AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Air Quality: ಹೊಸ ವರ್ಷಕ್ಕೆ ರಾಜ್ಯದ ಜನರಿಗೆ ಶಾಕ್​​​ ಕೊಟ್ಟ ಗಾಳಿ ಗುಣಮಟ್ಟ, ಈ ಜಿಲ್ಲೆಗಳಲ್ಲಿ ಎಚ್ಚರವಹಿಸಲು ಸೂಚನೆ

ಹೊಸ ವರ್ಷದ ಮೊದಲ ದಿನವೇ ಕರ್ನಾಟಕದಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಬೆಂಗಳೂರು, ಯಾದಗಿರಿ, ತುಮಕೂರು, ಮಂಗಳೂರು ಸೇರಿದಂತೆ ಹಲವು ನಗರಗಳಲ್ಲಿ AQI 150-189 ರಷ್ಟಿದ್ದು, 'ಕಳಪೆ' ಮಟ್ಟದಲ್ಲಿದೆ. ಮಕ್ಕಳು ಮತ್ತು ವೃದ್ಧರಿಗೆ ಗಂಟಲಿನಲ್ಲಿ ಕಿರಿಕಿರಿ, ಉಸಿರಾಟದ ತೊಂದರೆಗಳುಂಟಾಗಬಹುದು. ಹೊರಗೆ ಹೋಗುವುದನ್ನು ತಪ್ಪಿಸಲು ಮತ್ತು N95 ಮಾಸ್ಕ್‌ಗಳನ್ನು ಧರಿಸಲು ಸೂಚಿಸಲಾಗಿದೆ.

Bengaluru Air Quality: ಹೊಸ ವರ್ಷಕ್ಕೆ ರಾಜ್ಯದ ಜನರಿಗೆ ಶಾಕ್​​​ ಕೊಟ್ಟ ಗಾಳಿ ಗುಣಮಟ್ಟ, ಈ ಜಿಲ್ಲೆಗಳಲ್ಲಿ ಎಚ್ಚರವಹಿಸಲು ಸೂಚನೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 01, 2026 | 7:52 AM

Share

ಬೆಂಗಳೂರು, ಜ.1: ಹೊಸ ವರ್ಷದ ಮೊದಲು ದಿನವೇ ರಾಜ್ಯದಲ್ಲಿ ಗಾಳಿ ಗುಣಮಟ್ಟ (Karnataka air quality) ತುಂಬಾ ಹದಗೆಟ್ಟಿದೆ. ರಾಜ್ಯದಲ್ಲಿ ವಾಯು ಗುಣಮಟ್ಟ ಮಧ್ಯಮದಿಂದ ಕಳಪೆಯವರೆಗೆ ಇರಲಿದೆ ಎಂದು ಹೇಳಲಾಗಿದೆ. , ಹಲವಾರು ಪ್ರಮುಖ ನಗರಗಳು ಹೆಚ್ಚಿನ ಮಾಲಿನ್ಯ ಮಟ್ಟವನ್ನು ಅನುಭವಿಸುತ್ತಿವೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಗಾಳಿಯ ಗುಣಮಟ್ಟ ಕಳಪೆಯಾಗಿದ್ದು, AQI ಸರಿಸುಮಾರು 150–168 ರಷ್ಟಿದೆ . ಹಿರಿಯರು ಹಾಗೂ ಮಕ್ಕಳ ಮೇಲೆ ಇದರ ಪರಿಣಾಮ ಹೆಚ್ಚಾಗಲಿದೆ. ಅವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದು ಸಲಹೆ ನೀಡಲಾಗಿದೆ. ಗಂಟಲಿನ ಕಿರಿಕಿರಿ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸಬಹುದು. ಯಾದಗಿರಿಯಲ್ಲಿ ಇಂದಿನ ಗಾಳಿಯ ಗುಣಮಟ್ಟ 168 ಇರಲಿದೆ. ತುಮಕೂರಿನಲ್ಲಿ ಗಾಳಿಯ ಗುಣಮಟ್ಟ 167 ಇರಲಿದೆ. ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ 165 ಇದೆ. ಬೀದರ್​​​ನಲ್ಲಿ 189 ಗಾಳಿಯ ಗುಣಮಟ್ಟ ಇದೆ ಎಂದು ಹೇಳಲಾಗಿದೆ. ಇದು ರಾಜ್ಯದಲ್ಲಿರುವ ಕಳಪೆ ಗಾಳಿಯ ಗುಣಮಟ್ಟ ಎಂದು ಹೇಳಲಾಗಿದೆ.

ಇನ್ನು ವಿಜಯಪುರದಲ್ಲಿ ಗಾಳಿಯ ಗುಣಮಟ್ಟ 68 ಇದೆ. ಬಾಗಲಕೋಟೆಯಲ್ಲಿ ಗಾಳಿಯ ಗುಣಮಟ್ಟ 73 ಇದೆ. ಶಿವಮೊಗ್ಗದಲ್ಲೂ ಕೂಡ ಗಾಳಿಯ ಮಟ್ಟ ಮಧ್ಯಮವಾಗಿದು, ಸೂಚಂಕ್ಯ 74 ಇದೆ. ಚಾಮರಾಜನಗರದಲ್ಲಿ 76 ಗಾಳಿ ಗುಣಮಟ್ಟ ಇದೆ. ಇದು ಅತ್ಯಂತ ಮಧ್ಯಮ ಗಾಳಿಮಟ್ಟದ ಸೂಚಂಕ್ಯವಾಗಿದೆ. ಇಂದು PM2.5: 73 µg/m³ ಇರಲಿದೆ. ಹಾಗೂ PM10: 99 µg/m³ ಇರಲಿದೆ. ಎಲ್ಲ ಜಿಲ್ಲೆಗಳು WHO ಶಿಫಾರಸು ಮಾಡಿದ ಮಾನದಂಡಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. N95 ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ

ಇಂದಿನ ರಾಜ್ಯದ ಗಾಳಿಯ ಗುಣಮಟ್ಟ:

ಬೆಂಗಳೂರು: 168

ಮಂಗಳೂರು: 165

ಮೈಸೂರು: 146

ಬೆಳಗಾವಿ:157

ಕಲಬುರ್ಗಿ: 155

ಶಿವಮೊಗ್ಗ: 182

ಬಳ್ಳಾರಿ: 199

ಹುಬ್ಬಳ್ಳಿ: 106

ಉಡುಪಿ: 160

ವಿಜಯಪುರ: 90

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​