Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಡಿ ಫ್ಯಾಕ್ಟರಿ ನಡೆಸುತ್ತಿರುವ ಎರಡು ಕುಟುಂಬಗಳು ರಾಜ್ಯ ರಾಜಕಾರಣವನ್ನು ಹೊಲಸೆಬ್ಬಿಸಿವೆ: ಬಸನಗೌಡ ಪಾಟೀಲ್ ಯತ್ನಾಳ್

ಸಿಡಿ ಫ್ಯಾಕ್ಟರಿ ನಡೆಸುತ್ತಿರುವ ಎರಡು ಕುಟುಂಬಗಳು ರಾಜ್ಯ ರಾಜಕಾರಣವನ್ನು ಹೊಲಸೆಬ್ಬಿಸಿವೆ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2024 | 5:25 PM

ಕಾಂಗ್ರೆಸ್ ಸರ್ಕಾರ ಆದೇಶಿಸಿದ ತನಿಖೆಗಳು ಯಾವತ್ತೂ ಪೂರ್ಣಗೊಳ್ಳಲ್ಲ, ಪಿಎಸ್ಐ ಅ ನೇಮಕಾತಿ ಹಗರಣ ನೆನೆಗುದಿಗೆ ಬಿದ್ದಿದೆ, ಇನ್ನೆರಡು ಪೊಕ್ಸೋ ಪ್ರಕರಣಗಳ ತನಿಖೆಯಾಗುತ್ತಿಲ್ಲ, ಎಸ್ ಐಟಿಯಲ್ಲಿ ಸರ್ಕಾರದ ಅಧಿಕಾರಿಗಳೇ ಇರೋದ್ರಿಂದ ತನಿಖೆ ಸರಿಯಾಗಿ ಆಗಲ್ಲ, ಹಾಗಾಗೇ ತಾನು ಪ್ರಕರಣನ್ನು ಸಿಬಿಐ ವಹಿಸಬೇಕೆಂದು ಆಗ್ರಹಿಸಿರುವೆ ಎಂದು ಯತ್ನಾಳ್ ಹೇಳಿದರು.

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಮಾಡುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣವನ್ನು ಮುಚ್ಚಿಹಾಕಲು ಹೊಂದಾಣಿಕೆ ರಾಜಕಾರಣಿಗಳಿಂದ ವ್ಯವಸ್ಥಿತ ಸಂಚು (conspiracy) ನಡೆದಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಆದೇಶಿಸಿದ ತನಿಖೆಗಳು ಯಾವತ್ತೂ ಪೂರ್ಣಗೊಳ್ಳಲ್ಲ, ಪಿಎಸ್ಐ ಅ ನೇಮಕಾತಿ ಹಗರಣ ನೆನೆಗುದಿಗೆ ಬಿದ್ದಿದೆ, ಇನ್ನೆರಡು ಪೊಕ್ಸೋ ಪ್ರಕರಣಗಳ ತನಿಖೆಯಾಗುತ್ತಿಲ್ಲ, ಎಸ್ ಐಟಿಯಲ್ಲಿ ಸರ್ಕಾರದ ಅಧಿಕಾರಿಗಳೇ ಇರೋದ್ರಿಂದ ತನಿಖೆ ಸರಿಯಾಗಿ ಆಗಲ್ಲ, ಹಾಗಾಗೇ ತಾನು ಪ್ರಕರಣನ್ನು ಸಿಬಿಐ ವಹಿಸಬೇಕೆಂದು ಆಗ್ರಹಿಸಿರುವೆ ಎಂದು ಯತ್ನಾಳ್ ಹೇಳಿದರು. ರಾಜ್ಯದಲ್ಲಿ ಎರಡು ಸಿಡಿಗಳನ್ನು ತಯಾರಿಸುವ ಫ್ಯಾಕ್ಟರಿಗಳಿವೆ, ಒಂದರ ಹೆಸರನ್ನು ಕುಮಾರಸ್ವಾಮಿಯವರು ಹೇಳಿದ್ದಾರೆ, ಮತ್ತೊಂದು ಫ್ಯಾಕ್ಟರಿಯ ಹೆಸರನ್ನು ತಾನು 8 ನೇ ತಾರೀಖು ಬಹಿರಂಗಪಡಿಸುವುದಾಗಿ ಶಾಸಕ ಹೇಳಿದರು. ಈ ಎರಡು ಕುಟುಂಬಗಳು ಸೇರಿ ರಾಜ್ಯದ ರಾಜಕಾರಣವನ್ನು ಹೊಲಸೆಬ್ಬಿಸಿವೆ ಎಂದು ಅವರು ಹೇಳಿದರು. ಮೇ7 ರಂದು ರಾಜ್ಯದಲ್ಲಿ ಎರಡನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ, ಅದು ಕೊನೆಗೊಳ್ಳಲಿ ಅಂತ ಪ್ರಾಯಶಃ ಬಸನಗೌಡ ಯತ್ನಾಳ್ ಕಾಯುತ್ತಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾಂಗ್ರೆಸ್ ಪಕ್ಷಕ್ಕೆ ಬುಕ್ ಆಗಿರುವ ವಚನಾನಂದ ಸ್ವಾಮೀಜಿಗೆ ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್