ಉತ್ತರ ಕನ್ನಡ: ಡಿಸೆಂಬರ್ 5ರಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತನ್ನ ಆಸ್ತಿ ಘೋಷಣೆ ಮಾಡಿದ್ದಾರೆ.
ಹೆಬ್ಬಾರ್ ದಂಪತಿ ಒಟ್ಟು ಆಸ್ತಿ:
ಶಿವರಾಂ ಹೆಬ್ಬಾರ್ ಹೆಸರಲ್ಲಿ 3,14,33,403 ರೂ. ಮೌಲ್ಯದ ಚರಾಸ್ತಿ ಇದ್ದು, 34,50,000 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಹೆಬ್ಬಾರ್ ಪತ್ನಿ ವನಜಾಕ್ಷಿ ಹೆಸರಲ್ಲಿ 65,76,327 ರೂ. ಮೌಲ್ಯದ ಚರಾಸ್ತಿ ಇದ್ದು, 3,69,86,954 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಶಿವರಾಂ ಹೆಬ್ಬಾರ್ 34,50,000 ರೂ. ಮೌಲ್ಯದ ಚರಾಸ್ಥಿ ಖರೀದಿ ಮಾಡಿದ್ದು, ವನಜಾಕ್ಷಿ ಹೆಬ್ಬಾರ್ ಹೆಸರಿನಲ್ಲಿ 5,85,73,908 ರೂ. ಮೌಲ್ಯದ ಸ್ಥಿರಾಸ್ಥಿ ಖರೀದಿ ಮಾಡಿದ್ದಾರೆ. ಶಿವರಾಂ ಹೆಬ್ಬಾರ್ ಹೆಸರಿನಲ್ಲಿ 1,24,85,939 ರೂ. ಸಾಲವಿದ್ದು, ಪತ್ನಿ ವನಜಾಕ್ಷಿ ಹೆಸರಿನಲ್ಲಿ 4,415 ರೂಪಾಯಿ ಸಾಲ ಇರುವುದಾಗಿ ಅಫಿಡವಿಟ್ನಲ್ಲಿ ಘೋಷಿಸಿದ್ದಾರೆ.
Published On - 6:07 pm, Mon, 18 November 19