ಬೆಂಗಳೂರು: ಯಾವುದೇ ಕಾರಣಕ್ಕೂ ಖಾಸಗಿ ಶಾಲಾ ಶುಲ್ಕವನ್ನು ಕಡಿಮೆ ಮಾಡುವುದಿಲ್ಲ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು. ಶೇಕಡಾ 20ರಷ್ಟು ಮಕ್ಕಳು ಕೂಡ ಶಾಲೆಗೆ ದಾಖಲಾಗಿಲ್ಲ. ಎಲ್ಲ ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಖಲಾಗಬೇಕು. ಶಾಲೆಗೆ ದಾಖಲಾಗುವಂತೆ ಸರ್ಕಾರ ನಿರ್ದೇಶಿಸಬೇಕು. ಒಂದೇ ಕಂತಿನಲ್ಲಿ ಶುಲ್ಕ ಕಟ್ಟುವುದನ್ನು ನಾವೂ ವಿರೋಧಿಸುತ್ತೇವೆ ಎಂದು ಶಶಿಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಒಂದೇ ಕಂತಿನಲ್ಲಿ ಶುಲ್ಕ ಕಟ್ಟಿ ಎನ್ನುವ ಶಾಲೆಗಳ ವಿರುದ್ಧ ಇಲಾಖೆ ಕ್ರಮ ತೆಗೆದುಕೊಳ್ಳಲಿ. 3 ತಿಂಗಳೊಳಗೆ ಪೋಷಕರು ಬಾಕಿ ಶುಲ್ಕ ಪಾವತಿಸಬೇಕು. ಬಾಕಿ ಶುಲ್ಕ ಕಟ್ಟುವಂತೆ ಕೋರ್ಟ್ ಆದೇಶಿಸಿತ್ತು. ಆದರೆ ಸರ್ಕಾರ ಯಾವುದೇ ಆದೇಶಗಳನ್ನೂ ಹೊರಡಿಸಿಲ್ಲ ಎಂದು ಶಶಿಕುಮಾರ್ ಹೇಳಿದರು.
ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಸಹಾಯ ಸಿಕ್ಕಿಲ್ಲ. ಕೆಲ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ಪಡೆದುಕೊಳ್ತಿವೆ. ಆದರೆ ಎಲ್ಲ ಶಾಲೆ ವಿರುದ್ಧ ಆರೋಪಿಸೋದನ್ನ ಖಂಡಿಸುತ್ತೇವೆ. ಶುಲ್ಕವನ್ನು ಶೇ.15ರಷ್ಟಕ್ಕಿಂತ ಹೆಚ್ಚಿಸದಂತೆ ಸರ್ಕಾರ ಹೇಳಿತ್ತು. ಸರ್ಕಾರದ ಮಾತಿಗೆ ನಾವು ಬೆಲೆ ಕೊಟ್ಟಿದ್ದೇವೆ. ಕೆಲ ಪೋಷಕರು ಸಂಪೂರ್ಣ ಸಂಬಳ ಪಡೆಯುತ್ತಿದ್ದಾರೆ. ನಾವು ಯಾವ ಮಾನದಂಡದ ಮೇಲೆ ಶುಲ್ಕ ಕೇಳಬಾರದು. ಎಷ್ಟೋ ಪೋಷಕರು ಶೇ.70ರಷ್ಟು ಶುಲ್ಕವನ್ನೇ ಪಾವತಿಸಿಲ್ಲ. ಕಳೆದ 2-3 ವರ್ಷಗಳಿಂದ ಶಾಲಾ ಶುಲ್ಕ ಬಾಕಿ ಇದೆ ಎಂದು ತಿಳಿಸಿದ ಅವರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಸರ್ಕಾರದ ಶುಲ್ಕ ಕಡಿತ ಆದೇಶ ಕೇವಲ ಕಳೆದ ವರ್ಷಕ್ಕಷ್ಟೇ. ಹಳೆಯ ವರ್ಷದ ಬಾಕಿ ಶುಲ್ಕದ ಹಣ ಇನ್ನೂ ಬಂದಿಲ್ಲ. ನಾವು ಶುಲ್ಕ ಪಾವತಿಸುವಂತೆ ಪಟ್ಟು ಹಿಡಿದು ಕುಳಿತಿಲ್ಲ. ಹಿಂದಿನ ವರ್ಷಗಳ ಶುಲ್ಕ ಪಾವತಿಸಲು ಒತ್ತಾಯಿಸುತ್ತಿದ್ದೇವೆ. ಪೋಷಕರು ವಿದ್ಯುತ್, ವಾಟರ್, ಎಲ್ಲ ಬಿಲ್ ಕಟ್ಟುತ್ತಿದ್ದಾರೆ. ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸಲಾಗಲ್ಲ ಅಂದ್ರೆ ಹೇಗೆ. ಶುಲ್ಕ ಬಾಕಿ ಉಳಿಸಿಕೊಂಡವರಿಗೆ ಹೇಗೆ ಶಿಕ್ಷಣ ಕೊಡಬೇಕು? ಎಂದು ಶಶಿಕುಮಾರ್ ಪ್ರಶ್ನಿಸಿದ್ದಾರೆ.
