Karnataka air quality: ಕರಾವಳಿ ಜಿಲ್ಲೆಗಳಲ್ಲಿ ಕಳಪೆ ಗಾಳಿ ಗುಣಮಟ್ಟ, ಅಸ್ತಮಾ, ಉಸಿರಾಟ ತೊಂದರೆ ಹೆಚ್ಚಾಗಲಿದೆ
ಕರ್ನಾಟಕದ ಹಲವು ನಗರಗಳಲ್ಲಿ ಇಂದು ಗಾಳಿಯ ಗುಣಮಟ್ಟದಲ್ಲಿ ಏರಿಳಿತ ಕಂಡುಬಂದಿದೆ. ಬೆಂಗಳೂರಿನಲ್ಲಿ ಕಳಪೆ ಮಟ್ಟದ AQI ದಾಖಲಾಗಿದ್ದು, ಕಲಬುರಗಿ ಮತ್ತು ಚಿಕ್ಕಮಗಳೂರಿನಲ್ಲಿ ಉತ್ತಮ ಗುಣಮಟ್ಟವಿದೆ. ರಸ್ತೆ ಕಾಮಗಾರಿ, ವಾಹನಗಳ ಹೊಗೆ, ಚಳಿಗಾಲದ ಮಂಜು ವಾಯುಮಾಲಿನ್ಯಕ್ಕೆ ಕಾರಣವಾಗಿವೆ. ಅಸ್ತಮಾ ಇರುವವರು ಎಚ್ಚರಿಕೆ ವಹಿಸಲು, ಮಾಸ್ಕ್ ಧರಿಸಲು ತಜ್ಞರು ಸಲಹೆ ನೀಡಿದ್ದಾರೆ. ಗಾಳಿ ಗುಣಮಟ್ಟ ಸಂಜೆಯ ವೇಳೆಗೆ ಬದಲಾಗುವ ಸಾಧ್ಯತೆಯಿದೆ.

ಬೆಂಗಳೂರು. ಜ15: ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಇಂದು ಗಾಳಿ ಗುಣಮಟ್ಟ (Bengaluru Air Quality) ಸಾಧಾರಣದಿಂದ ಕಳಪೆ ಮಟ್ಟವರೆಗೆ ಇರಲಿದೆ. ರಾಜ್ಯದ ಹಲವು ಭಾಗದಲ್ಲಿ ರಸ್ತೆ ಹಾಗೂ ಇನ್ನಿತರ ಕಟ್ಟಡ ಕಾಮಾಗಾರಿಗಳು ನಡೆಯುತ್ತಿರುವ ಕಾರಣ, ಗಾಳಿ ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದೆ. ಜತೆಗೆ ಇಂದಿನ ವಾತಾರಣ ಕೂಡ ತುಂಬಾ ಪರಿಣಾಮವನ್ನು ಉಂಟು ಮಾಡಿದೆ. ರಾಜ್ಯದಲ್ಲಿ ಮಿಶ್ರ ವಾತಾವರಣವಿದೆ. ಹಲವು ಕಡೆ ಶೀತಗಾಳಿ ಇದೆ. ಚಳಿಗಾಲದ ಮಂಜು ಮತ್ತು ವಾಹನಗಳ ಹೊಗೆಯಿಂದಾಗಿ ವಾಯುಮಾಲಿನ್ಯದ ಮಟ್ಟದಲ್ಲಿ ಸ್ವಲ್ಪ ಏರಿಕೆ ಕಂಡಿದೆ ಎಂದ ತಜ್ಞರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 94 ರಿಂದ 133 ಇರಲಿದೆ. ಸಂಜೆ ಹೊತ್ತಿಗೆ ಇದು ಬದಲಾಗಲಿದೆ ಎಂದು ಹೇಳಿದ್ದಾರೆ. ಇಂದು PM2.5 ಮತ್ತು PM10 ಪ್ರಮಾಣ ಹೆಚ್ಚಾಗಿದೆ.
