ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅಸ್ವಸ್ಥ, ಆಸ್ಪತ್ರೆಗೆ ದಾಖಲು ಮತ್ತು ಬಿಡುಗಡೆ

|

Updated on: May 31, 2024 | 7:53 PM

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಉಸಿರಾಟದ ತೊಂದರೆ ನಿವಾರಿಸಲು ಅವರ ದೇಹದಲ್ಲಿ ಪೇಸ್ ಮೇಕರ್ ಒಂದನ್ನು ವೈದ್ಯರು ಅಳವಡಿಸಿದ್ದಾರಂತೆ. ಅವರಿಗೆ ಹೆಚ್ಚಿನ ಸಮಸ್ಯೆಯೇನೂ ಇಲ್ಲ, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ದಾವಣಗೆರೆ: ದೇಶದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ದಾವಣಗೆರೆಯ ಕಾಂಗ್ರೆಸ್ ಶಾಸಕ 92-ವರ್ಷ ವಯಸ್ಸಿನ ಶಾಮನೂರು ಶಿವಶಂಕರಪ್ಪರ (Shamanur Shivashankarappa) ಅರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರು ಉಂಟಾದ ಕಾರಣ ನಗರದ ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ (SS Hitech Hospital) ದಾಖಲಿಸಲಾಗಿತ್ತು. ಕಫದ ಸಮಸ್ಯೆ ಮತ್ತು ಉಸಿರಾಟದ ತೊಂದರೆ ಬಗ್ಗೆ ದೂರಿದ ಶಿವಶಂಕರಪ್ಪರನ್ನು ಐಸಿಯುನಲ್ಲಿ (ICU) ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಮಾಧಾನಕರ ಸಂಗತಿಯೆಂದರೆ ಚಿಕಿತ್ಸೆಯ ಬಳಿಕ ಅವರನ್ನು ಮನೆಗೆ ವಾಪಸ್ಸು ಕಳಿಸಲಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಉಸಿರಾಟದ ತೊಂದರೆ ನಿವಾರಿಸಲು ಅವರ ದೇಹದಲ್ಲಿ ಪೇಸ್ ಮೇಕರ್ ಒಂದನ್ನು ವೈದ್ಯರು ಅಳವಡಿಸಿದ್ದಾರಂತೆ. ಅವರಿಗೆ ಹೆಚ್ಚಿನ ಸಮಸ್ಯೆಯೇನೂ ಇಲ್ಲ, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಶಿವಶಂಕರಪ್ಪ ಅವರ ಮಗ ಎಸ್ ಎಸ್ ಮಲ್ಲಿಕಾರ್ಜುನ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾರೆ ಮತ್ತು ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮನೆಯಲ್ಲೇ ಕುಳಿತು ಜಾತಿ ಗಣತಿ ವರದಿ ಸಿದ್ಧಪಡಿಸಿದ್ದಾರೆ: ತಮ್ಮದೇ ಸರ್ಕಾರದ ವಿರುದ್ಧ ಶಾಮನೂರು ಶಿವಶಂಕರಪ್ಪ ಕಿಡಿ

Follow us on