ಆನ್​ಲೈನ್ ಜೂಜಿಗೆ ಕಡಿವಾಣ ಹಾಕುವ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 21, 2021 | 10:17 PM

ಬದಲಾಗುತ್ತಿರುವ ಸವಾಲುಗಳನ್ನು ನಿರ್ವಹಿಸಲು ಇಂಥ ಕಾನೂನು ಅಗತ್ಯವಿತ್ತು ಎಂದು ಸಚಿವರು ವಿವರಸಿದರು.

ಆನ್​ಲೈನ್ ಜೂಜಿಗೆ ಕಡಿವಾಣ ಹಾಕುವ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ಆರಗ ಜ್ಞಾನೇಂದ್ರ (ಎಡಚಿತ್ರ) ಮತ್ತು ಆನ್​ಲೈನ್ ಜೂನು
Follow us on

ಬೆಂಗಳೂರು: ಆನ್​ಲೈನ್ ಜೂಜಿಗೆ ಕಡಿವಾಣ ಹಾಕುವ ಉದ್ದೇಶದಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ವಿಧಾನಸಭೆಯಲ್ಲಿ ಪೊಲೀಸ್ ತಿದ್ದುಪಡಿ ವಿಧೇಯಕ ಮಂಡಿಸಿದರು. ಬದಲಾಗುತ್ತಿರುವ ಸವಾಲುಗಳನ್ನು ನಿರ್ವಹಿಸಲು ಇಂಥ ಕಾನೂನು ಅಗತ್ಯವಿತ್ತು ಎಂದು ಸಚಿವರು ವಿವರಸಿದರು.

ವಿಧೇಯಕದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ವಿದೇಶಗಳಲ್ಲಿ ಸರ್ವರ್ ಇರಿಸಿಕೊಂಡು ಬೆಂಗಳೂರಿನಲ್ಲಿ ವ್ಯವಹಾರ ನಡೆಸುವ ದುಷ್ಟಕೂಟಗಳನ್ನು ಹೇಗೆ ಮಟ್ಟ ಹಾಕುತ್ತೀರಿ? ತಾಂತ್ರಿಕ ಸುಧಾರಣೆಗಳು ಅಗತ್ಯವಿದೆ ಎಂದು ಸಲಹೆ ಮಾಡಿದರು.

ರಾಯಚೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳ ಹಲವೆಡೆ ಜೂಜುಕೇಂದ್ರಗಳನ್ನು ಮುಚ್ಚಿಸಿದ್ದೇವೆ. ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ತಲೆಬಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳಲ್ಲಿ ಈಗಾಗಲೇ ಇಂಥ ಕಾನೂನುಗಳು ಜಾರಿಯಾಗಿವೆ. ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕದ ಮೂಲಕ ಆನ್​ಲೈನ್ ಜೂಜು, ಬೆಟ್ಟಿಂಗ್​ಗಳಿಗೆ ಕಡಿವಾಣ ಹಾಕಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು. ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನಸಭೆ ಅನುಮೋದಿಸಿತು.

ಇದನ್ನೂ ಓದಿ: ಧಾರ್ಮಿಕ ಕೇಂದ್ರಗಳ ತೆರವಿಗೆ ಹೊಸ ನಿಯಮಾವಳಿ ರೂಪಿಸಲು ಸರ್ಕಾರ ನಿರ್ಧಾರ; ವಿಧೇಯಕ ಮಂಡನೆ

ಇದನ್ನೂ ಓದಿ: ರಿಯಲ್ ಎಸ್ಟೇಟ್​ಗೆ ತುಸು ಅನುಕೂಲ: ಮುದ್ರಾಂಕ ಶುಲ್ಕ ಕಡಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

(Karnataka Assembly Nod for Police Amendment Bill Which helps to curtail Online Gambling)