AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಎಲ್ಲಿ ನಮ್ಮ ಅಭಿಪ್ರಾಯ ಕೇಳುತ್ತಾರೆ? ಶಾಮನೂರು ಶಿವಶಂಕರಪ್ಪ ಹೀಗೆನ್ನಲು ಕಾರಣ ಇಲ್ಲಿದೆ

Shamanur Shivashankarappa: ಜಾತಿಗಣತಿ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನಮ್ಮ ಅಭಿಪ್ರಾಯಕ್ಕೆಲ್ಲ ಎಲ್ಲಿ ಬೆಲೆ ಕೊಡುತ್ತಾರೆ ಎಂದು ಪ್ರಶ್ನಿಸಿರುವ ಅವರು, ಜಾತಿಗಣತಿ ವರದಿ ಅವೈಜ್ಞಾನಿಕ ಎಂಬುದನ್ನು ಸಾಬೀತುಪಡಿಸಿ ತೋರಿಸುತ್ತೇವೆ ಎಂದಿದ್ದಾರೆ.

ಸಿದ್ದರಾಮಯ್ಯ ಎಲ್ಲಿ ನಮ್ಮ ಅಭಿಪ್ರಾಯ ಕೇಳುತ್ತಾರೆ? ಶಾಮನೂರು ಶಿವಶಂಕರಪ್ಪ ಹೀಗೆನ್ನಲು ಕಾರಣ ಇಲ್ಲಿದೆ
ಶಾಮನೂರು ಶಿವಶಂಕರಪ್ಪ & ಸಿದ್ದರಾಮಯ್ಯ
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on:Mar 01, 2024 | 12:07 PM

Share

ಬೆಂಗಳೂರು, ಮಾರ್ಚ್​ 1: ಸರ್ಕಾರ ಸ್ವೀಕರಿಸಿರುವ ಜಾತಿ ಗಣತಿ ವರದಿ (Caste Census Report) ವೈಜ್ಞಾನಿಕವಾಗಿ ಇಲ್ಲ ಎಂದು ಪುನರುಚ್ಚರಿಸಿರುವ ಕಾಂಗ್ರೆಸ್ (Congress) ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa), ಅದು ಹೇಗೆ ಅವೈಜ್ಞಾನಿಕವಾಗಿದೆ ಎಂಬುದನ್ನು ಸಾಬೀತುಪಡಿಸಿ ತೋರಿಸುತ್ತೇವೆ ಎಂದು ಹೇಳಿದ್ದಾರೆ. ಜತೆಗೆ, ಸಿಎಂ ಸಿದ್ದರಾಮಯ್ಯ ಎಲ್ಲಿ ನಮ್ಮ ಮಾತು ಕೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿಯನ್ನು ಸರ್ಕಾರ ಸ್ವೀಕರಿಸಿದ್ದು ತಪ್ಪು ಅಲ್ಲ. ಆದರೆ ಅದು ವೈಜ್ಞಾನಿಕವಾಗಿರಬೇಕು. ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಉಪಪಂಗಡಗಳು ಇವೆ. ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಿರುವ ಮಾಹಿತಿ ಇದೆ ಎಂದರು.

ಆಯೋಗದ ಅಧ್ಯಕ್ಷರು ನಮ್ಮ ವರದಿ ವೈಜ್ಞಾನಿಕವಾಗಿ ಇದೆ ಎನ್ನುತ್ತಾರೆ. ಆದರೆ, ಅದು ಹೇಗೆ ಅವೈಜ್ಞಾನಿಕವಾಗಿದೆ ಎಂಬುದನ್ನು ಸಾಬೀತು ಮಾಡುತ್ತೇವೆ. 9 ವರ್ಷದ ಹಿಂದಿನ ಸರ್ವೆಯನ್ನು ಈಗ ವರದಿ ಸಲ್ಲಿಸಲಾಗಿದೆ. ಮನೆಯಲ್ಲೇ ಕುಳಿತು ಜಾತಿಗಣತಿ ವರದಿ ತಯಾರಿಸಿದ ಮಾಹಿತಿ ಇದೆ. ಸರ್ಕಾರ ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿಗಣತಿ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಈಗ ಸ್ವೀಕರಿಸಿರುವ ಜಾತಿ ಗಣತಿ ವರದಿಯನ್ನು ಸರ್ಕಾರ ಏನು ಮಾಡುತ್ತದೆ ಎಂದು ನೋಡುತ್ತೇವೆ. ನಾವು ಸುಮ್ಮನೆ ಕೂರುವುದಿಲ್ಲ. ವೈಜ್ಞಾನಿಕವಾಗಿ ಇನ್ನೊಮ್ಮೆ ಜಾತಿ ಗಣತಿ ಮಾಡಬೇಕು. 9 ವರ್ಷದ ಹಳೆಯದನ್ನು ಈಗ ತಂದಿದ್ದಾರೆ. ಕಾಂತರಾಜು ವರದಿಯನ್ನು ಈಗ ಅವರು ತಂದುಕೊಟ್ಟಿದ್ದಾರೆ. ನಮ್ಮ ಜನಸಂಖ್ಯೆ 2 ಕೋಟಿಗೂ ಹೆಚ್ಚಿದೆ. ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎನಿಸುತ್ತದೆ. ಈ ವರದಿಯನ್ನು ಮೂಲೆಗೆ ಹಾಕಬೇಕು ಎಂದು ಶಿವಶಂಕರಪ್ಪಮ ಆಗ್ರಹಿಸಿದ್ದಾರೆ.