ಹಾಲನೂರು ಎಸ್.ಲೇಪಾಕ್ಷಿ ಒತ್ತಾಯ
ಮುಖ್ಯಮಂತ್ರಿಗಳು ಎಲ್ಲೆಲ್ಲೋ ನಿಂತು ಹೇಳಿಕೆ ಕೊಡುವುದಲ್ಲ. ಗ್ರಾಮಾಂತರ ಭಾಗಕ್ಕೆ ಬಂದು ಶಾಲೆಗಳ ಪರಿಸ್ಥಿತಿ ನೋಡಬೇಕು ಎಂದು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಹಾಲನೂರು ಎಸ್.ಲೇಪಾಕ್ಷಿ ಒತ್ತಾಯಿಸಿದರು. ಶಿಕ್ಷಕರಿಗೆ ಸಿಎಂ ಸಂಬಳ ಕೊಡಲಿ, ನಮ್ಮ ಇಎಂಐ ಪಾವತಿಸಲಿ. ಸುಖಾಸುಮ್ಮನೇ ಶುಲ್ಕ ಕಟ್ಟದ ರೀತಿ ಹೇಳಿಕೆಗಳನ್ನ ಕೊಡಬೇಡಿ ಎಂದು ಕಿಡಿಕಾರಿದ್ದಾರೆ.
ಮೃತ ಪೋಷಕರ ಮಕ್ಕಳಿಗೆ ಕಡಿಮೆ ಶುಲ್ಕ ಪಡೆಯಲು ಸಿದ್ಧ
ಕೊರೊನಾದಿಂದ ಮೃತಪಟ್ಟ ಪೋಷಕರ ಮಕ್ಕಳಿಂದ ಕಡಿಮೆ ಶುಲ್ಕವನ್ನು ಪಡೆದು ಶಿಕ್ಷಣ ನೀಡಲು ನಾವು ಸಿದ್ಧರಿದ್ದೇವೆ. ಈ ಬಗ್ಗೆ ಶಿಕ್ಷಣ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಶಾಲಾ ಒಕ್ಕೂಟದ ಜತೆ ಶಿಕ್ಷಣ ಸಚಿವರು ಚರ್ಚಿಸಲಿ ಎಂದು ಖಾಸಗಿ ಶಾಲಾ ಒಕ್ಕೂಟದ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದಕ್ಕೆ ಮನನೊಂದ ಕಾರವಾರ ವಿದ್ಯಾರ್ಥಿನಿ ಆತ್ಮಹತ್ಯೆ
ಶಿಕ್ಷಣ ಸಚಿವರ ವಿರುದ್ಧ ಅಸಮಧಾನ ಹೊರಹಾಕಿದ ಖಾಸಗಿ ಶಾಲೆಗಳ ಒಕ್ಕೂಟ; ಇಂದು ಸಭೆಗೆ ನಿರ್ಧಾರ
(KAMS general secretary Shamsikumar said school fees were not reduced)
Published On - 1:32 pm, Sun, 13 June 21