ಕಲಬುರಗಿ ಇಂದು ಗಾಳಿಯ ಗುಣಮಟ್ಟ ಉತ್ತಮವಾಗಿದೆ (35). ಚಿಕ್ಕಮಗಳೂರಿನಲ್ಲೂ ಕೂಡ ಗಾಳಿಯ ಗುಣಮಟ್ಟ 42 ಇದ್ದು, ಉತ್ತಮವಾಗಿದೆ ಎಂದು ಹೇಳಲಾಗಿದೆ. ಬೆಳಗಾವಿಯಲ್ಲಿ ಗಾಳಿಯ ಗುಣಮಟ್ಟ 82 ಇದೆ. ಇದು ಸಾಧಾರಣ ಎಂದು ಹೇಳಲಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಗಾಳಿಯ ಗುಣಮಟ್ಟ 70ರಿಂದ 110 ಇದೆ.ಇದು ಕೂಡ ಸಾಧಾರಣ ಗುಣಮಟ್ಟ ಎಂದು ಹೇಳಲಾಗಿದೆ. ಮೈಸೂರಿನಲ್ಲಿ ಗಾಳಿಯ ಗುಣಮಟ್ಟ 85 ಇದೆ. ಇದು ಸಾಧಾರಣ ಗುಣಮಟ್ಟ ಎಂದು ಹೇಳಲಾಗಿದೆ. ಮಂಗಳೂರಿನಲ್ಲಿ ಇಂದಿನ ಗಾಳಿಯ ಗುಣಮಟ್ಟ 90 ಇದೆ. ಇದು ಕೂಡ ಸಾಧಾರಣ ಮಟ್ಟ ಎಂದು ಹೇಳಲಾಗಿದೆ.
ಇನ್ನು ಈ ಗಾಳಿಯ ಗುಣಮಟ್ಟದಿಂದ ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು ಮುಂಜಾನೆ ಮತ್ತು ಸಂಜೆ ಹೋಗುವುದನ್ನು ಕಡಿಮೆ ಮಾಡುವುದು ಒಳ್ಳೆಯದು ಎಂದು ತಜ್ಞರ ಸಲಹೆಯಾಗಿದೆ. ಮಂಜಿನ ವಾತಾವರಣ ಇರುವ ಕಾರಣ ರಸ್ತೆಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ. ತ್ತರ ಕರ್ನಾಟಕದಲ್ಲಿ ದಟ್ಟ ಮಂಜು ಇರುವುದರಿಂದ ಗಾಳಿಯಲ್ಲಿನ ಕಣಗಳು ಹೆಚ್ಚು ಪರಿಣಾಮವನ್ನು ಉಂಟು ಮಾಡಬಹುದು. ಇದು ಉಸಿರಾಟದ ಮೇಲೆ ಪರಿಣಾಮ ಬೀರಬಹುದು. ಆ ಕಾರಣಕ್ಕೆ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲಾಗಿದೆ. ಸಂಜೆಯ ವೇಳೆಗೆ ಈ ಗಾಳಿಯ ಗುಣಮಟ್ಟದಲ್ಲಿ ಬದಲಾವಣೆ ಆಗಬಹುದು.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಶೀತಗಾಳಿ ವಾತಾವರಣ, ಆರೋಗ್ಯದ ಕಡೆ ಇರಲಿ ಗಮನ
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ:
ಬೆಂಗಳೂರು: 165
ಮಂಗಳೂರು: 114
ಮೈಸೂರು: 79
ಬೆಳಗಾವಿ: 96
ಕಲಬುರ್ಗಿ: 75
ಶಿವಮೊಗ್ಗ: 128
ಬಳ್ಳಾರಿ: 147
ಹುಬ್ಬಳ್ಳಿ: 78
ಉಡುಪಿ: 130
ವಿಜಯಪುರ: 62
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
