ಭಾನುವಾರ ರಾತ್ರಿ ಬೆಂಗಳೂರು ನಗರದಲ್ಲಿ ಸುರಿದಿದ್ದು ಐತಿಹಾಸಿಕ ಮಳೆ, 133 ವರ್ಷಗಳಲ್ಲಿ ಇಂಥ ಮಳೆಯಾಗಿರಲಿಲ್ಲ!
ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಮುಕ್ಕಾಲು ಭಾಗ ಮುಳುಗುವಷ್ಟು ನೀರು ಹರಿಯುತಿತ್ತು. ಇದು ಮಾನ್ಸೂನ್ ಆರಂಭಗೊಳ್ಳುವ ಮೊದಲಿನ ಮಳೆ ಮಾರಾಯ್ರೇ, ಪಿಕ್ಚರ್ ಅಭಿ ಬಾಕೀ ಹೈ....ಯಾಕೆಂದರೆ ಇಲ್ಲಿಂದ ಅಕ್ಟೋಬರ್ ವರೆಗೆ ಮಳೆಗಾಲ, ನಗರದಲ್ಲಿ ಮಳೆ ಹೀಗೆಯೇ ಸುರಿದರೆ ನಿವಾಸಿಗಳು ಎದುರಿಸಬಹುದಾದ ಅವಾಂತರಗಳನ್ನು ಒಮ್ಮೆ ಊಹಿಸಿ ನೋಡಿ.
ಬೆಂಗಳೂರು: ನಿನ್ನೆ ರಾತ್ರಿ ಬೆಂಗಳೂರಲ್ಲಿ (Bengaluru) ಸುರಿದಿದ್ದು ಪ್ರಾಯಶಃ ನಮ್ಮ ಅಜ್ಜಿ ತಾತಂದಿರ ತಂದೆ-ತಾಯಿಗಳು ಸಹ ಕಂಡು ಕೇಳರಿಯದ ರಾಕ್ಷಸ ಮಳೆ (torrential rains). 133 ವರ್ಷಗಳ ಹಿಂದೆ ಈ ಪಾಟಿ ಮಳೆ ಸುರಿದಿತ್ತಂತೆ. 110.7 ಮಿಮೀ ಮಳೆ ಒಂದೇ ಬಾರಿಗೆ ಅಂದರೆ ಸುಮ್ನೇನಾ? ನಗರದಾದ್ಯಂತ ಮಳೆ ಮಾರಾಯ್ರೇ. ಕುಂಭದ್ರೋಣ ಮತ್ತು ಗಾಳಿಗೆ 206 ಮರಗಳು ನೆಲಕ್ಕುರುಳಿವೆ (206 trees uprooted) ಅಂದರೆ ನಂಬ್ತೀರಾ? ಮರಗಳು ಬೀಳದ ಜಾಗಗಳಿಲ್ಲ. ಹೆಚ್ಚಿನವು ರಸ್ತೆಗಳ ಮೇಲೆ ಉರುಳಿದರೆ, ಕೆಲವು ಫ್ಲೈಓವರ್ ಗಳ ಮೇಲೆ, ಕೆಲವು ಟ್ರಾನ್ಸ್ ಫಾರ್ಮರ್ ಗಳ ಮೇಲೆ, ಕಾರುಗಳ ಮೇಲೆ, ಬೈಕ್ ಗಳ ಮೇಲೆ, ಆಟೋಗಳ ಮೇಲೆ ಮತ್ತು ಮನೆಗಳ ಮೇಲೆ. ರಾತ್ರಿ 8 ಗಂಟೆಗೆ ವರ್ಷಧಾರೆ ಶುರುಗೊಂಡಿದ್ದರಿಂದ ಸಂಡೇ ಅಂತ ಫ್ಯಾಮಿಲಿಗಳ ಜೊತೆ ಹೊರಗಡೆ ಬಂದಿದ್ದ ಜನ ವಾಪಸ್ಸು ಮನೆಗೆ ಹೋಗಲು ಹರಸಾಹಸ ಪಡಬೇಕಯಿತು. ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಮುಕ್ಕಾಲು ಭಾಗ ಮುಳುಗುವಷ್ಟು ನೀರು ಹರಿಯುತಿತ್ತು. ಇದು ಮಾನ್ಸೂನ್ ಆರಂಭಗೊಳ್ಳುವ ಮೊದಲಿನ ಮಳೆ ಮಾರಾಯ್ರೇ, ಪಿಕ್ಚರ್ ಅಭಿ ಬಾಕೀ ಹೈ….ಯಾಕೆಂದರೆ ಇಲ್ಲಿಂದ ಅಕ್ಟೋಬರ್ ವರೆಗೆ ಮಳೆಗಾಲ, ನಗರದಲ್ಲಿ ಮಳೆ ಹೀಗೆಯೇ ಸುರಿದರೆ ನಿವಾಸಿಗಳು ಎದುರಿಸಬಹುದಾದ ಅವಾಂತರಗಳನ್ನು ಒಮ್ಮೆ ಊಹಿಸಿ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಮಳೆಗೆ ಹಲವೆಡೆ ಅವಾಂತರ: ಮೆಟ್ರೋ ಟ್ರ್ಯಾಕ್ ಮೇಲೆ ಬಿದ್ದ ಮರದ ಕೊಂಬೆ