ಕಲಬುರಗಿಯಲ್ಲಿ ಇಬ್ಬರು ಮಕ್ಕಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆ; ಪುತ್ರಿ ಸಾವು, ಪುತ್ರ ಬಚಾವು

| Updated By: ಸಾಧು ಶ್ರೀನಾಥ್​

Updated on: Oct 26, 2021 | 11:23 AM

ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ದೀಕ್ಷಾ ಈ ಕುಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ದೀಕ್ಷಾ ಅತ್ತೆ ಕೂಡ ದೀಕ್ಷಾ ಮೇಲೆ ಕಳ್ಳತನ ಆರೋಪ ಹೊರೆಸಿದ್ದರು ಎಂದು ತಿಳಿದುಬಂದಿದೆ. ಮಕ್ಕಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ದೀಕ್ಷಾ. ದೀಕ್ಷಾ ಮತ್ತು ಸಿಂಚನಾ ಸ್ಥಳದಲ್ಲೇ ಸಾವು

ಕಲಬುರಗಿಯಲ್ಲಿ ಇಬ್ಬರು ಮಕ್ಕಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆ; ಪುತ್ರಿ ಸಾವು, ಪುತ್ರ ಬಚಾವು
ಸಂಗ್ರಹ ಚಿತ್ರ
Follow us on

ಕಲಬುರಗಿ: ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ, ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕಲಬುರಗಿಯ ಪಂಚಶೀಲ ನಗರದಲ್ಲಿ ನಡೆದಿದೆ. 27 ವರ್ಷದ ದೀಕ್ಷಾ ಶರ್ಮಾ ಕುಕೃತ್ಯ ಎಸಗಿದ ಮಹಿಳೆ. ದೀಕ್ಷಾರ ಎರಡು ವರ್ಷದ ಪುತ್ರಿ ಸಿಂಚನಾ ತಾಯಿಯೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನು 4 ವರ್ಷದ ಪುತ್ರ ಧನಂಜಯ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ದೀಕ್ಷಾ ಈ ಕುಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ದೀಕ್ಷಾ ಅತ್ತೆ ಕೂಡ ದೀಕ್ಷಾ ಮೇಲೆ ಕಳ್ಳತನ ಆರೋಪ ಹೊರೆಸಿದ್ದರು ಎಂದು ತಿಳಿದುಬಂದಿದೆ. ಮಕ್ಕಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ದೀಕ್ಷಾ. ದೀಕ್ಷಾ ಮತ್ತು ಸಿಂಚನಾ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಪುತ್ರ ಧನಂಜಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಕಲಬುರಗಿ ನದರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಟ್ಟಿಂಗ್ ಮತ್ತು ಜೂಜಾಟ: ಯುವಕ ನೇಣಿಗೆ ಶರಣು
ಚಾಮರಾಜನಗರ: ಸಾಲಬಾಧೆ ತಾಳಲಾರದೆ ಯುವಕ ನೇಣಿಗೆ ಶರಣಾಗಿದ್ದಾನೆ. ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಬಂಗಾರು (26) ನೇಣಿಗೆ ಶರಣಾದ ಯುವಕ. ಈತ ಕ್ರಿಕೆಟ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ತೊಡಗಿದ್ದ. ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದಿಲ್ಲ ಎಂದಿದ್ದಕ್ಕೆ ರೈಲಿನ ಕೆಳಗೆ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ
ಬೆಂಗಳೂರು: ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆಯಲಿಲ್ಲ ಎಂದು ತಂದೆ ಬೈದ ಮಾತಿಗೆ ಬೇಸರಗೊಂಡ ಬಾಲಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಮಹಾದೇವಪುರದಲ್ಲಿ ನಡೆದಿದೆ. ತಂದೆ ಬೈದಿದಕ್ಕೆ ಬೇಸರಗೊಂಡ ಬಾಲಕ ರೈಲಿನ ಕೆಳಗೆ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಹದೇವಪುರದಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಬಾಲಕ, ಆ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದೇ ಅಕ್ಟೋಬರ್ 23 ರ ಮಧ್ಯಾಹ್ನ 4.30ಕ್ಕೆ ಮನೆ ಬಿಟ್ಟಿದ್ದ 16 ವರ್ಷದ ಬಾಲಕ, ರಾತ್ರಿ 7 ಗಂಟೆಗೆ ಹೊರಡುವ ಕೆಕೆ‌ ಎಕ್ಸ್​ಪ್ರೇಸ್​ ಟ್ರೈನ್ ಅಡಿ ಮಲಗಿದ್ದಾನೆ. ಬಳಿಕ ಅಲ್ಲಿಂದಲೇ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವಿಡಿಯೋದಲ್ಲಿ ತಂದೆ ಬೈಯಬಾರದಿತ್ತು ಎಂದು ಹೇಳಿರುವ ಬಾಲಕ, ಮಾಡಿದ ವಿಡಿಯೋವನ್ನು ತನ್ನ ಚಿಕ್ಕಪ್ಪನಿಗೆ ಕಳುಹಿಸಿದ್ದಾನೆ.

ಈ ವಿಡಿಯೋದಲ್ಲಿ ಕೆಎಸ್​ಆರ್​ ರೈಲ್ವೆ ನಿಲ್ದಾಣದ ಬಗ್ಗೆ ಅನೌನ್ಸ್​ಮೆಂಟ್ ಕೂಡ ರೆಕಾರ್ಡ್ ಆಗಿತ್ತು. ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದ ಟ್ರೈನ್ ಅನೌನ್ಸ್​ಮೆಂಟ್​ ಸುಳಿವಿನಿಂದ ಬಾಲಕ ಪತ್ತೆಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಮೆಜೆಸ್ಟಿಕ್ ರೆಲ್ವೆ ನಿಲ್ದಾಣಕ್ಕೆ ಬಾಲಕನ ಪೋಷಕರು ಆಗಮಿಸಿದ್ದಾರೆ. ಬಳಿಕ ಆರ್​ಪಿಎಫ್​ ತಂಡದ ಆಂಟಿ ಚೈಲ್ಡ್ ಟ್ರಾಫಕಿಂಗ್ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಕೆಕೆ ಎಕ್ಸ್​ಪ್ರೇಸ್​ ಟ್ರೈನ್ ಅಡಿ ಬಾಲಕ ಪತ್ತೆಯಾಗಿದ್ದಾನೆ. ಸದ್ಯ ಆತ್ಮಹತ್ಯೆಗೆ ಯತ್ನಿಸಿ, ರೈಲಿನ ಕೆಳಗೆ ಅವಿತಿದ್ದ ಬಾಲಕನ ರಕ್ಷಣೆ ಮಾಡಲಾಗಿದೆ. ಅಲ್ಲದೆ ಬಾಲಕನಿಗೆ ಬುದ್ಧಿವಾದ ಹೇಳಿ, ಪೋಷಕರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ:
ಇಬ್ಬರು ಪುತ್ರಿಯರ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ, 4 ವರ್ಷದ ಮಗುವನ್ನು ರಕ್ಷಿಸಿದ ಸ್ಥಳೀಯರು

ಉಡಿ ತುಂಬಿದ್ರೆ ಮಡಿಲು ತುಂಬುವ ತುಳಜಾಭವಾನಿ|Davanagere Tulajabhavani Temple|TV9 TEMPLE TOUR

(woman commits suicide in kalaburagi along with 2 children daughter dead)

Published On - 8:21 am, Tue, 26 October 21