AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಕರೆಗಳು ಕನ್ವರ್ಟ್ ಪ್ರಕರಣ; ಆರೋಪಿಗಳಿಗೆ ಪಾಕ್ ಇಂಟೆಲಿಜೆನ್ಸ್ ಜೊತೆ ನಂಟಿರುವ ಶಂಕೆ

ಭಾರತೀಯ ಸೇನೆಯ ಬಗ್ಗೆ ಮಾಹಿತಿ ಕಲೆಹಾಕಲು ವಿವಿಧ ಸೇನಾ ನೆಲೆಗಳಿಗೂ ಅಪರಿಚಿತ ಕರೆಗಳು ಬಂದಿದ್ದವು. ಸೇನಾಧಿಕಾರಿಗಳ ಸೋಗಿನಲ್ಲಿ ಮಾಹಿತಿ ಸಂಗ್ರಹಕ್ಕೆ ಕರೆ ಮಾಡಲಾಗಿತ್ತು. ಇದೇ ಆರೋಪಿಗಳು ಇದಕ್ಕೆ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಜಾಲದ ಬಗ್ಗೆ ಆರ್ಮಿ ಇಂಟೆಲಿಜೆನ್ಸಿಗೆ ಅನುಮಾನ ಹೊರ ಹಾಕಿದೆ.

ಅಂತಾರಾಷ್ಟ್ರೀಯ ಕರೆಗಳು ಕನ್ವರ್ಟ್ ಪ್ರಕರಣ; ಆರೋಪಿಗಳಿಗೆ ಪಾಕ್ ಇಂಟೆಲಿಜೆನ್ಸ್ ಜೊತೆ ನಂಟಿರುವ ಶಂಕೆ
ಬೆಂಗಳೂರಿನಲ್ಲಿ ಸಿಮ್​ ಕಾರ್ಡ್​ ಬಳಸಿ ಸೇನೆಯ ಮಾಹಿತಿಗೆ ಕನ್ನ
TV9 Web
| Updated By: ಆಯೇಷಾ ಬಾನು|

Updated on: Jun 13, 2021 | 12:34 PM

Share

ಬೆಂಗಳೂರು: ಮಿಲಿಟರಿ ನೀಡಿದ ಮಾಹಿತಿ ಮೇರೆಗೆ ಅಂತಾರಾಷ್ಟ್ರೀಯ ಕರೆಗಳನ್ನು ಕನ್ವರ್ಟ್ ಮಾಡಿ ದೇಶದ ಭದ್ರತೆಗೆ ಗಂಡಾಂತರ ತರುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಿಮ್ ಕಿಟ್ ಪ್ರಕರಣದ ಬಗ್ಗೆ ಬೆಂಗಳೂರು ಸಿಸಿಬಿಯಿಂದ ಎನ್‌ಐಎ ಮಾಹಿತಿ ಪಡೆದಿದೆ. ಬಂಧಿತ ಆರೋಪಿಗಳಿಗೆ ಪಾಕ್ ಇಂಟೆಲಿಜೆನ್ಸ್ ಜೊತೆ ನಂಟಿರುವ ಬಗ್ಗೆ ಎನ್‌ಐಎಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಸಿಬಿಯ ಭಯೋತ್ಪಾದಕ ನಿಗ್ರಹ ದಳದಿಂದ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಭಾರತೀಯ ಸೇನೆಯ ಬಗ್ಗೆ ಮಾಹಿತಿ ಕಲೆಹಾಕಲು ವಿವಿಧ ಸೇನಾ ನೆಲೆಗಳಿಗೂ ಅಪರಿಚಿತ ಕರೆಗಳು ಬಂದಿದ್ದವು. ಸೇನಾಧಿಕಾರಿಗಳ ಸೋಗಿನಲ್ಲಿ ಮಾಹಿತಿ ಸಂಗ್ರಹಕ್ಕೆ ಕರೆ ಮಾಡಲಾಗಿತ್ತು. ಇದೇ ಆರೋಪಿಗಳು ಇದಕ್ಕೆ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಜಾಲದ ಬಗ್ಗೆ ಆರ್ಮಿ ಇಂಟೆಲಿಜೆನ್ಸಿಗೆ ಅನುಮಾನ ಹೊರ ಹಾಕಿದೆ. ಸದ್ಯ ಆರೋಪಿಗಳ ಬಳಿ ಸಿಕ್ಕ ಸಿಮ್ ಕಾರ್ಡ್ಸ್ ಡಿವೈಸ್ ಬಗ್ಗೆ ಸಿಸಿಬಿಯಿಂದ ತನಿಖೆ ಚುರುಕುಗೊಂಡಿದೆ.

ಬಂಧಿತ ಆರೋಪಿಗಳಿಗೆ ಯಾರು ಹಣವನ್ನು ನೀಡುತ್ತಿದ್ದರು. ದೇಶದ ಯಾವ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆಂದು ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಉಳಿದ ಇತರ ಆರೋಪಿಗಳು ಯಾರು ಅವರ ಮೂಲವನ್ನು ಪತ್ತೆ ಹಚ್ಚುಲಾಗುತ್ತಿದೆ. ಸದ್ಯಕ್ಕೆ ಸಿಸಿಬಿಯಿಂದ ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಲಾಗಿದ್ದು ಆರೋಪಿಗಳನ್ನು ಕೂಡ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಕ್ರಮವಾಗಿ ಐಎಸ್​ಡಿ ಕರೆಗಳನ್ನು ಸ್ಥಳೀಯ ಕರೆಯಾಗಿಸುತ್ತಿದ್ದ ಗ್ಯಾಂಗ್​ನಿಂದ 960 ಸಿಮ್ ಕಾರ್ಡ್‌, 30 ಸಿಮ್ ಬಾಕ್ಸ್ ಡಿವೈಸ್ ವಶಕ್ಕೆ: ಕಮಲ್​ ಪಂತ್

ಸೇನೆಯ ಮಾಹಿತಿ ಕದಿಯಲು ಬೆಂಗಳೂರಿನಲ್ಲಿ ಟೆಲಿಪೋನ್ ಎಕ್ಸ್​ಚೇಂಜ್ ಆರಂಭ