ಅಕ್ರಮ ಆಸ್ತಿಗೆ ತೆರಿಗೆ; ಬಿಬಿಎಂಪಿ ನಿಯಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಚಿಂತನೆ

|

Updated on: Aug 10, 2023 | 9:47 PM

BBMP-like taxation on illegal properties; ಹಾಗೆಂದು ತೆರಿಗೆ ವಿಧಿಸುವಿಕೆಯು ಅಂತಹ ಕಟ್ಟಡಗಳಿಗೆ ಮಾಲೀಕತ್ವ ಅಥವಾ ಕಾನೂನು ಸ್ಥಾನಮಾನವನ್ನು ಕ್ರಮಬದ್ಧಗೊಳಿಸುವ ಯಾವುದೇ ಹಕ್ಕನ್ನು ಕಾಯ್ದೆಯು ನೀಡುವುದಿಲ್ಲ. ಕಾನೂನಿನ ಉಲ್ಲಂಘನೆಗಾಗಿ ಅಂತಹ ಕಟ್ಟಡಗಳು ಯಾವಾಗಲೂ ಹೊಣೆಗಾರರಾಗಿರುತ್ತವೆ.

ಅಕ್ರಮ ಆಸ್ತಿಗೆ ತೆರಿಗೆ; ಬಿಬಿಎಂಪಿ ನಿಯಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಚಿಂತನೆ
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ
Follow us on

ಬೆಂಗಳೂರು, ಆಗಸ್ಟ್ 10: ರಾಜ್ಯಾದ್ಯಂತ ಪುರಸಭೆಗಳಲ್ಲಿ ಅನಧಿಕೃತ ಕಟ್ಟಡಗಳು ಮತ್ತು ಜಮೀನುಗಳಿಗೆ ಆಸ್ತಿ ತೆರಿಗೆ ವಿಧಿಸುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿರುವ ಅನಧಿಕೃತ ಆಸ್ತಿಗಳ ಮೇಲೆ ತೆರಿಗೆ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಾಯ್ದೆಯಲ್ಲಿರುವ ಕಾನೂನನ್ನು ಇತರ ನಗರಗಳಿಗೂ ವಿಸ್ತರಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

ಅನಧಿಕೃತ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ವಿಧಾನಗಳ ಕುರಿತು ಚರ್ಚಿಸಲು ಉಪಸಮಿತಿಯನ್ನು ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟ ಅಧಿಕಾರ ನೀಡಿದೆ.

ಪ್ರಸ್ತುತ, ಬಿಬಿಎಂಪಿ ಕಾಯ್ದೆಯ ಸೆಕ್ಷನ್ 144 (6) ರಲ್ಲಿ ಅಕ್ರಮ ಆಸ್ತಿಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಕಾಯ್ದೆಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಕಟ್ಟಡದ ಉಪವಿಧಿಯ ನಿಬಂಧನೆಗಳನ್ನು ಉಲ್ಲಂಘಿಸಿ ಅಥವಾ ಅನಧಿಕೃತ ಲೇಔಟ್‌ನಲ್ಲಿ ಅಥವಾ ಕಂದಾಯ ಭೂಮಿಯಲ್ಲಿ ಅಥವಾ ಆಕ್ಯುಪೆನ್ಸಿ ಪ್ರಮಾಣಪತ್ರವಿಲ್ಲದೆ ನಿರ್ಮಿಸಲಾದ ಕಟ್ಟಡಗಳಿಗೆ ತೆರಿಗೆ ವಿಧಿಸಬಹುದಾಗಿದೆ.

ಹಾಗೆಂದು ತೆರಿಗೆ ವಿಧಿಸುವಿಕೆಯು ಅಂತಹ ಕಟ್ಟಡಗಳಿಗೆ ಮಾಲೀಕತ್ವ ಅಥವಾ ಕಾನೂನು ಸ್ಥಾನಮಾನವನ್ನು ಕ್ರಮಬದ್ಧಗೊಳಿಸುವ ಯಾವುದೇ ಹಕ್ಕನ್ನು ಕಾಯ್ದೆಯು ನೀಡುವುದಿಲ್ಲ. ಕಾನೂನಿನ ಉಲ್ಲಂಘನೆಗಾಗಿ ಅಂತಹ ಕಟ್ಟಡಗಳು ಯಾವಾಗಲೂ ಹೊಣೆಗಾರರಾಗಿರುತ್ತವೆ.

ಇದನ್ನೂ ಓದಿ: ಲೋಕಾಯುಕ್ತ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಸಚಿವ ಸಂಪುಟ ಸಭೆ ಅನುಮೋದನೆ

ಸರ್ಕಾರವು ಈಗ ಈ ನಿಬಂಧನೆಯನ್ನು ಕರ್ನಾಟಕ ಪುರಸಭೆಗಳ ಕಾಯಿದೆ ಮತ್ತು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್‌ಗಳ ಕಾಯ್ದೆಗೆ ವಿಸ್ತರಿಸಲು ಬಯಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್, ರಾಜ್ಯಾದ್ಯಂತ ಮುನ್ಸಿಪಲ್ ಕಾರ್ಪೊರೇಷನ್‌ಗಳು ಮತ್ತು ಪುರಸಭೆಗಳಲ್ಲಿ ಇದೇ ರೀತಿಯ ಮಾನದಂಡಗಳನ್ನು ತರಲು ಸರ್ಕಾರ ಬಯಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಪ್ರಕರಣ ಹಿಂಪಡೆಯಲು ಸಂಪುಟ ನಿರ್ಧಾರ

ಪ್ರಸ್ತುತ ಅನಧಿಕೃತ ಕಟ್ಟಡಗಳ ಮಾಲೀಕರಿಗೆ ತೆರಿಗೆ ಪಾವತಿಸುವುದು ಸರ್ಕಾರಕ್ಕೆ ಸವಾಲಾಗಿದೆ. ಸಕ್ರಮಗೊಳಿಸದೇ ಇರುವಾಗ ತೆರಿಗೆ ಏಕೆ ಕಟ್ಟಬೇಕು ಎಂದು ಆಸ್ತಿ ಮಾಲೀಕರು ಪ್ರಶ್ನಿಸುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು.

ಅನಧಿಕೃತ ಆಸ್ತಿಗಳಿಗೆ ಮಾತ್ರ ತೆರಿಗೆ ವಿಧಿಸುವುದು ಮತ್ತು ಸಕ್ರಮಗೊಳಿಸುವುದು ಸರ್ಕಾರದ ಯೋಜನೆಯಾಗಿದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.

ರಾಜಕೀಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