ಖಾತೆ ಕೆವೈಸಿ ಅಪ್‌ಡೇಟ್ ಮಾಡುವಾಗ ಇರಲಿ ಎಚ್ಚರ.. ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿ ಲಕ್ಷ ಲಕ್ಷ ಎಗರಿಸಿದ ಖದೀಮರು

ಕಂಗ್ರಾಳಿ ಗ್ರಾಮದ ನಿವಾಸಿ, ಬಿ.ಎಸ್.ಎನ್.ಎಲ್ ನಿವೃತ್ತಿ ಉದ್ಯೋಗಿ ಯಲ್ಲಪ್ಪ ಜಾಧವ ಹಣ ಕಳೆದು ಕೊಂಡ ವ್ಯಕ್ತಿ. ಬ್ಯಾಂಕ್ ಖಾತೆ ಕೆವೈಸಿ ಅಪ್‌ಡೇಟ್ ಮಾಡುವುದಾಗಿ ಹೇಳಿ ಯಲ್ಲಪ್ಪ ಜಾಧವ್ ಬಳಿ ದಾಖಲೆ ಪಡೆದು ಖದೀಮರು ಹಣ ವಂಚನೆ ಮಾಡಿದ್ದಾರೆ.

ಖಾತೆ ಕೆವೈಸಿ ಅಪ್‌ಡೇಟ್ ಮಾಡುವಾಗ ಇರಲಿ ಎಚ್ಚರ.. ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿ ಲಕ್ಷ ಲಕ್ಷ ಎಗರಿಸಿದ ಖದೀಮರು
ಯಲ್ಲಪ್ಪ ಜಾಧವ ಹಣ ಕಳೆದು ಕೊಂಡ ವ್ಯಕ್ತಿ
Follow us
TV9 Web
| Updated By: ಆಯೇಷಾ ಬಾನು

Updated on: Jun 13, 2021 | 11:38 AM

ಬೆಳಗಾವಿ: ಮಹಾಮಾರಿ ಕೊರೊನಾ ಲಾಕ್ಡೌನ್ ಅನೇಕ ವಂಚಕರಿಗೆ ವಂಚನೆ ಮಾಡಲು ದಾರಿ ಮಾಡಿಕೊಟ್ಟಿದೆ. ಲಾಕ್‌ಡೌನ್ ಬಂಡವಾಳ ಮಾಡಿಕೊಂಡು ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿ 10 ಲಕ್ಷ ಹಣ ವಂಚಿಸಿದ ಘಟನೆ ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದಲ್ಲಿ ನಡೆದಿದೆ.

ಕಂಗ್ರಾಳಿ ಗ್ರಾಮದ ನಿವಾಸಿ, ಬಿ.ಎಸ್.ಎನ್.ಎಲ್ ನಿವೃತ್ತಿ ಉದ್ಯೋಗಿ ಯಲ್ಲಪ್ಪ ಜಾಧವ ಹಣ ಕಳೆದು ಕೊಂಡ ವ್ಯಕ್ತಿ. ಬ್ಯಾಂಕ್ ಖಾತೆ ಕೆವೈಸಿ ಅಪ್‌ಡೇಟ್ ಮಾಡುವುದಾಗಿ ಹೇಳಿ ಯಲ್ಲಪ್ಪ ಜಾಧವ್ ಬಳಿ ದಾಖಲೆ ಪಡೆದು ಖದೀಮರು ಹಣ ವಂಚನೆ ಮಾಡಿದ್ದಾರೆ. ಯಲ್ಲಪ್ಪನಿಂದ ಆಧಾರ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಜೆರಾಕ್ಸ್ ಪ್ರತಿ ವಾಟ್ಸಾಪ್ಗೆ ಸೆಂಡ್ ಮಾಡಿಸಿಕೊಂಡು ಯಲ್ಲಪ್ಪನ ಮೊಬೈಲ್ಗೆ ಲಿಂಕ್ ಕಳಸಿ, ಒಟಿಪಿ ನಂಬರ್ ಪಡೆದುಕೊಂಡು ವಂಚನೆ ಮಾಡಿದ್ದಾರೆ.

ಯಲ್ಲಪ್ಪ ಬ್ಯಾಂಕ್ ಖಾತೆಯಿಂದ 102 ಬಾರಿ ಹಣ ಡ್ರಾ ಮಾಡಿಕೊಂಡು 10 ಲಕ್ಷ ರೂ. ಹಣ ವಂಚಿಸಿದ್ದಾರೆ. 25 ವರ್ಷದ ದುಡಿಮೆ ಹಣವನ್ನ ಕಳೆದುಕೊಂಡು ಯಲ್ಲಪ್ಪ ಜಾಧವ ಕಂಗಾಲಾಗಿದ್ದಾರೆ. ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: Kumbh Mela: ಕುಂಭಮೇಳದಲ್ಲಿ ಭಾಗಿಯಾದವರಿಗೆ ನಕಲಿ ಕೊವಿಡ್ ರಿಪೋರ್ಟ್ ಆರೋಪ; ತನಿಖೆಗೆ ಉತ್ತರಾಖಂಡ ಸರ್ಕಾರ ಆದೇಶ