ದುಷ್ಟರ ಸಂಹಾರವಾಗಬೇಕು, ಭ್ರಷ್ಟರ ಅಂತ್ಯವಾಗಬೇಕು, ನಾನು ಸಿಎಂ ಆಗಬೇಕು: ಶಾಸಕ ಯತ್ನಾಳ್

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮೈಸೂರಿನಲ್ಲಿ ಸಿಎಂ, ಬಿಜೆಪಿ, ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ. ಎಲ್ಲರೂ ಸೇರಿ ಭ್ರಷ್ಟಾಚಾರ ನಡೆಸಿ ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ಆಡಳಿತ ಪಕ್ಷ, ವಿರೋಧ ಪಕ್ಷಗಳು ಸಮರ್ಥವಾಗಿಲ್ಲ. ನನಗೆ ಆಡಳಿತ ನಡೆಸುವ ಸಾಮರ್ಥ್ಯವಿದೆ. ನೇತೃತ್ವ ನೀಡಿದರೆ ಒಳ್ಳೆಯ ಆಡಳಿತ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ದುಷ್ಟರ ಸಂಹಾರವಾಗಬೇಕು, ಭ್ರಷ್ಟರ ಅಂತ್ಯವಾಗಬೇಕು, ನಾನು ಸಿಎಂ ಆಗಬೇಕು: ಶಾಸಕ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us
TV9 Web
| Updated By: shivaprasad.hs

Updated on: Jul 05, 2021 | 11:36 AM

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಲಸ‌ ಮಾಡಲು ಆಗುತ್ತಿಲ್ಲ. ವಯೋ ಸಹಜ ಆರೋಗ್ಯದಿಂದ ಅವರು ಕ್ಷೀಣವಾಗಿದ್ದಾರೆ. ಒಂದು ಸಭೆ ಬಿಟ್ಟರೆ ಬೇರೆ ಏನನ್ನೂ ಮಾಡುತ್ತಿಲ್ಲ ಎಂದು ಮೈಸೂರಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಟಿವಿ9ನೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲೇ ಬೇಕು, ಆಗಿಯೇ ಆಗುತ್ತದೆ. 80ಕ್ಕೂ ಅಧಿಕ ಶಾಸಕರಿಗೆ ಅಸಮಾಧಾನ ಇದೆ. ಸಿ.ಪಿ.ಯೋಗೇಶ್ವರ್,ಎಚ್.ವಿಶ್ವನಾಥ್ ಮೊದಲಾದವರು ನನ್ನೊಂದಿಗಿದ್ದಾರೆ. ನನಗೆ ಅರ್ಹತೆ ಇದೆ. ನಾನು ಕೆಟ್ಟ ರಾಜಕಾರಣ ಮಾಡುವುದಿಲ್ಲ. ನೇತೃತ್ವ ನೀಡಿದರೆ ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ದುಷ್ಟರ ಸಂಹಾರ ಆಗಬೇಕು. ಯಾರು ಅಪಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ರಾಜ್ಯ ಲೂಟಿ ಮಾಡುತ್ತಿದ್ದಾರೆ… ಅವರೆಲ್ಲರೂ ದುಷ್ಟರು. ಅತಿ ಬೇಗ ಅಂಥವರ ಸಂಹಾರ ಆಗುವ ವಿಶ್ವಾಸ ಇದೆ. ಚಾಮುಂಡೇಶ್ವರಿಯಲ್ಲಿ ಅದನ್ನೇ ಬೇಡಿಕೊಂಡಿದ್ದೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ನವರೇನು ಕತ್ತೆ ಕಾಯುತ್ತಿದ್ದಾರೆಯೇ?

ಸಮಾಜ ಕಲ್ಯಾಣ ಚಿವ ಬಿ.ಶ್ರೀರಾಮುಲು ಅವರನ್ನು ಮುಗಿಸಲು ಪ್ರಯತ್ನಿಸಲಾಗುತ್ತಿದೆ. ಲಿಂಗಾಯತ, ಕುರುಬ ನಾಯಕತ್ವವನ್ನು ಮುಗಿಸಲಾಗುತ್ತಿದೆ. ಕರ್ನಾಟಕ ಇಂಥ ರಾಜಕೀಯಕ್ಕೆ ಅವಕಾಶ ನೀಡುವುದಿಲ್ಲ. ವಿರೋಧ ಪಕ್ಷವಾದ ಕಾಂಗ್ರೆಸ್‌ನವರು ಏನು ಕತ್ತೆ ಕಾಯುತ್ತಿದ್ದಾರಾ? ಸಿಎಂ ಬಿಎಸ್‌ವೈ ಎಂಜಲು ತಿಂದು ಬದುಕುತ್ತಿದ್ದಾರಾ? ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಒಂದು ದಿನಕ್ಕೆ ನೂರು ಕೋಟಿ ರೂ. ಲೂಟಿಯಾಗುತ್ತದೆ. ಸಿಎಂ ಕಚೇರಿಯಲ್ಲಿ ಎಲ್ಲ ವ್ಯವಹಾರ ನಡೆಯುತ್ತದೆ. ವಿರೋಧ ಪಕ್ಷಗಳಿಗೆ ತಿಂಗಳ ಮಾಮೂಲಿ ಹೋಗುತ್ತಿದೆ. ಯಡಿಯೂರಪ್ಪನವರಿದ್ದರೆ ಅವರಿಗೆ ಲಾಭ ಆಗುತ್ತದೆ. ಇದರಿಂದ ಮುಂದೆ ಅಧಿಕಾರಕ್ಕೆ ಬರಬಹುದು ಅನ್ನೋದು ವಿರೋಧ ಪಕ್ಷದವರ ಒಳ ಲೆಕ್ಕಾಚಾರ. ಅದಕ್ಕಾಗಿ ವಿರೋಧ ಪಕ್ಷದವರೇ ಇವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ್ ಗಂಭೀರ ಆರೋಪ:

