AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿಯಿಂದಲೇ ಪ್ರಜ್ವಲ್​​​ಗೆ ಡ್ರಿಲ್​​: ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸದೇ ಸುಸ್ತು ಎಂದ ಸಂಸದ

ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್ ಅರೆಸ್ಟ್ ಮಾಡಿದ್ದ ಎಸ್ಐಟಿ ಅಧಿಕಾರಿಗಳು, ಇವತ್ತು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ರು. ಇದಕ್ಕೂ ಮುನ್ನ ಅಂದರೆ ನಿನ್ನೆ ರಾತ್ರಿ ಎಸ್ಐಟಿ ಅಧಿಕಾರಿಗಳು ಏನೇನು ಪ್ರಶ್ನೆ ಕೇಳಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಪ್ರಕರಣಗಳ ಬಗ್ಗೆ ಪ್ರಶ್ನೆ ಮಾಡಿರುವ ಎಸ್ಐಟಿ ಅಧಿಕಾರಿಗಳು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ. ಆದರೆ ಪ್ರಜ್ವಲ್​ ನನಗೆ ಸುಸ್ತಾಗಿದೆ ಎಂದು ಹೇಳಿ ಮಲಗಿದ್ದಾರೆ.

ರಾತ್ರಿಯಿಂದಲೇ ಪ್ರಜ್ವಲ್​​​ಗೆ ಡ್ರಿಲ್​​: ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸದೇ ಸುಸ್ತು ಎಂದ ಸಂಸದ
ರಾತ್ರಿಯಿಂದಲೇ ಪ್ರಜ್ವಲ್​​​ಗೆ ಡ್ರಿಲ್​​: ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸದೇ ಸುಸ್ತು ಎಂದ ಸಂಸದ
Kiran HV
| Updated By: ಗಂಗಾಧರ​ ಬ. ಸಾಬೋಜಿ|

Updated on: May 31, 2024 | 7:53 PM

Share

ಬೆಂಗಳೂರು, ಮೇ 31: ಒಂದು ತಿಂಗಳು ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಕೊನೆಗೂ ಬಂಧನವಾಗಿದೆ. ತಡರಾತ್ರಿ ವಿಮಾನ ಇಳಿಯುತ್ತಿದ್ದಂತೆ ಪ್ರಜ್ವಲ್‌ರನ್ನ ಲಾಕ್ ಮಾಡಿದ ಎಸ್ಐಟಿ (SIT), ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ಪ್ರಜ್ವಲ್​ ರೇವಣ್ಣರನ್ನು ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು ಏನೇನು ಪ್ರಶ್ನೆ ಕೇಳಿದ್ದಾರೆ, ಏನೆಲ್ಲಾ ನಡೆಯಿತು ಎಂಬ ಸಂಪೂರ್ಣ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಆ ಕುರಿತಾದ ಒಂದು ವರದಿ ಇಲ್ಲಿದೆ.

ನಿನ್ನೆ ರಾತ್ರಿಯೇ ಎಸ್​ಐಟಿ ಕಚೇರಿಗೆ ಕರೆತಂದಾಗ ಪ್ರಜ್ವಲ್​ನನ್ನು ವಿಚಾರಣೆ ಮಾಡಲು ಸಿದ್ಧರಿದ್ದ ಪೊಲೀಸರು, ಹೊಳೆನರಸೀಪುರ ಪ್ರಕರಣ ಕುರಿತು ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ಪ್ರಶ್ನೆ ಕೇಳಲು ಮುಂದಾಗುತ್ತಿದ್ದಂತೆ ನನಗೆ ಸುಸ್ತಾಗಿದೆ ಉತ್ತರಿಸಲು ಆಗಲ್ಲ ಎಂದು ಹೇಳಿದ ಪ್ರಜ್ವಲ್ ರಾತ್ರಿ ಮಲಗಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ 6 ದಿನ ಎಸ್ಐಟಿ ಕಸ್ಟಡಿಗೆ: ವಕೀಲರ ವಾದ-ಪ್ರತಿವಾದ ವಿವರ ಇಲ್ಲಿದೆ

ಬೆಳಗ್ಗೆ ಪ್ರಜ್ವಲ್ ಬಳಿ ಇದ್ದ ಫೋನ್ ಕೊಡಿ ಎಂದು ಅಧಿಕಾರಿಗಳು ಕೇಳಿದ್ದು, ಬೇಸಿಕ್​ ಫೋನ್ ಎಸ್​ಐಟಿ​ ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ಆದರೆ ​ಬೇರೆ ಫೋನ್ ಎಲ್ಲಿದೆ ಎಂದಾಗ ನನ್ನ ಹತ್ತಿರ ಇರೋದು ಇದೇ ಫೋನ್ ಎಂದಿದ್ದಾರೆ. ಬೇರೆ ಫೋನ್ ಎಲ್ಲಿದೆ ಎಂದು ಕೇಳಿದಾಗ ಅದು ನನ್ನ ಪಿಎ ಹತ್ತಿರ ಇರುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಿಡ್ನ್ಯಾಪ್ ಕೇಸ್​: ಭವಾನಿ ಜಾಮೀನು ಅರ್ಜಿ ವಜಾ, ಇಂದು ರೇವಣ್ಣ ಕುಟುಂಬಕ್ಕೆ ಡಬಲ್ ಶಾಕ್​

ದೂರು ಕೊಟ್ಟ ಸಂತ್ರಸ್ತೆ ಬಗ್ಗೆ ಪ್ರಜ್ವಲ್​ಗೆ SIT ಅಧಿಕಾರಿಗಳು ಪ್ರಶ್ನೆ ಕೇಳಿದ್ದು, ಫೋಟೋ ತೋರಿಸಿದಾಗ ಇವರು ಯಾರು ನನಗೆ ಗೊತ್ತಿಲ್ಲ, ನೆನಪು ಇಲ್ಲ ಎಂದಿದ್ದಾರೆ. ತುಂಬಾ ಜನರು ಕೆಲಸದವರಿದ್ದಾರೆ, ಇವರು ಯಾರೆಂದು ನನಗೆ ಗೊತ್ತಿಲ್ಲ. ನಿಮ್ಮ ವಕೀಲರ ಮೊಬೈಲ್​ ನಂಬರ್ ಕೇಳಿದ್ದಾರೆ. ನನ್ನ ಹತ್ತಿರ ವಕೀಲರ ನಂಬರ್ ಇಲ್ಲವೆಂದಿದ್ದು, ನಂತರ ನಿಮ್ಮ ತಂದೆಯ ನಂಬರ್​ ಕೊಡಿ ಎಂದಿದ್ದಾರೆ. ನನ್ನ ಹತ್ತಿರ ಇಲ್ಲ. ನಿಮ್ಮ ಹತ್ತಿರನೇ ನಂಬರ್ ಇದೆ ಅಲ್ವ ನನ್ನ ಹತ್ತಿರ ಇಲ್ಲ ಎಂದಿದ್ದಾರೆ. ಬಳಿಕ SIT ಅಧಿಕಾರಿಗಳೇ ವಕೀಲರಿಗೆ ಫೋನ್ ಮಾಡಿ ಪೊಲೀಸರು ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.