ಬಾಗಲಕೋಟೆ ಜಿಲ್ಲೆ ಜನರಲ್ಲಿ ಹೆಚ್ಚಾಯಿತು ಮದ್ರಾಸ್ ಐ ಭೀತಿ: ಪ್ರತಿದಿನ 40ಕ್ಕೂ ಹೆಚ್ಚು ರೋಗಿಗಳು ಜಿಲ್ಲಾಸ್ಪತ್ರೆಗೆ ಭೇಟಿ

Bagalkote News: ಮದ್ರಾಸ್ ಐ ಮಾರಣಾಂತಿಕ‌ ವೈರಲ್ ಫೀವರ್ ಅಲ್ಲದಿದ್ದರೂ ಇದರಿಂದ ಜನರು ವಿಪರೀತ ಕಿರಿ ಕಿರಿ ಅನುಭವಿಸುವಂತಾಗಿದೆ. ಬಾಗಲಕೋಟಿ ಜಿಲ್ಲೆಯಲ್ಲಿ ಮದ್ರಾಸ್ ಐನಿಂದ ಜನರು ಬಳಲುತ್ತಿದ್ದಾರೆ. ಅತಿ ವೇಗವಾಗಿ ಮದ್ರಾಸ್ ಐ ಹರಡುತ್ತಿದ್ದು ಜನರಲ್ಲಿ ಭೀತಿ ಹುಟ್ಟಿಸಿದೆ. ಜಿಲ್ಲಾಸ್ಪತ್ರೆಗೆ ಪ್ರತಿದಿನ 40-50 ಮದ್ರಾಸ್ ಐ ರೋಗಿಗಳ ಬರುತ್ತಿದ್ದು ವೈದ್ಯರು‌ ನಿರಂತರವಾಗಿ ಚಿಕಿತ್ಸೆ ಮುಂದುವರೆಸಿದ್ದಾರೆ. 

ಬಾಗಲಕೋಟೆ ಜಿಲ್ಲೆ ಜನರಲ್ಲಿ ಹೆಚ್ಚಾಯಿತು ಮದ್ರಾಸ್ ಐ ಭೀತಿ: ಪ್ರತಿದಿನ 40ಕ್ಕೂ ಹೆಚ್ಚು ರೋಗಿಗಳು ಜಿಲ್ಲಾಸ್ಪತ್ರೆಗೆ ಭೇಟಿ
ಕಣ್ಣಿನ ತಪಾಸಣೆ ‌ನಡೆಸುತ್ತಿರುವ ವೈದ್ಯರು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 10, 2023 | 9:43 PM

ಬಾಗಲಕೋಟೆ, ಆಗಸ್ಟ್​ 10: ಪ್ರತಿ ವರ್ಷ ಒಂದಿಲ್ಲೊಂದು ವೈರಸ್​ಗಳು ಜನರನ್ನು ಕಾಡುತ್ತಿವೆ. ಮೂರು ವರ್ಷ ಕಾಡಿದ ಕೋವಿಡ್ ಈಗ ತಣ್ಣಗಾಗಿದೆ. ಆದರೆ ಈ ವರ್ಷ ಮದ್ರಾಸ್ ಐ (madras eye effect) ವಕ್ಕರಿಸಿದೆ. ಜಿಲ್ಲೆಯಲ್ಲಿ ಮದ್ರಾಸ್ ಐನಿಂದ ಜನರು ಬಳಲುತ್ತಿದ್ದಾರೆ. ಅತಿ ವೇಗವಾಗಿ ಮದ್ರಾಸ್ ಐ ಹರಡುತ್ತಿದ್ದು ಜನರಲ್ಲಿ ಭೀತಿ ಹುಟ್ಟಿಸಿದೆ. ಸದ್ಯ ಈಗ ಎಲ್ಲ ಕಡೆ ಮದ್ರಾಸ್ ಐನದ್ದೆ ಹಾವಳಿ. ಪ್ರತಿ ಹಳ್ಳಿ ಪಟ್ಟಣ ನಗರದಲ್ಲೂ ಮದ್ರಾಸ್ ಐ ಪೇಷಂಟ್ ಗಳ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಬಾಗಲಕೋಟೆ ಜಿಲ್ಲೆಯಲ್ಲಿ ಮದ್ರಾಸ್ ಐ ಹಾವಳಿ ಹೆಚ್ಚಾಗಿದ್ದು,ಜನರಲ್ಲಿ ಮದ್ರಾಸ್ ಐ ಭೀತಿ ಶುರುವಾಗಿದೆ.

