Mid-day Meals: ಶಾಲಾ ಮಕ್ಕಳಿಗೆ ಮೊಟ್ಟೆ ನಿಲ್ಲಿಸಲಾಗುತ್ತಾ? ಪರಿಷತ್​ನಲ್ಲಿ ಶಿಕ್ಷಣ ಸಚಿವರು ಕೊಟ್ಟ ಉತ್ತರ ಇದು

Karnataka Budget Session: ಸದ್ಯ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭವಾಗಿದೆ. ಫೆ. 17ರಂದು ಬಜೆಟ್ ಮಂಡನೆಯಾಗಲಿದೆ. ಆದರೆ, ಇಂದಿನ ಕಲಾಪಗಳಲ್ಲಿ ಅರ್ಧದಷ್ಟು ಸದಸ್ಯರು ಗೈರಾಗಿದ್ದರು.

Mid-day Meals: ಶಾಲಾ ಮಕ್ಕಳಿಗೆ ಮೊಟ್ಟೆ ನಿಲ್ಲಿಸಲಾಗುತ್ತಾ? ಪರಿಷತ್​ನಲ್ಲಿ ಶಿಕ್ಷಣ ಸಚಿವರು ಕೊಟ್ಟ ಉತ್ತರ ಇದು
ವಿಧಾನಸೌಧ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Feb 13, 2023 | 1:55 PM

ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ಕೊಡುವುದನ್ನು ನಿಲ್ಲಿಸಲಾಗುವುದು ಎಂಬಂತಹ ಸುದ್ದಿ ಕೇಳಿಬರುತ್ತಿದೆ. ಆದರೆ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ವಿಧಾನಪರಿಷತ್​ನಲ್ಲಿ ಸೋಮವಾರ ನಡೆದ ಕಲಾಪದ ವೇಳೆ ಸದಸ್ಯ ಕೆ.. ತಿಪ್ಪಾಸ್ವಾಮಿ ಕೇಳಿದ ಪ್ರಶ್ನೆಯೊಂದಿಗೆ ಉತ್ತರಿಸುತ್ತಿದ್ದ ಸಚಿವರು, ಮೊಟ್ಟೆ ತಿನ್ನುವ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಾಗಿದೆ. ಮಕ್ಕಳಿಗೆ ಮೊಟ್ಟೆ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಕೋಳಿ ಮೊಟ್ಟೆ ನೀಡಲು ಎಸ್ಸೆಸ್ಸೆಲ್ಸಿ ಮಂಡಳಿ ಶಿಫಾರಸು ಮಾಡಿರುವುದು ನಿಜವಾ? ಕೋಳಿ ಮೊಟ್ಟೆಯನ್ನು ಪೂರೈಸಲಾಗುತ್ತಿದೆಯಾ? ಮೊಟ್ಟೆ ವಿತರಣೆಗೆ ನೀಡಲಾಗುವ ಅನುದಾನ ಎಷ್ಟು? ಸಾತ್ವಿಕ ಆಹಾರ ಎಂದರೇನು? ಸಾತ್ವಿಕ ಆಹಾರವನ್ನು ಯಾವ ಶೈಕ್ಷಣಿಕ ವರ್ಷದಿಂದ ನೀಡಲು ಉದ್ದೇಶಿಸಲಾಗಿದೆ ಎಂದು ಜೆಡಿಎಸ್ ಎಂಎಲ್​ಸಿ ಕೆ.. ತಿಪ್ಪೇಸ್ವಾಮಿ ಅವರು ಸದನದಲ್ಲಿ ಕೇಳಿದರು. ಅಗ ಸಚಿವ ಬಿ.ಸಿ. ನಾಗೇಶ್ ಈ ಪ್ರಶ್ನೆಗಳಿಗೆ ಅಚ್ಚರಿ ವ್ಯಕ್ತಪಡಿಸಿದರು.

ಸರ್ಕಾರದ ನಿಲುವೇನು ಎಂದು ಕೇಳುತ್ತಿರುವುದು ಆಶ್ಚರ್ಯ ತರುತ್ತಿದೆ. ಎಲ್ಲಿ ಅಪೌಷ್ಟಿಕತೆ ಇದೆಯೋ ಅಲ್ಲಿ ಮೊಟ್ಟೆ ಕೊಟ್ಟಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ನಿವಾರಿಸಲು ಮೊಟ್ಟೆ ನೀಡುವ ಪ್ರಯೋಗ ಮಾಡಿದೆವು. ಮೊಟ್ಟೆ ತಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿದೆ. ರಾಜ್ಯದ ಎಲ್ಲಾ ಶಾಲೆಯ ಮಕ್ಕಳಿಗೆ ವರ್ಷದಲ್ಲಿ 46 ದಿನ ಮೊಟ್ಟೆ ಕೊಡಲು ನಿರ್ಧರಿಸಿದ್ದೇವೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕಿಯನ್ನು ಕೊಡುತ್ತಿದ್ದೇವೆ. ಯಾವುದನ್ನು ಸೇವಿಸಬೇಕು ಎಂಬುದು ಮಕ್ಕಳಿಗೆ ಬಿಟ್ಟಿದ್ದು. ಮೊಟ್ಟೆ ತಿನ್ನುವಂತೆ ಯಾವ ಮಕ್ಕಳನ್ನೂ ಬಲವಂತ ಮಾಡಿಲ್ಲ. ಮೊಟ್ಟೆ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಬಿ.ಸಿ. ನಾಗೇಶ್ ಹೇಳಿದರು.

