ಉತ್ತರಾದಿಮಠ VS ರಾಯರಮಠ: ಜಯತೀರ್ಥರ ಮೂಲ ಬೃಂದಾವನದ ಬಗ್ಗೆ ವಿವಾದ, ಪ್ರತಿಭಟನೆ

ಮಾಧ್ವ ಪರಂಪರೆಯ ಉತ್ತರಾದಿ ಮಠ ಮತ್ತು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಗಳು ಇದೀಗ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿರುವ ಜಯತೀರ್ಥರ ಮೂಲಬೃಂದಾವನ ವಿಚಾರವಾಗಿ ಮತ್ತೊಂದು ಸಂಘರ್ಷಕ್ಕೆ ಸಜ್ಜಾಗಿವೆ

ಉತ್ತರಾದಿಮಠ VS ರಾಯರಮಠ: ಜಯತೀರ್ಥರ ಮೂಲ ಬೃಂದಾವನದ ಬಗ್ಗೆ ವಿವಾದ, ಪ್ರತಿಭಟನೆ
ಕಲಬುರ್ಗಿಯಲ್ಲಿ ಮೌನ ಪ್ರತಿಭಟನೆ ನಡೆಸಿದ ಉತ್ತರಾದಿ ಮಠದ ಭಕ್ತರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 23, 2022 | 2:25 PM

ಕಲಬುರಗಿ: ಆನೆಗೊಂದಿಯ ನವಬೃಂದಾವನದ ಪದ್ಮನಾಭತೀರ್ಥರ ಆರಾಧನೆ ವಿಚಾರವಾಗಿ ಪರಸ್ಪರ ಕಾನೂನು ಸಮರ, ಸಂಘರ್ಷ ನಡೆಸುತ್ತಿದ್ದ ಮಾಧ್ವ ಪರಂಪರೆಯ ಉತ್ತರಾದಿ ಮಠ (Uttaradi Mutt) ಮತ್ತು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ (Mantralaya Raghavendra Swamy Mutt) ಮಠಗಳು ಇದೀಗ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿರುವ ಜಯತೀರ್ಥರ ಮೂಲಬೃಂದಾವನ ವಿಚಾರವಾಗಿ ಮತ್ತೊಂದು ಸಂಘರ್ಷಕ್ಕೆ ಸಜ್ಜಾಗಿವೆ. ಮಳಖೇಡ ಗ್ರಾಮದಲ್ಲಿರುವುದು ಮೂಲ ಬೃಂದಾವನ ಅಲ್ಲವೇ ಅಲ್ಲ ಎಂದು ವಾದಿಸುತ್ತಿರುವ ರಾಯರ ಮಠದ ಅನುಯಾಯಿಗಳು ಜಯತೀರ್ಥರ ಮೂಲ ಬೃಂದಾವನವು ಕೊಪ್ಪಳ ಜಿಲ್ಲೆಯ ಆನೆಗುಂದಿಯ ನವಬೃಂದಾವನ ನಡುಗಡೆಯಲ್ಲಿಯೇ ಇದೆ ಎಂದು ವಾದಿಸುತ್ತಿದ್ದಾರೆ. ಈ ವಾದವನ್ನು ಉತ್ತರಾದಿಮಠದ ಭಕ್ತರು ಒಪ್ಪುತ್ತಿಲ್ಲ. ರಾಯರ ಮಠದ ಅನುಯಾಯಿಗಳ ಹೇಳಿಕೆಯನ್ನು ಖಂಡಿಸಿ, ಕಲಬುರಗಿಯಲ್ಲಿ ಉತ್ತರಾದಿ ಮಠದ ಭಕ್ತರು ಪ್ರತಿಭಟನೆ ನಡೆಸಿದರು.

ಜಯತೀರ್ಥರ ಮೂಲ ಬೃಂದಾವನವು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕುನ ಮಳಖೇಡದಲ್ಲಿದೆ ಎಂದೇ ಬಹುತೇಕ ಮಾಧ್ವ ಭಕ್ತರು ನಂಬುತ್ತಾರೆ. ಆದರೆ ಇದೀಗ ‘ಮಳಖೇಡದಲ್ಲಿ ಇರುವುದು ಮೂಲ ಬೃಂದಾವನ ಅಲ್ಲ’ ಎಂದು ಮಂತ್ರಾಲಯ ರಾಯರ ಮಠದವರು ವಾದ ಆರಂಭಿಸಿದ್ದಾರೆ. ನವ ವೃಂದಾವನದಲ್ಲಿಯೇ ಜಯತೀರ್ಥರ ಮೂಲ ಬೃಂದಾವನ ಇದೆ ಎಂದು ಹೇಳುತ್ತಿದ್ದಾರೆ. ಇದು ಉತ್ತರಾದಿ ಮಠ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮಳಖೇಡದಲ್ಲಿ ಇರುವುದೇ ಜಯತೀರ್ಥರ ಮೂಲ ಬೃಂದಾವನ. ಈ ನಿಟ್ಟಿನಲ್ಲಿ ಹೊಸದಾಗಿ ಯಾವುದೇ ವಿವಾದ ಹುಟ್ಟುಹಾಕಬಾರದು ಎಂದು ಜಯತೀರ್ಥರ ಭಕ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕನ್ನಡ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪಾದಯಾತ್ರೆಯನ್ನೂ ನಡೆಸಲಾಯಿತು.

ಜಯತೀರ್ಥರು ಯಾರು? ಆಚಾರ್ಯ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವನ್ನು ವ್ಯಾಖ್ಯಾನಗಳ ಮೂಲಕ ಹೆಚ್ಚು ನಿಚ್ಚಳವಾಗುವಂತೆ ಮಾಡಿದ ಪ್ರಖರ ಅಧ್ಯಾತ್ಮ ಚಿಂತಕರು ಜಯತೀರ್ಥರು. ಇವರನ್ನು ಮಧ್ವಮತದ ಅನುಯಾಯಿಗಳು ಟೀಕಾಚಾರ್ಯರೆಂದೇ ಗೌರವಿಸುತ್ತಾರೆ. ಮಾಧ್ವ ಪರಂಪರೆಯ ಎಲ್ಲ ಮಠಗಳೂ ಜಯತೀರ್ಥರನ್ನು ಸಮಾನವಾಗಿ ಗೌರವಿಸುತ್ತವೆ. ಇವರು ರಚಿಸಿರುವ ‘ಶ್ರೀಮನ್ಯಾಯಸುಧಾ’ ಗ್ರಂಥವನ್ನು ದ್ವೈತ ಸಿದ್ಧಾಂತ ಅಭ್ಯಾಸ ಮಾಡುವವರು ಮಹತ್ವದ ಕೃತಿ ಎಂದು ಪರಿಗಣಿಸುತ್ತಾರೆ.

ವಿಡಿಯೊ: ವಿವಾದಕ್ಕೀಡಾದ ಮಂತ್ರಾಲಯ ರಾಘವೇಂದ್ರ ಮಠದ ಸುವಿದ್ಯೇಂದ್ರ ತೀರ್ಥರ ಭಾಷಣ

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Thu, 23 June 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು