡಿ ಅಂತ ಖುದ್ದು ಸಿಬ್ಬಂದಿಗಳೇ ಬರೆದಿರುವ ಪತ್ರವು ಆ ಇನ್ಸಪೆಕ್ಟರ್ ಅಂಧಾದುಂದಿ ದರ್ಬಾರ್ ಗೆ ಮತ್ತೊಂದು ಸಾಕ್ಷಿ ನೀಡಿದಂತಾಗಿದೆ.
ಒಟ್ನಲ್ಲಿ ಸಾಮನ್ಯವಾಗಿ ಜೈಲ್‌ನೊಳಗೆ ಅದ್ಯಾರೆ ಎಂಟ್ರಿ ಕೊಡಬೇಕು ಅಂದರೂ ಅನುಮತಿ ಬೇಕೆ ಬೇಕು. ಆದ್ರೆ ಇಲ್ಲಿ ಕೆಲ ಖಾಸಗಿ ವಾಹನಗಳು, ಲೋಡ್ ತುಂಬಿಕೊಂಡು ಬಿಂದಾಸ್ ಆಗಿ ಒಳಗಡೆ ಎಂಟ್ರಿಕೊಡ್ತಿವೆ. ಯಾವುದೇ ಎಂಟ್ರಿ ಕೂಡಾ ಮಾಡ್ತಿಲ್ಲ. ಇದೇ ವಿಚಾರ ಸದ್ಯ ಅಲ್ಲಿನ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದೆ. ಆದ್ರೆ ಖುದ್ದು ಪತ್ರದ ಮೂಲಕ ಆತಂಕ ವ್ಯಕ್ತಪಡಿಸಿದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರೋದು, ಈತನ ಅಂಧಾದರ್ಬಾರ್ ಇನ್ನಷ್ಟು ಹೆಚ್ಚಾಗೋಕೆ ಕಾರಣವಾಗಿದೆ. ಅದೇ ಏನೆ ಇರಲಿ ನಟೋರಿಯಸ್ ಗಳಿಗೆ ಈ ರೀತಿ ಐಷಾರಾಮಿ ಜೀವನ ಕಲ್ಪಿಸಿದ್ರೆ ಅವರು ಬದಲಾಗೋದ್ಯಾವಾಗ ಅನ್ನೋದೆ ಯಕ್ಷಪ್ರಶ್ನೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.