ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಾಗರದ ಯುವಕ; ಜನುಮದಿನಕ್ಕೂ ಮೊದಲು ಸ್ವಚ್ಛತಾ ಕಾರ್ಯ

| Updated By: Skanda

Updated on: Apr 10, 2021 | 11:31 AM

ಏಪ್ರಿಲ್ 8 ರಂದು ಸಂತೋಷ ಹುಟ್ಟುಹಬ್ಬ ಇದ್ದು, ಈ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಎಪ್ರಿಲ್ 4ರಿಂದ 5 ದಿನಗಳ ಕಾಲ ಸಂತೋಷ್ ಸೈಕಲ್ ಏರಿ ನಗರದ ಪ್ರಮುಖ ವೃತ್ತಗಳಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳು ಹಾಗೂ ಪ್ಲಾಸ್ಟಿಕ್​ಗಳನ್ನು ಸಂಗ್ರಹಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ.

ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಾಗರದ ಯುವಕ; ಜನುಮದಿನಕ್ಕೂ ಮೊದಲು ಸ್ವಚ್ಛತಾ ಕಾರ್ಯ
ಹುಟ್ಟುಹಬ್ಬದ ಪ್ರಯುಕ್ತ ಸ್ವಚ್ಛತೆಯ ಕಾರ್ಯದಲ್ಲಿ ಮುಂದಾದ ಸಂತೋಷ್
Follow us on

ಶಿವಮೊಗ್ಗ: ಸಾಮಾನ್ಯವಾಗಿ ಹುಟ್ಟುಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಕೇಕ್ ಕತ್ತರಿಸಿ ಆಚರಣೆ ಮಾಡುತ್ತಾರೆ. ಆದರೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಯುವಕ ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ತಿಲಕ್ ರಸ್ತೆಯಲ್ಲಿರುವ ಬೃಂದಾವನ ಸ್ಟೋರ್ ಮುಂಭಾಗದ ಶ್ರೀ ಲಕ್ಷ್ಮಿ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ಸಂತೋಷ್ ತನ್ನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಏಪ್ರಿಲ್ 8 ರಂದು ಸಂತೋಷ್​ ಅವರ ಹುಟ್ಟುಹಬ್ಬ ಇತ್ತು. ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಏಪ್ರಿಲ್ 4ರಿಂದ 5 ದಿನಗಳ ಕಾಲ ಸಂತೋಷ್ ಸೈಕಲ್ ಏರಿ ನಗರದ ಪ್ರಮುಖ ವೃತ್ತಗಳಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳು ಹಾಗೂ ಪ್ಲಾಸ್ಟಿಕ್​ಗಳನ್ನು ಸಂಗ್ರಹಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ನಗರದಲ್ಲಿ ಸ್ವ ಇಚ್ಛೆಯಿಂದ ಸ್ವಚ್ಛತಾ ಅಭಿಯಾನ ಕೈಗೊಂಡಿರುವುದರಿಂದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸಂತೋಷ್​ ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ತಮ್ಮ ಸೈಕಲ್ಲಿಗೆ ಬಿತ್ತಿಪತ್ರ ಹಾಕಿಕೊಂಡು ನಗರದಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಸಿಹಿ ಹಂಚುವ ಕೆಲಸದ ಮೂಲಕ ದೇಶ ಮತ್ತು ನಾಡಿನ ಅಭಿಮಾನವನ್ನು ಸಂತೋಷ್​ ಮೆರೆದಿದ್ದರು.

ಈ ರೀತಿಯ ಕೆಲಸ ಮಾಡುತ್ತಿರುವುದು ನಿಜಕ್ಕೂ ನಮಗೆ ಹೆಮ್ಮೆ. ಸಂತೋಷ್ ರೀತಿಯಲ್ಲಿಯೇ ಎಲ್ಲಾ ಯುವಕರು ಹುಟ್ಟುಹಬ್ಬವನ್ನು ಆಚರಿಸಿಕೊಂಡರೆ ಸಮಾಜದಲ್ಲಿ ಸ್ವಚ್ಛತೆ ಕಾಪಾಡಲು ಅನುವು ಮಾಡಿಕೊಟ್ಟಂತೆ ಆಗುತ್ತದೆ. ಸಂತೋಷ್​ ಅವರನ್ನು ಎಲ್ಲರೂ ಅನುಸರಿಸಿದರೆ ನಮ್ಮ ಸಾಗರ ಸ್ವಚ್ಛತೆಯಲ್ಲಿ ರಾಜ್ಯಕ್ಕೆ ಮಾದರಿಯಾಗಬಹುದು. ಯುವಕರು ದುಂದು ವೆಚ್ಚ ಮತ್ತು ದುಶ್ಚಟಗಳನ್ನು ಬಿಟ್ಟು ಸಾಮಾಜಿಕ ಕಾಳಜಿ, ಸೇವೆಯತ್ತ ಸಂತೋಷ್​ರಂತೆ ಗಮನ ಹರಿಸಬೇಕು ಎಂದು ಸಾಗರದ ಅಂಗಡಿ ಮಾಲಿಕರಾದ ರಾಘವೇಂದ್ರ ತಿಳಿಸಿದ್ದಾರೆ.

ಹೀಗೆ ಸಾಗರ ಯುವಕನು ತನ್ನ ಹುಟ್ಟುಹಬ್ಬವನ್ನು ಸ್ವಚ್ಛತೆ ಜಾಗೃತಿ ಮೂಲಕ ಮಾಡಿದ್ದು, ಜನರ ಗಮನ ಸೆಳೆದಿದ್ದಾರೆ. ಹುಟ್ಟುಹಬ್ಬವನ್ನು ಹೀಗೂ ಆಚರಿಸಬಹುದು ಎನ್ನುವುದನ್ನು ಎಲ್ಲರಿಗೂ ತೋರಿಸಿಕೊಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಇದನ್ನೂ ಓದಿ: 

Ram Gopal Varma Birthday: ಇದು ನನ್ನ ಬರ್ತ್​ಡೇ ಅಲ್ಲ; ಡೆತ್​ ಡೇ! ಹುಟ್ಟುಹಬ್ಬದ ದಿನವೇ ರಾಮ್​ ಗೋಪಾಲ್​ ವರ್ಮಾ ಶಾಕಿಂಗ್​ ಮಾತು

ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 114ನೇ ಹುಟ್ಟುಹಬ್ಬ: ಗದ್ದುಗೆ ಪೂಜೆ, ಮಕ್ಕಳ ನಾಮಕರಣದ ಮೂಲಕ ಸರಳ ಆಚರಣೆ

( Young man celebrated his birthday by cleaning the city in sagar of Shivamogga)