ಕಲಬುರಗಿ: 10 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರ, ಪ್ರಕರಣ ದಾಖಲು
ಕಲಬುರಗಿಯಲ್ಲಿ ವಿಕೃತ ಘಟನೆಯೊಂದು ನಡೆದಿದೆ. ಹೆತ್ತವರು ಕೂಲಿಗಾಗಿ ಮುಂಬೈನಲ್ಲಿದ್ದು ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಶಿಕ್ಷಣ ಕಲಿಯುತ್ತಿದ್ದ 10 ವರ್ಷದ ಬಾಲಕಿಗೆ ಚಾಕು ತೋರಿಸಿ ಬೆದರಿಸಿ 14 ಮತ್ತು 16 ವರ್ಷದ ಬಾಲಕರಿಬ್ಬರು ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ಈ ಬಾಲಕರು ಅತ್ಯಾಚಾರ ಮಾಡಿ ಪರಸ್ಪರ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ಕಲಬುರಗಿ, ಡಿ.19: ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರ ಎಸಗಿರುವ ಭಯಾನಕ ಕೃತ್ಯ ಕಲಬುರಗಿ (Kalaburagi) ಜಿಲ್ಲೆ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆತ್ತವರು ಕೂಲಿಗಾಗಿ ಮುಂಬೈನಲ್ಲಿದ್ದು ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಶಿಕ್ಷಣ ಕಲಿಯುತ್ತಿದ್ದ 10 ವರ್ಷದ ಬಾಲಕಿಗೆ (Girl) ಚಾಕು ತೋರಿಸಿ ಬೆದರಿಸಿ 14 ಮತ್ತು 16 ವರ್ಷದ ಬಾಲಕರಿಬ್ಬರು ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ಈ ಬಾಲಕರು ಅತ್ಯಾಚಾರ ಮಾಡಿ ಪರಸ್ಪರ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಕಾಳಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.
ಉಪ್ಪಿನಕಾಯಿ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಅತ್ಯಾಚಾರ ಯತ್ನ
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಗ್ರಾಮಯೊಂದರಲ್ಲಿ 48 ವರ್ಷದ ವ್ಯಕ್ತಿ ಗ್ರಾಮದ ಮಹಿಳೆ ಮೇಲೆ ಎರಗಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಸಂತ್ರಸ್ಥ ಮಹಿಳೆ ತನ್ನ ಮನೆಯಲ್ಲಿ ಮನೆಗೆಲಸದಲ್ಲಿ ತೊಡಗಿದ್ದಳು. ಆ ವೇಳೆ ಉಪ್ಪಿನಕಾಯಿ ಕೇಳುವ ನೆಪದಲ್ಲಿ ವ್ಯಕ್ತಿ ಮಹಿಳೆ ಮನೆಗೆ ನುಗ್ಗಿದ್ದಾನೆ. ಸಂತ್ರಸ್ಥ ಮಹಿಳೆಯು ನನ್ನ ತಂದೆ ಉಪ್ಪಿನ ಕಾಯಿ ಮಾರುತ್ತಿದ್ದರು. ನಮ್ಮ ಮನೆಯಲ್ಲಿ ಉಪ್ಪಿನ ಕಾಯಿ ಇಲ್ಲಾ ತಮ್ಮ ತಂದೆ ಉಪ್ಪಿನ ಕಾಯಿ ಮಾರಾಟ ಮಾಡುತ್ತಾನೆ ಎಂದರೂ ಕೇಳದೆ ಮನೆ ಪ್ರವೇಶ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆಯ ಕೆನ್ನೆ ಕಚ್ಚಿ ಗಂಭೀರ ಗಾಯಗೊಳಿಸಿದ್ದಾನೆ. ಮಹಿಳೆಯ ಚೀರಾಟಕ್ಕೆ ಅಕ್ಕಪಕ್ಕದವರು ಸೇರಿದ್ದು ಅಷ್ಟರಲ್ಲಿ ವ್ಯಕ್ತಿ ಓಡಿ ಹೋಗಿದ್ದಾನೆ.
ಇದನ್ನೂ ಓದಿ: ಮಂಗಳೂರು; ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಮಾಡಿ ಎಸ್ಕೇಪ್ ಆದ ಪತಿ
ಘಟನೆ ನಡೆದ ಬಳಿಕ ಸಂತ್ರಸ್ಥ ಮಹಿಳೆಯ ಸಂಬಂಧಿಕರೇ ಆರೋಪಿಯನ್ನ ಹುಡುಕುತ್ತಿದ್ದಾರೆ. ಮೇಲಾಗಿ ಹರಿಹರದಲ್ಲಿ ಬಚ್ಚಿಟ್ಟುಕೊಂಡಿದ್ದಾನೆ ಎಂಬ ಮಾಹಿತಿ ಇದೆ. ಪ್ರಕರಣವನ್ನ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಆರೋಪಿ ಬಂಧನಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ಗ್ರಾಮದ ಮಹಿಳೆಯರು ಸಂತ್ರಸ್ಥ ಮಹಿಳೆ ಪರ ಹೋರಾಟ ನಡೆಸಿದ್ದಾರೆ. ಆದಷ್ಟು ಬೇಗ ಆರೋಪಿಯನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ.
ನಾವು ಪೊಲೀಸರಿಗೆ ದೂರು ಕೊಟ್ಟಿದ್ದು ಆರೋಪಿ ಬಂಧನ ಆಗಿಲ್ಲ. ಓರ್ವ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಕಚ್ಚಿ ಗಾಯಗೊಳಿಸಲಾಗಿದೆ. ಮನೆಯಲ್ಲಿ ಮಕ್ಕಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆರೋಪಿಯನ್ನ ಬಂಧಿಸಿದ್ರೆ ಇಂತಹ ದುಷ್ಟರಿಗೆ ಪಾಠ ಕಲಿಸಿದಂತಾಗುತ್ತದೆ. ಆರೋಪಿ ಮಂಜಪ್ಪ ಬೇರೆ ಪ್ರಕರಣದಲ್ಲಿ ಸಹ ಆರೋಪಿ ಆಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಆದಷ್ಟು ಬೇಗ ಆರೋಪಿಯನ್ನ ಬಂಧಿಸಬೇಕಿದೆ ಎಂದು ಮಹಿಳೆಯರು ಮನವಿ ಮಾಡಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