ಈ ವರದಿಯಿಂದ ಜಾತಿ ಜಾತಿಗಳ ನಡುವೆ ಸಂಘರ್ಷ ಆಗುತ್ತದೆ. ಜಾತಿ ಜಾತಿಗಳ ನಡುವೆ ಅವರು ಛೂ ಬಿಡ್ತಿದ್ದಾರೆ. ನಾವು ಎಸ್​​ಸಿ ಎಸ್​ಟಿ ವಿರುದ್ಧವಿಲ್ಲ. ಆದರೆ ನಮ್ಮ ಸಂಖ್ಯೆ ಡಬಲ್ ಇದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ನಮ್ಮ ಅಭಿಪ್ರಾಯಕ್ಕೆ ಎಲ್ಲಿ ಮನ್ನಣೆ ಕೊಡುತ್ತಾರೆ: ಶಾಮನೂರು

ಜಾತಿ ಗಣತಿ ವರದಿ ಸ್ವೀಕಾರದಿಂದ ಕಾಂಗ್ರೆಸ್​​ಗೆ ಸಮಸ್ಯೆ ಆಗಲಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ, ನಾನು ಈಗ ಏನನ್ನೂ ಕೂಲಂಕಷವಾಗಿ ಹೇಳಲು ಹೋಗುವುದಿಲ್ಲ. ಸಿಎಂ ಸಿದ್ದರಾಮಯ್ಯ ನಮ್ಮ ಅಭಿಪ್ರಾಯಗಳಿಗೆ ಎಲ್ಲಿ ಮನ್ನಣೆ ಕೊಡುತ್ತಾರೆ ಎಂದು ಮರು ಪ್ರಶ್ನೆ ಹಾಕಿದರು.

ಇದನ್ನೂ ಓದಿ: ಜಾತಿ ಗಣತಿ ವರದಿಗೆ ಬಾರಿ ಅಪಸ್ವರ: ಸಿದ್ದರಾಮಯ್ಯ ನಡೆಗೆ ಸ್ವಪಕ್ಷದ ಕೆಲ ನಾಯಕರು ಅಸಮಾಧಾನ

ಈ ಮಧ್ಯೆ, ಜಾತಿ ಗಣತಿಗೆ ಅನೇಕ ಮಠಾಧಿಪತಿಗಳಿಂದಲೂ ವಿರೋಧ ವ್ಯಕ್ತವಾಗಿದೆ. ತುಮಕೂರು ಜಿಲ್ಲೆಯ ಹಲವು ಮಠಾಧಿಪತಿಗಳು ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿದ್ದು, ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದೆ ಎಂದಿದ್ದಾರೆ. ಯಾರೂ ನಮ್ಮನ್ನು ಬಂದು ಮಾಹಿತಿ ಕೇಳಿಲ್ಲ. ನಮ್ಮ ಮಠದ ಅಕ್ಕಪಕ್ಕದ ಮನೆಗಳಲ್ಲೂ ಮಾಹಿತಿ ಕೇಳಿಲ್ಲ. ಹಾಗಾಗಿ ಅದು ವೈಜ್ಞಾನಿಕವಾಗಿದೆ ಎಂದು‌ ನಂಬಲು ಸಾಧ್ಯವಿಲ್ಲ ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ್ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವವಿದ್ಯಾಶಂಕರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಸಿಕೇಂದ್ರ ಸ್ವಾಮಿಜಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:07 pm, Fri, 1 March 24

ಜುಲೈ 22ಕ್ಕೆ ನಟ ದರ್ಶನ್ ಜಾಮೀನು ವಿಚಾರಣೆ ಮುಂದೂಡಿಕೆ
ಜುಲೈ 22ಕ್ಕೆ ನಟ ದರ್ಶನ್ ಜಾಮೀನು ವಿಚಾರಣೆ ಮುಂದೂಡಿಕೆ
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್