ಇದನ್ನೂ ಓದಿ: ಏರ್​​ ಶೋ ಬಡತನ ನಿವಾರಿಸುವ ಕಾರ್ಯಕ್ರಮನಾ? : ಹೆಚ್​. ಡಿ ಕುಮಾರಸ್ವಾಮಿ

ಇನ್ನು, ಸಾತ್ವಿಕ ಆಹಾರ ಮಾತ್ರ ಕೊಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಮುಂದೆ ಅದರ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಲಾಪಗಳಿಗೆ ಪ್ರಮುಖರು ಗೈರು

ಇಂದು ವಿಧಾನಪರಿಷತ್ ಮತ್ತು ವಿಧಾನಸಭೆ ಕಲಾಪಗಳಿಗೆ ಹೆಚ್ಚಿನ ಹಾಜರಾತಿ ಇರಲಿಲ್ಲ. ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ನಡೆಯಿತು. ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಎಚ್​ಡಿ ರೇವಣ್ಣ, ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಗೈರಾಗಿದ್ದರು. ವಿಧಾನಸಭೆಯ ಹಾಜರಾತಿ ಶೇ. 50ರಷ್ಟು ಇತ್ತು. ಸರ್ಕಾರದ ಮುಖ್ಯ ಸಚೇತಕರು ಕೂಡ ಅನುಪಸ್ಥಿತರಿದ್ದರು.

ವಿಧಾನಪರಿಷತ್​ನಲ್ಲೂ ಹೆಚ್ಚು ಹಾಜರಾತಿ ಇರಲಿಲ್ಲ. ಸಭಾನಾಯಕ ಹಾಗು ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೈರಾಗಿದ್ದು ಹಲವು ಸದಸ್ಯರನ್ನು ರೊಚ್ಚಿಗೆಬ್ಬಿಸಿತ್ತು. ಏರ್​ಶೋ ಇದ್ದರಿಂದ ವಿಮಾನದಲ್ಲಿ ಬರಲು ಸಾಧ್ಯವಾಗಿಲ್ಲ ಎಂಬ ಆಡಳಿತ ಪಕ್ಷದ ಸಮಜಾಯಿಷಿ ವಿಪಕ್ಷ ಸದಸ್ಯರಿಗೆ ಸಮಾಧಾನ ತರಲಿಲ್ಲ.

ಇದನ್ನೂ ಓದಿ: ಬೆಂಗಳೂರು: ಜೈನ್ ವಿಶ್ವವಿದ್ಯಾಲಯದಲ್ಲಿ ಬಿ.ಆರ್ ಅಂಬೇಡ್ಕರ್​​ರಿಗೆ ಅವಮಾನ: 7 ವಿದ್ಯಾರ್ಥಿಗಳ ಬಂಧನ

ಇದೇ ವೇಳೆ, ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಪ್ರಸ್ತಾಪಿಸಲಾಯಿತು. ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಇದರ ಪ್ರಸ್ತಾಪ ಮಾಡಿದರೆ ಕುಡಚಿ ಶಾಸಕ ಪಿ. ರಾಜೀವ್ ಅನುಮೋದನೆ ಮಾಡಿದರು. ಈ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಸಿ.ಟಿ. ರವಿ ಮುಂದುವರಿಸಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಆರಂಭಕ್ಕೆ ಮುನ್ನ ಪದ್ಮ ಪ್ರಶಸ್ತಿ ಗೆದ್ದ ರಾಜ್ಯದ ಸಾಧಕರಿಗೆ ಅಭಿನಂದನೆ ಮಾಡಲಾಯಿತು. ಮಾಜಿ ಸಚಿವ ಟಿ. ಜಾನ್ ನಿಧನಕ್ಕೆ ಸನದಲ್ಲಿ ಸಂತಾಪ ಕೂಡ ಸೂಚಿಸಲಾಯಿತು.

ಫೆಬ್ರುವರಿ 17ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುತ್ತಿದ್ದಾರೆ. ಫೆಬ್ರುವರಿ 10ರಂದು ಆರಂಭವಾದ ಬಜೆಟ್ ಅಧಿವೇಶನ ಫೆಬ್ರುವರಿ 24ರವರೆಗೂ ಮುಂದುವರಿಯಲಿದೆ. 16ರವರೆಗೂ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮುಂದುವರಿಯುತ್ತದೆ. ಬಜೆಟ್ ಮಂಡನೆ ಬಳಿಕ ಫೆ. 20ರಿಂದ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.

Published On - 1:55 pm, Mon, 13 February 23

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