ಕಣ್ಣಿನಲ್ಲಿ ನೀರು ಬರುವುದು, ಕಣ್ಣು ಕೆಂಪಾಗೋದು, ಉರಿತ, ಕಣ್ಣು ಚುಚ್ಚುವಿಕೆ, ನೋವು, ಬಾವು ಕಾಣಿಸಿಕೊಳ್ಳುವ ಲಕ್ಷಣ ಇರುವ ಮದ್ರಾಸ್ ಐ ಲಕ್ಷಣವಾಗಿದೆ. ಜಿಲ್ಲಾಸ್ಪತ್ರೆಗೆ ಪ್ರತಿದಿನ 40-50 ಮದ್ರಾಸ್ ಐ ರೋಗಿಗಳ ಬರುತ್ತಿದ್ದು ವೈದ್ಯರು‌ ನಿರಂತರವಾಗಿ ಚಿಕಿತ್ಸೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಶಾಲೆಗಳು ಆರಂಭವಾಗಿ ಎರಡು ತಿಂಗಳಾದರೂ ಸಿಗದ ಎರಡನೇ ಸೆಟ್ ಸಮವಸ್ತ್ರ: ಶಿಕ್ಷಣ ಇಲಾಖೆ ವಿರುದ್ಧ ವಿದ್ಯಾರ್ಥಿಗಳು ಬೇಸರ

ಬಾಗಲಕೋಟೆಯ 50 ಬೆಡ್ ಆಸ್ಪತ್ರೆ, ಜಿಲ್ಲೆಯ ಐದು ತಾಲ್ಲೂಕಾಸ್ಪತ್ರೆ, 49 ಪ್ರಾಥಮಿಕ ಆರೋಗ್ಯ ಕೇಂದ್ರ, 8 ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ 20-30 ಮದ್ರಾಸ್ ಐ ರೋಗಿಗಳು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಹೊರಟಿದ್ದಾರೆ‌. ಉಳಿದಂತೆ ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು ಪ್ರತಿನಿತ್ಯ ಸರಾಸರಿ 1500 ಜನರು ಮದ್ರಾಸ್ ಐ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಟಾಣಿ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಮದ್ರಾಸ್ ಐ ಬಾಧೆ ಕಾಡುತ್ತಿದೆ. ಇದರಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

ಮದ್ರಾಸ್ ಐ ಮಾರಣಾಂತಿಕ‌ ವೈರಲ್ ಫೀವರ್ ಅಲ್ಲ ಆದರೂ ಇದರಿಂದ ಜನರು ವಿಪರೀತ ಕಿರಿ ಕಿರಿ ಅನುಭವಿಸುತ್ತಾರೆ. ಮದ್ರಾಸ್ ಐ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ ಶಾಲೆ ಕಾಲೇಜು ಅಂಗನವಾಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಎರಡು ತಂಡ ಮಾಡಲಾಗಿದೆ. ಇದರಲ್ಲಿ ತಂಡದಲ್ಲಿ ಕಣ್ಣಿನ ವೈದ್ಯರು ಸೇರಿದಂತೆ ಇಬ್ಬರು ವೈದ್ಯರು ನರ್ಸ್ ಗಳು ಇರಲಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ ಕರಾಟೆ ಕಲಿ, ಎಲೆಕ್ಟ್ರಿಷಿಯನ್ ಮಗಳು ಚಿನ್ನ ಗೆದ್ದು ವಿಶ್ವಮಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ! ಆರ್ಥಿಕ ನೆರವು ಬೇಕಿದೆ

ಆಸ್ಪತ್ರೆಗಳಲ್ಲಿ ಇದಕ್ಕೆ ವೈದ್ಯರು ಐ ಡ್ರಾಪ್ಸ್ ಹಾಗೂ ಸಲಹೆ ಕೊಟ್ಟು ಕಳಿಸುತ್ತಿದ್ದಾರೆ. ಜನರು ಭಯಪಡುವ ಅಗತ್ಯವಿಲ್ಲ. ಇದಕ್ಕೆ‌ ಮುಂಜಾಗ್ರತಾ ಕ್ರಮ ಮುಖ್ಯ, ಸಾಂಕ್ರಾಮಿಕ ಆಗಿರೋದರಿಂದ ಒಬ್ಬರು ಮತ್ತೊಬ್ಬರ ಟಾವೆಲ್ ಆಗಲಿ ಖರ್ಚಿಪ್ ಆಗಲಿ ಬಳಸಬಾರದು. ಮತ್ತೊಬ್ಬರ ವಸ್ತುಗಳನ್ನು ಬಳಸಬಾರದು. ಮದ್ರಾಸ್ ಐ ಬಂದವರಿಂದ ಆದಷ್ಟು ಅಂತರ ಕಾಪಾಡಬೇಕು. ಇದೇ ಈ ವೈರಲ್ ಇಂಪೆಕ್ಷನ್​ಗೆ ಬಹುಮುಖ್ಯವಾದ ಮದ್ದು ಅಂತಿದ್ದಾರೆ.

ಜಿಲ್ಲೆಯಲ್ಲಿ ಮದ್ರಾಸ್ ಐ ಬಾರಿ ಭೀತಿ ಹುಟ್ಟಿಸಿದ್ದು, ಮುಕ್ತವಾಗಿ ಜನರ ಜೊತೆ ಬೆರೆಯಲು ಹಿಂದೇಟು ಹಾಕುವಂತಾಗಿದೆ. ಮಾರಣಾಂತಿಕವಲ್ಲದಿದ್ದರೂ ಜನರಿಗೆ ಕಿರಿಕಿರಿ ಮಾಡುವ ಮದ್ರಾಸ್ ಐ ಅನ್ನು ಮುಂಜಾಗ್ರತಾ ಕ್ರಮ ಕೈಗೊಂಡು ಜನರೇ ತೊಲಗಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:42 pm, Thu, 10 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