KGF Chapter 2: ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಬಗ್ಗೆ ಮಹತ್ವದ ಘೋಷಣೆ ಮಾಡಿದ ಪ್ರಶಾಂತ್ ನೀಲ್
KGF Chapter 2 Release Date: ಕೆಜಿಎಫ್-2 ದೊಡ್ಡ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಅಲ್ಲದೆ, ಇದರ ಮೇಲೆ ನಿರೀಕ್ಷೆ ಕೂಡ ಹೆಚ್ಚಿದೆ. ಹೀಗಾಗಿ, ಈ ಕೆಜಿಎಫ್ 2 ನಿರ್ಮಾಪಕರು ತರಾತುರಿಯಲ್ಲಿ ಸಿನಿಮಾ ರಿಲೀಸ್ ಮಾಡುವ ನಿರ್ಧಾರಕ್ಕೆ ಬರುವುದಿಲ್ಲ ಎನ್ನಲಾಗಿತ್ತು. ಈಗ ಹಾಗೆಯೇ ಆಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇನ್ನು ಕೇವಲ 10 ದಿನಗಳಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತೆರೆಕಾಣಬೇಕಿತ್ತು. ಆದರೆ, ಈಗ ಚಿತ್ರಮಂದಿರಗಳು ತೆರೆಯದ ಕಾರಣ ಅದು ಸಾಧ್ಯವಾಗುತ್ತಿಲ್ಲ. ಪ್ರಶಾಂತ್ ನೀಲ್ ನಿರ್ದೇಶನ ಇರುವ, ಯಶ್ ಮುಖ್ಯಭೂಮಿಕೆ ನಿರ್ವಹಿಸರುವ ಈ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದನ್ನು ಪ್ರಶಾಂತ್ ನೀಲ್ ನೀಡಿದ್ದಾರೆ. ಈ ಘೋಷಣೆಯಿಂದ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ಉಂಟಾಗಿದೆ.
ಕೆಜಿಎಫ್-2 ದೊಡ್ಡ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಅಲ್ಲದೆ, ಇದರ ಮೇಲೆ ನಿರೀಕ್ಷೆ ಕೂಡ ಹೆಚ್ಚಿದೆ. ಹೀಗಾಗಿ, ಈ ಕೆಜಿಎಫ್ 2 ನಿರ್ಮಾಪಕರು ತರಾತುರಿಯಲ್ಲಿ ಸಿನಿಮಾ ರಿಲೀಸ್ ಮಾಡುವ ನಿರ್ಧಾರಕ್ಕೆ ಬರುವುದಿಲ್ಲ ಎನ್ನಲಾಗಿತ್ತು. ಈಗ ಹಾಗೆಯೇ ಆಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, ಕೆಜಿಎಫ್ 2 ರಿಲೀಸ್ ದಿನಾಂಕ ಮುಂದೂಡುತ್ತಿರುವುದನ್ನು ಖಚಿತಪಡಿಸಿದ್ದಾರೆ.
‘ಸಿನಿಮಾ ಹಾಲ್ನಲ್ಲಿ ಗ್ಯಾಂಗ್ಸ್ಟರ್ಗಳು ತುಂಬಿರುವಾಗ ಮಾತ್ರ ಮಾನ್ಸ್ಟರ್ ಬರುತ್ತಾನೆ. ಅವನು ಬರೋ ಹೊಸ ಡೇಟ್ ಶೀಘ್ರದಲ್ಲೇ ಘೋಷಣೆ ಮಾಡಲಿದ್ದೇವೆ’ ಎಂದಿದ್ದಾರೆ ಪ್ರಶಾಂತ್ ನೀಲ್. ಕೊವಿಡ್ ಕಾರಣದಿಂದ ಸಿನಿಮಾ ಹಾಲ್ಗಳನ್ನು ಕರ್ನಾಟಕದಲ್ಲಿ ಮುಚ್ಚಲಾಗಿದೆ. ಸಿನಿಮಾ ಹಾಲ್ ತೆರೆಯೋಕೆ ಸಂಪೂರ್ಣ ಅವಕಾಶ ಸಿಕ್ಕ ನಂತರವೇ ಕೆಜಿಎಫ್ 2 ರಿಲೀಸ್ ಆಗಲಿದೆ.
Witness the MAGNUM OPUS come to life soon.#KGFChapter2 @hombalefilms @TheNameIsYash @prashanth_neel @VKiragandur @HombaleGroup @duttsanjay @TandonRaveena @SrinidhiShetty7 @Karthik1423 @excelmovies @AAFilmsIndia @VaaraahiCC @PrithvirajProd @DreamWarriorpic @LahariMusic pic.twitter.com/yBjhXy1WPh
— Prashanth Neel (@prashanth_neel) July 6, 2021
ಇನ್ನು, ಕೆಜಿಎಫ್ 2 ಸೆಪ್ಟೆಂಬರ್ 9ರಂದು ಸಿನಿಮಾ ತೆರೆಗೆ ಬರಲಿದೆ ಎನ್ನುವ ಮಾತು ಹರಿದಾಡಿದೆ. ಆದರೆ, ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಇಂದು ಕೂಡ ಪ್ರಶಾಂತ್ಆ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಕೆಜಿಎಫ್ 2ನಲ್ಲಿ ಯಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಶ್ರೀನಿಧಿ ಶೆಟ್ಟಿ ಚಿತ್ರದ ನಾಯಕಿ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಕೆಜಿಎಫ್-2 ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಮಾಡುವ ಸಾಧ್ಯತೆ ಇದೆ. ಸದ್ಯ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ.
ಇದನ್ನೂ ಓದಿ: ‘ಕೆಜಿಎಫ್’ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ ಮಾತಿನಿಂದ ಮುಗಿಯಿತು ‘ಕಿರಿಕ್ ಪಾರ್ಟಿ’ ವಿವಾದ
Published On - 5:35 pm, Tue, 6 July 21