ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

Karnataka 2nd PUC Result District Wise Rank List: ಬೆಂಗಳೂರಿನಲ್ಲಿ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಯಾವೊಬ್ಬ ವಿದ್ಯಾರ್ಥಿಗೂ ಅನ್ಯಾಯವಾಗದಂತೆ ಫಲಿತಾಂಶ ನೀಡಲಾಗಿದೆ ಎಂದು ಹೇಳಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
ಸಾಂಕೇತಿಕ ಚಿತ್ರ
TV9kannada Web Team

| Edited By: Apurva Kumar Balegere

Jul 20, 2021 | 5:27 PM


ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ದಕ್ಷಿಣ ಕನ್ನಡದ 445 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿದ್ದಾರೆ. ದ್ವಿತೀಯ ಪಿಯು ಫಲಿತಾಂಶದಲ್ಲಿ ಬೆಂಗಳೂರು ದಕ್ಷಿಣ ಎರಡನೇ ಸ್ಥಾನ ಗಳಿಸಿದೆ. ಬೆಂಗಳೂರು ದಕ್ಷಿಣದ 302 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ಲಭಿಸಿದೆ. 2ನೇ ಪಿಯು ಫಲಿತಾಂಶದಲ್ಲಿ ಬೆಂಗಳೂರು ಉತ್ತರ 3ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಉತ್ತರದ 261 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ಸಿಕ್ಕಿದೆ. ದ್ವಿತೀಯ ಪಿಯು ಫಲಿತಾಂಶದಲ್ಲಿ ಉಡುಪಿ ಜಿಲ್ಲೆಗೆ 4ನೇ ಸ್ಥಾನ ಲಭ್ಯವಾಗಿದೆ. ಉಡುಪಿ ಜಿಲ್ಲೆಯ 149 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ಸಿಕ್ಕಿದೆ. ಸೆಕೆಂಡ್ ಪಿಯು ಫಲಿತಾಂಶದಲ್ಲಿ ಹಾಸನ ಜಿಲ್ಲೆ 5ನೇ ಸ್ಥಾನ ಗಳಿಸಿದೆ.  ಹಾಸನ ಜಿಲ್ಲೆಯ 104 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ದೊರೆತಿದೆ.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಪ್ರಕಟಿಸಿದ್ದಾರೆ. 2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಮಲ್ಲೇಶ್ವರಂನ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಫಲಿತಾಂಶ ಪ್ರಕಟ ಮಾಡಲಾಗಿದೆ. ಪಿಯುಸಿ ಹಾಗೂ ಎಸ್ಎಸ್ಎಲ್​ಸಿ ಪರೀಕ್ಷೆ ಫಲಿತಾಂಶ ಆಧಾರದ ಮೇಲೆ ಪಿಯುಸಿ ಫಲಿತಾಂಶ ನೀಡಿದ್ದೇವೆ. ಅನೇಕ ವಿದ್ಯಾರ್ಥಿಗಳು ಎಕ್ಸಾಂ ಮಾಡುವಂತೆ ಮನವಿ ಮಾಡಿದ್ರು. ಆದರೆ, ಫಲಿತಾಂಶಕ್ಕೆ ಮಾರ್ಗಸೂಚಿ ತಂತ್ರ ಅನುಸರಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಯಾವೊಬ್ಬ ವಿದ್ಯಾರ್ಥಿಗೂ ಅನ್ಯಾಯವಾಗದಂತೆ ಫಲಿತಾಂಶ ನೀಡಲಾಗಿದೆ ಎಂದು ಹೇಳಿದ್ದಾರೆ. SSLC+1st PUC+ ದ್ವಿತೀಯ ಪಿಯುಸಿ ಕೃಪಾಂಕ ಪರಿಗಣನೆ ಮಾಡಲಾಗಿದೆ. ಅದರಂತೆ, 6,66,497 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 3,35,138 ವಿದ್ಯಾರ್ಥಿಗಳು, 3,31,359 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್​ನಲ್ಲಿ ತೇರ್ಗಡೆ ಆಗಿದ್ದಾರೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಟಾಪ್ 5 ಜಿಲ್ಲೆಗಳ ಪಟ್ಟಿ ಹೀಗಿದೆ:

  • ದಕ್ಷಿಣ ಕನ್ನಡ (445 ವಿದ್ಯಾರ್ಥಿಗಳು 600ಕ್ಕೆ 600 ಅಂಕ)
  • ಬೆಂಗಳೂರು ದಕ್ಷಿಣ (302 ವಿದ್ಯಾರ್ಥಿಗಳು 600ಕ್ಕೆ 600)
  • ಬೆಂಗಳೂರು ಉತ್ತರ (261 ವಿದ್ಯಾರ್ಥಿಗಳು 600ಕ್ಕೆ 600 ಅಂಕ)
  • ಉಡುಪಿ (149 ವಿದ್ಯಾರ್ಥಿಗಳು 600ಕ್ಕೆ 600 ಅಂಕ)
  • ಹಾಸನ (104 ವಿದ್ಯಾರ್ಥಿಗಳು 600ಕ್ಕೆ 600 ಅಂಕ)

ಇದನ್ನೂ ಓದಿ: Karnataka 2nd PUC Result 2021: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಸುರೇಶ್ ಕುಮಾರ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada