ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಆರ್ಭಟ ಹೆಚ್ಚಾದ ಹಿನ್ನೆಲೆ ರೌಡಿ ಆಸಾಮಿಗಳ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಕಮೀಷನರ್ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ನಿನ್ನೆ (ಜುಲೈ 6) ನಡೆದ ವಾರದ ಸಭೆಯಲ್ಲಿ ಡಿಸಿಪಿಗಳಿಗೆ ನಗರದ ರೌಡಿಗಳ ಮೇಲೆ ಹೆಚ್ಚು ನಿಗಾ ವಹಿಸಲು ಕಮಲ್ ಪಂತ್ ಸೂಚಿಸಿದ್ದಾರೆ. ಕಳೆದ 15 ದಿನಗಳಲ್ಲಿ ನಾಲ್ಕು ಪ್ರತಿಕಾರ ದಾಳಿಗಳು ನಡೆದಿವೆ. ಹಳೆ ವೈಷಮ್ಯದ ಮೇಲೆ ನಾಲ್ಕು ಕೊಲೆಯಾದ ಕಾರಣ ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ರೌಡಿಶೀಟರ್ ಚಲನವಲನಗಳ ಮೇಲೆ ಹೆಚ್ಚು ನಿಗಾ ಇಡಲು ತಿಳಿಸಿದ್ದಾರೆ.
ಜೂನ್ 22 ರಂದು ರಶೀದ್ ಮಲಬಾರಿ ಸಹಚರ ಕರೀಂ ಅಲಿ ಹತ್ಯೆ ನಡೆದಿದೆ. ಜೂನ್ 24 ರಂದು ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆಯಾಗಿದೆ. ಜುಲೈ 2 ರಂದು ಫೈನಾನ್ಸಿಯರ್ ಮದನ್ ಕೊಲೆ ನಡೆದಿದೆ. ಜುಲೈ 3ಕ್ಕೆ ಡಿಜೆ ಹಳ್ಳಿಯಲ್ಲಿ ಕೃಷ್ಣಮೂರ್ತಿ ಕೊಲೆಯಾಗಿದೆ. ಹಳೆ ವೈಷಮ್ಯ ಹಿನ್ನೆಲೆ ನಗರದಲ್ಲಿ ಪ್ರತಿದಾಳಿಗಳು ಹೆಚ್ಚಾಗಿವೆ. ಮದನ್ ಹಾಗೂ ರೇಖಾರನ್ನು ಹಾಡಹಗಲೇ ಹತ್ಯೆಗೈದಿದ್ದರು. ಹೀಗಾಗಿ ರೌಡಿಗಳ ಮೇಲೆ ಕಣ್ಣಿಟ್ಟು ಕಠಿಣ ಕ್ರಮಕೈಗೊಳ್ಳಲು ಕಮಲ್ಪಂತ್ ಸೂಚಿಸಿದ್ದಾರೆ.
ರೌಡಿಶೀಟರ್ ಸೆರೆ
ಗನ್ನಿಂದ ಬೆದರಿಸಿ ವಸೂಲಿ ಮಾಡುತ್ತಿದ್ದ ರೌಡಿಶೀಟರ್ನ ಪೊಲೀಸರು ಬಂಧಿಸಿದ್ದಾರೆ. ಮಧುಸೂಧನ್ ಅಲಿಯಾಸ್ ಗನ್ ಮಧು ಎಂಬುವವನನ್ನು ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಧುಸೂಧನ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದು, ಪೊಲೀಸರು ವಸೂಲಿ ಮಾಡುತ್ತಿದ್ದವನನ್ನ ಹೆಡೆಮುರಿ ಕಟ್ಟಿ ಪರಪ್ಪನ ಅಗ್ರಹಾರಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ
‘ಫ್ಯಾಂಟಮ್’ ಬದಲು ‘ವಿಕ್ರಾಂತ್ ರೋಣ’ ಎಂದು ಶೀರ್ಷಿಕೆ ಬದಲಾಗಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಎಫ್ಐಆರ್ನಲ್ಲಿ ಸಚಿವರ ಮಗನ ಹೆಸರೇ ಇಲ್ಲ, ದೂರನ್ನು ಪೊಲೀಸರೇ ಬರೆದುಕೊಂಡಿದ್ದಾರೆ.. -ಮೃತ ಕೂಡಲೆಪ್ಪ ಮಗ ಅಸಮಾಧಾನ
(Kamal Pant has instructed DCPs to focus on Rowdy Sheeter activities)