‘ಫ್ಯಾಂಟಮ್’ ಬದಲು ‘ವಿಕ್ರಾಂತ್ ರೋಣ’ ಎಂದು ಶೀರ್ಷಿಕೆ ಬದಲಾಗಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
‘ವಿಕ್ರಾಂತ್ ರೋಣ’ ಚಿತ್ರಕ್ಕೆ ಬಹುತೇಕ ಶೂಟಿಂಗ್ ಮುಗಿದಿದೆ. ಹಾಡಿನ ಚಿತ್ರೀಕರಣ ಬಾಕಿ ಇದೆ. ಕಿಚ್ಚ ಸುದೀಪ್ ಅಭಿಮಾನಿಗಳು ಈ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೊದಲು ಈ ಚಿತ್ರಕ್ಕೆ ‘ಫ್ಯಾಂಟಮ್’ ಎಂದು ಹೆಸರು ಇಡಲಾಗಿತ್ತು. ಆದರೆ ಏಕಾಏಕಿ ನಿರ್ದೇಶಕ ಅನೂಪ್ ಭಂಡಾರಿ ಅವರು ಶೀರ್ಷಿಕೆ ಬದಲು ಮಾಡಿ ‘ವಿಕ್ರಾಂತ್ ರೋಣ’ ಎಂದು ಘೋಷಿಸಿದರು. ವಿಶ್ವದ ಅತಿ ಎತ್ತರದ ಕಟ್ಟಡ ಎನಿಸಿಕೊಂಡ ಬುರ್ಜ್ ಖಲೀಫಾ ಮೇಲೆ ಟೈಟಲ್ ಲಾಂಚ್ ಮಾಡಲಾಯಿತು. ಅಷ್ಟಕ್ಕೂ ನಿರ್ದೇಶಕ ಅನೂಪ್ ಭಂಡಾರಿ ಅವರು ಹೀಗೆ ಶೀರ್ಷಿಕೆ ಬದಲಾಯಿಸಲು ಕಾರಣ ಏನು ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆ ಪ್ರಶ್ನೆಗೆ ಸ್ವತಃ ನಿರ್ದೇಶಕರು ಮಾತನಾಡಿದ್ದಾರೆ.
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ನಟಿಸುತ್ತಿದ್ದಾರೆ. ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ:
ಬರಲಿದೆಯಾ ‘ಈಗ 2’? ಕಿಚ್ಚ ಸುದೀಪ್-ರಾಜಮೌಳಿ ಮತ್ತೆ ಜೊತೆಯಾಗೋದು ಯಾವಾಗ?
ಧೋನಿ ಜನ್ಮದಿನಕ್ಕೆ ಕಾಮನ್ ಡಿಪಿ ಅನಾವರಣ ಮಾಡಿದ ಸುದೀಪ್; ಫೋಟೋ ನೋಡಿ ಫ್ಯಾನ್ಸ್ ಫಿದಾ