ಡಿಕೆ ಶಿವಕುಮಾರ್ ಮಳೆಯಾಗಲಿ ಅಂತ ಪ್ರಾರ್ಥಿಸುತ್ತಿದರೆ ಬೆಂಗಳೂರು ನಿವಾಸಿಗಳು ತಮ್ಮ ಕಷ್ಟ ನೀಗಲಿ ಅಂತ!

|

Updated on: Jun 03, 2024 | 11:50 AM

ಶಿವಕುಮಾರ್ ಮಳೆಯಾಗಲಿ, ಇನ್ನೂ ಹೆಚ್ಚು ಮಳೆಯಾಗಲಿ ಅಂತ ಪ್ರಾರ್ಥಸುತ್ತಿದ್ದೇನೆ ಮತ್ತು ಸಾಯಂಕಾಲ ಮಳೆಯಿಂದ ಹಾನಿಗೊಳಗಾದ ಏರಿಯಾಗಳಿಗೆ ಭೇಟಿ ನೀಡುವೆನೆಂದು ಹೇಳುತ್ತಾರೆ. ಮಳೆಯಾಗಲೇ ಬೇಕು ಸ್ವಾಮಿ, ಕನ್ನಡಿಗರೆಲ್ಲ ಅದನ್ನೇ ಪ್ರಾರ್ಥಿಸುತ್ತಿದ್ದಾರೆ, ಆದರೆ ಬೆಂಗಳೂರು ಜನ ತಮ್ಮ ಸಮಸ್ಯೆಗಳು ನೀಗಲಿ ಅಂತಲೂ ಪ್ರಾರ್ಥಿಸುತ್ತಿದ್ದಾರೆ! ನಿಮ್ಮ ಸರ್ಕಾರ ಅರ್ಥಮಾಡಿಕೊಳ್ಳಬೇಕಿರುವುದು ಇದನ್ನು.

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರವಹಿಸಿಕೊಂಡಾಗ ಬೆಂಗಳೂರು ನಿವಾಸಿಗಳಿಗೆ ‘ಬ್ರ್ಯಾಂಡ್ ಬೆಂಗಳೂರು’ (Brand Bengaluru) ಅಂತ ಒಂದು ಕನಸು ನೀಡಿದ್ದರು. ಕಾಂಗ್ರೆಸ್ ಪಕ್ಷ (Congress government) ಅಧಿಕಾರಕ್ಕೆ ಬಂದು ಕಳೆದರೂ ಅವರು ಹೇಳಿದ ಕಾನ್ಸೆಪ್ಟ್ ಇನ್ನೂ ಟೇಕಾಫ್ ಅಗಿಲ್ಲ. ಸರ್ಕಾರದ ಆಲಸಿತನವನ್ನು ನೋಡಿದರೆ ಅಭಿವೃದ್ಧಿ ಕೆಲಸಗಳಿಗೆ ಖಜಾನೆಯಲ್ಲಿ ದುಡ್ಡಿಲ್ಲ ಅಂತ ವಿರೋಧ ಪಕ್ಷದ ನಾಯಕರ ಮಾಡುವ ಆರೋಪಗಳಲ್ಲಿ ಹುರುಳಿದೆ ಅನಿಸುತ್ತದೆ. ನಿನ್ನೆ ಸುರಿದಿದ್ದು ರಕ್ಕಸ ಮಳೆ, ಅದರಲ್ಲಿ ಅನುಮಾನವೇನೂ ಇಲ್ಲ. ಆದರೆ ಮಳೆಗಾಲ ಶುರುವಾಗುವ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೆ ಈಗ ಆಗುತ್ತಿರುವ ಅವಾಂತರಗಳನ್ನು ತಗ್ಗಿಸಬಹುದಿತ್ತು. ಇವತ್ತು ಬೆಳಗ್ಗೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್ ಮಳೆಯಾಗಲಿ, ಇನ್ನೂ ಹೆಚ್ಚು ಮಳೆಯಾಗಲಿ ಅಂತ ಪ್ರಾರ್ಥಸುತ್ತಿದ್ದೇನೆ ಮತ್ತು ಸಾಯಂಕಾಲ ಮಳೆಯಿಂದ ಹಾನಿಗೊಳಗಾದ ಏರಿಯಾಗಳಿಗೆ ಭೇಟಿ ನೀಡುವೆನೆಂದು ಹೇಳುತ್ತಾರೆ. ಮಳೆಯಾಗಲೇ ಬೇಕು ಸ್ವಾಮಿ, ಕನ್ನಡಿಗರೆಲ್ಲ ಅದನ್ನೇ ಪ್ರಾರ್ಥಿಸುತ್ತಿದ್ದಾರೆ, ಆದರೆ ಬೆಂಗಳೂರು ಜನ ತಮ್ಮ ಸಮಸ್ಯೆಗಳು ನೀಗಲಿ ಅಂತಲೂ ಪ್ರಾರ್ಥಿಸುತ್ತಿದ್ದಾರೆ! ನಿಮ್ಮ ಸರ್ಕಾರ ಅರ್ಥಮಾಡಿಕೊಳ್ಳಬೇಕಿರುವುದು ಇದನ್ನು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾವುದೇ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲ: ಕೇರಳ ಸರ್ಕಾರ, ಡಿಕೆ ಶಿವಕುಮಾರ್​ಗೆ ಹಿನ್ನಡೆ