ಕಾವೇರಿ ವಿವಾದ: ಬೀದಿ ಬೀದಿ ತೆರಳಿ ಬಂದ್​ಗೆ ಸಹರಿಸುವಂತೆ ಜನರಲ್ಲಿ ಮನವಿ ಮಾಡಿದ ವಾಟಾಳ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 27, 2023 | 4:46 PM

ಕಾವೇರಿ ನದಿ ವಿವಾದ ವಿಚಾರವಾಗಿ ಸೆಪ್ಟೆಂಬರ್​ 29ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ರಾಜ್ಯ ಬಂದ್​ಗೆ ಎಲ್ಲರೂ ಸಹಕಾರ ನೀಡಬೇಕು. ಹೋಟೆಲ್​, ಶಾಪಿಂಗ್ ಮಾಲ್​ಗಳು, ಅಂಗಡಿಗಳು ಬಂದ್​​​ ಮಾಡಬೇಕು ಎಂದು ತೆರೆದ ವಾಹನದಲ್ಲಿ ಬೀದಿ ಬೀದಿಗೆ ತೆರಳಿ ಲೌಡ್​ ಸ್ಪೀಕರ್​ ಮೂಲಕ ಜನರಿಗೆ ಹೋರಾಟಗಾರ ವಾಟಾಳ್ ನಾಗರಾಜ್​ ಮನವಿ ಮಾಡಿದ್ದಾರೆ.

ಕಾವೇರಿ ವಿವಾದ: ಬೀದಿ ಬೀದಿ ತೆರಳಿ ಬಂದ್​ಗೆ ಸಹರಿಸುವಂತೆ ಜನರಲ್ಲಿ ಮನವಿ ಮಾಡಿದ ವಾಟಾಳ್
ಹೋರಾಟಗಾರ ವಾಟಾಳ್ ನಾಗರಾಜ್
Follow us on

ಬೆಂಗಳೂರು, ಸೆಪ್ಟೆಂಬರ್​ 27: ಕಾವೇರಿ ವಿವಾದ ಹಿನ್ನೆಲೆ ಸೆಪ್ಟೆಂಬರ್​ 29ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ರಾಜ್ಯ ಬಂದ್​ಗೆ ಎಲ್ಲರೂ ಸಹಕಾರ ನೀಡಬೇಕು. ಹೋಟೆಲ್​, ಶಾಪಿಂಗ್ ಮಾಲ್​ಗಳು, ಅಂಗಡಿಗಳು ಬಂದ್​​​ ಮಾಡಬೇಕು ಎಂದು ತೆರೆದ ವಾಹನದಲ್ಲಿ ಬೀದಿ ಬೀದಿಗೆ ತೆರಳಿ ಲೌಡ್​ ಸ್ಪೀಕರ್​ ಮೂಲಕ ಜನರಿಗೆ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj)​ ಮನವಿ ಮಾಡಿದ್ದಾರೆ. ಬಳಿಕ ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್​ಗೆ ಎಲ್ಲ ಸಂಘಟನೆಗಳು ಬೆಂಬಲ ನೀಡಿವೆ ಎಂದು ತಿಳಿಸಿದ್ದಾರೆ.

ರಾಜ್ಯದ ಜನರಿಗಾಗಿ ನಾವು ಅನೇಕ ಬಂದ್​ಗೆ ಬೆಂಬಲ ನೀಡಿದ್ದೇವೆ. ಸೆಪ್ಟೆಂಬರ್ 29ರ ಕರ್ನಾಟಕ ಬಂದ್ ಬಹಳ ಮುಖ್ಯವಾದದ್ದು. ಈ ಬಂದ್ ಒಂದು ಜಿಲ್ಲೆಗೆ ಮಾತ್ರ ಸೀಮಿತಲ್ಲ, ಕರ್ನಾಟಕದಾದ್ಯಂತ ಬಂದ್​ ನಡೆಯಲಿದೆ. ಟೋಲ್​, ರೈಲು, ಹೆದ್ದಾರಿ, ವಿಮಾನ ಹಾರಾಟ ಬಂದ್ ಆಗಲಿದೆ. ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್​ವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಲಿದೆ.

ಇದನ್ನೂ ಓದಿ: ಸೆ.29ರ ಕರ್ನಾಟಕ ಬಂದ್​ಗೆ ಬೆಂಬಲ ಕೊಟ್ಟ ಸಂಘಟನೆಗಳು ಯಾವುವು? ಇಲ್ಲಿದೆ ಪಟ್ಟಿ

ಪ್ರತಿಭಟನಾ ರ‍್ಯಾಲಿಯನ್ನು ತಡೆಯದಂತೆ ಸರ್ಕಾರಕ್ಕೆ ಮನವಿ ನೀಡಿರುವ ವಾಟಾಳ್ ನಾಗರಾಜ್​, ಒಂದು ವೇಳೆ ತಡದದ್ದೆ ಆದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಕರ್ನಾಟಕ ಬಂದ್ 100% ಯಶಸ್ವಿಯಾಗಲಿದೆ. ರಾಜ್ಯಾದ್ಯಂತ ಎಲ್ಲಾ ಸಂಘಟನೆಗಳಿಂದ ಬಂದ್​ಗೆ ಬೆಂಬಲ ಸಿಗುತ್ತಿದೆ. ಶಾಂತಿಯುತವಾಗಿ ಚಳವಳಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಮನವಿ ತಿರಸ್ಕರಿಸಿದ CWRC: ರಾಜ್ಯದ ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದ ಡಿಕೆ ಶಿವಕುಮಾರ್

ಕರ್ನಾಟಕ ಬಂದ್​ ಹಿನ್ನೆಲೆ ಕನ್ನಡ ಚಿತ್ರರಂಗದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಫಿಲ್ಮ್ ಚೇಂಬರ್ ನಮಗೆ ಭರವಸೆ ನೀಡಿದೆ. ಟೌನ್​ಹಾಲ್​​ನಿಂದ ಫ್ರೀಡಂ ಪಾರ್ಕ್​​ವರೆಗೆ ಆಯೋಜಿಸಿರುವ ಪ್ರತಿಭಟನಾ ರ‍್ಯಾಲಿ ಎಲ್ಲಾ ಕಲಾವಿದರು ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್​​ ಮಂತ್ರಿಯಾದ್ಮೇಲೆ ಸರ್ವಾಧಿಕಾರಿಯಾಗಿದ್ದಾರೆ

ಡಿಸಿಎಂ ಡಿಕೆ ಶಿವಕುಮಾರ್​ ಮಂತ್ರಿ ಆದ ಮೇಲೆ ಸರ್ವಾಧಿಕಾರಿಯಾಗಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ಬೆಂಬಲಿಸುತ್ತೆ ಆದರೆ ನಮ್ಮಲ್ಲಿ ಸುಮ್ಮನಾಗುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಈ ಹಿಂದೆ ಯಾರೂ ಈ ರೀತಿ ಮಾತನಾಡಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಹಲವು ಭಾರಿ ಬಂದ್​ಗೆ ಕರೆ ನೀಡುತ್ತೇವೆ. ಮೇಕೆದಾಟು ವಿಚಾರವಾಗಿ ಪ್ರತಿಭಟನೆ ನಡೆಸಿದ್ದೀರಿ, ಅಧಿಕಾರಕ್ಕೆ ಬಂದ ಮೇಲೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:45 pm, Wed, 27 September 23