ಸಿಎಂ ಅಧಿಕೃತ ನಿವಾಸ ‘ಕಾವೇರಿ’ ಹಿಂಭಾಗದ ಗೆಸ್ಟ್‌ಹೌಸ್ ಮೇಲೆ ಸಿಸಿಬಿ ಏಕೆ ದಾಳಿ ಮಾಡುತ್ತಿಲ್ಲ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ಬಿ.ವೈ.ವಿಜಯೇಂದ್ರ ಅವರ ಎಲ್ಲಾ ಡೀಲ್​ಗಳು ನಡೆಯುವುದು ಅದೇ ಸ್ಥಳದಲ್ಲಿ ಎಂದು ಮೈಸೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಮಠಾಧೀಶರ ವಿರುದ್ದವೂ ಗುಡುಗಿದ ಯತ್ನಾಳ್:

ವೀರಶೈವ ಲಿಂಗಯಿತರ ಹೆಸರು ಹೇಳಿ ಎಷ್ಟು ದಿನ ಬ್ಲ್ಯಾಕ್ ಮೇಲ್ ಮಾಡುತ್ತೀರಿ? ಲಿಂಗಾಯಿತರಲ್ಲಿ ಇಷ್ಟು ಭ್ರಷ್ಟ ಸಿಎಂ ಯಾರು ಇರಲಿಲ್ಲ. ಇವರ ಕರ್ಮಕಾಂಡ ನೋಡಲು ಆಗುತ್ತಿಲ್ಲ. ಲಿಂಗಾಯತರು ತಲೆತಗ್ಗಿಸುವಂತಹ ಆಡಳಿತ ನೀಡುತ್ತಿದ್ದೀರಿ ಎಂದು ಸಿಎಂ ವಿರುದ್ಧ ಯತ್ನಾಳ್ ಗುಡುಗಿದ್ದಾರೆ.

ಯಡಿಯೂರಪ್ಪನವರನ್ನು ತೆಗೆದರೆ ಸರ್ವನಾಶ ಆಗುತ್ತದೆ, ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಮಠಗಳು ಹೇಳುತ್ತವೆ. ನಾಲ್ಕು ಮಠಗಳು ಬೆಂಬಲ ನೀಡಿದ ತಕ್ಷಣ ಎಲ್ಲರೂ ಅವರ ಹಿಂದೆ ಅಲ್ಲ. ಮಠಗಳು ಬೀದಿಗಿಳಿಯಬೇಕಾಗಿರುವುದು ಧರ್ಮದ ಸಲುವಾಗಿ. ರಾಜಕಾರಣದ ಸಲುವಾಗಿ ಅಲ್ಲ. ಸಾರ್ವಜನಿಕರಿಗೆ ಅನುಕೂಲವಾಗುವ ಧಾರ್ಮಿಕ ಕಾರ್ಯಕ್ರಮ, ಗೋ ಶಾಲೆ ಮೊದಲಾದ ಧರ್ಮ ಕಾರ್ಯಗಳನ್ನು ಮಠಗಳು ನಡೆಸಬೇಕು ಎಂದು ಯತ್ನಾಳ್ ಸಲಹೆ ನೀಡಿದ್ದಾರೆ.

ಎಲ್ಲರೂ ಸುತ್ತೂರು ಶ್ರೀ ಗಳ ಬಳಿ ಹೋಗಿ ಅದು ರಾಜಕೀಯ ಪಡಸಾಲೆ ಆಗಿದೆ. ನನ್ನ ಭೇಟಿಯಿಂದ ಈ ಹೊಲಸು ರಾಜಕೀಯದ ತಪ್ಪು ಸಂದೇಶ ಹೋಗಬಾರದು. ಶ್ರೀಗಳ ಪೂರ್ವಾಶ್ರಮದ ತಾಯಿ ತೀರಿಕೊಂಡಿದ್ದರೂ ಹೋಗುತ್ತಿಲ್ಲ. ಎಂದೂ ನಾನು ಮಠವನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಆದ್ದರಿಂದ ಶ್ರೀಗಳಿಗೆ ರಾಜಕೀಯ ದುಷ್ಟರಿಗೆ ಬೆಂಬಲ‌ಕೊಡದೆ ಒಳ್ಳೆಯವರಿಗೆ ಬೆಂಬಲ‌ ಕೊಡಿ ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ ಯತ್ನಾಳ್.

(Karnataka BJP MLA Basanagouda Patil Yatnal criticizes CM and his party in Mysuru)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್