AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಕ್ಕಲಿಗರ ಏಕಮೇವಾದ್ವಿತೀಯ ನಾಯಕನಾಗಲು ಡಿಸಿಎಂ ಹಲ್ಕಾ ಕೆಲಸ ಮಾಡಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್

ಒಕ್ಕಲಿಗರ ಏಕಮೇವಾದ್ವಿತೀಯ ನಾಯಕನಾಗಲು ಡಿಸಿಎಂ ಹಲ್ಕಾ ಕೆಲಸ ಮಾಡಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 31, 2024 | 7:15 PM

ಪ್ರಜ್ವಲ್ ಎಸಗಿರುವುದು ಅಕ್ಷಮ್ಯ ಅಪರಾಧ, ಆದರೆ ಪ್ರಕರಣವೀಗ ನ್ಯಾಯಾಲಯದ ಸುಪರ್ದಿಯಲ್ಲಿದೆ ಮತ್ತು ಎಸ್ಐಟಿ ತನಿಖೆ ನಡೆಸುತ್ತಿದೆ, ತನಿಖೆ ಹೇಗೆ ನಡೆಯುತ್ತಿದೆ ಎಲ್ಲರೂ ನೋಡುತ್ತಿದ್ದೇವೆ, ಪ್ರಜ್ವಲ್ ಡ್ರೈವರ್ ನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ಅವನನ್ನು ಯಾವ ದೇಶದ ಪಂಚತಾರಾ ಇಟ್ಟಿದ್ದೇನೆ ಅಂತ ಉಪ ಮುಖ್ಯಮಂತ್ರಿ ಹೇಳಬೇಕಲ್ವಾ? ಎಂದು ಯತ್ನಾಳ್ ಹೇಳಿದರು.

ಕಲಬುರಗಿ: ಪ್ರಜ್ವಲ್ ರೇವಣ್ಣ (Prajwal Revanna) ಮಾಡಿರೋದು ತಪ್ಪು ಮತ್ತು ಅವರು ದೇಶ ಬಿಟ್ಟು ಹೋಗಿದ್ದು ಅದಕ್ಕಿಂತ ದೊಡ್ಡ ತಪ್ಪು, ಇವತ್ತಿನ ಪೊಲೀಸ್ ವ್ಯವಸ್ಥೆಯು ಅರೋಪಿ ಎಲ್ಲೇ ಅಡಗಿ ಕುಳಿತಿದ್ದರೂ ಎಳೆದು ತರುತ್ತದೆ, ಈಗ ವಾಪಸ್ಸು ಬಂದು ಪೊಲೀಸರಿಗೆ ಸರೆಂಡರ್ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಯತ್ನಾಳ್, ಪ್ರಜ್ವಲ್ ಎಸಗಿರುವುದು ಅಕ್ಷಮ್ಯ ಅಪರಾಧ (unpardonable crime), ಆದರೆ ಪ್ರಕರಣವೀಗ ನ್ಯಾಯಾಲಯದ ಸುಪರ್ದಿಯಲ್ಲಿದೆ ಮತ್ತು ಎಸ್ಐಟಿ ತನಿಖೆ ನಡೆಸುತ್ತಿದೆ, ತನಿಖೆ ಹೇಗೆ ನಡೆಯುತ್ತಿದೆ ಎಲ್ಲರೂ ನೋಡುತ್ತಿದ್ದೇವೆ, ಪ್ರಜ್ವಲ್ ಡ್ರೈವರ್ ನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ಅವನನ್ನು ಯಾವ ದೇಶದ ಪಂಚತಾರಾ ಇಟ್ಟಿದ್ದೇನೆ ಅಂತ ಉಪ ಮುಖ್ಯಮಂತ್ರಿ ಹೇಳಬೇಕಲ್ವಾ? ಒಕ್ಕಲಿಗರ ದೊಡ್ಡ ಲೀಡರ್ ಆಗಬೇಕೆನ್ನುವ ಉದ್ದೇಶದಿಂದ ಇಂಥ ಹಲ್ಕಾ ಕೆಲಸ ಡಿಸಿಎಂ ಮಾಡಿದ್ದಾರೆ ಎಂದರು. ಪೆನ್ ಡ್ರೈವ್ ಗಳನ್ನು ಹಂಚಿದವರು ಯಾರು? ಅವರನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ಹಂಚಿದವರೆಲ್ಲ ಅಪರಾಧಿಗಳು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ವಿರೋಧಿ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್