ಬಾಗಲಕೋಟೆ ಕರಾಟೆ ಕಲಿ, ಎಲೆಕ್ಟ್ರಿಷಿಯನ್ ಮಗಳು ಚಿನ್ನ ಗೆದ್ದು ವಿಶ್ವಮಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ! ಆರ್ಥಿಕ ನೆರವು ಬೇಕಿದೆ

Bagalkote Karate girl: ಬಾಗಲಕೋಟೆ ಕರಾಟೆ ಕಲಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತಯಾರಿ ನಡೆಸಿದ್ದಾರೆ. ಇವರಿಗೆ ಆರ್ಥಿಕ ನೆರವು ದೊರೆತರೆ ಅಲ್ಲೂ ಕೂಡ ಸಾಧನೆಗೈಯಲಿ ಎಂಬುದು ಎಲ್ಲರ ಆಶಯವಾಗಿದೆ

ಬಾಗಲಕೋಟೆ ಕರಾಟೆ ಕಲಿ, ಎಲೆಕ್ಟ್ರಿಷಿಯನ್ ಮಗಳು ಚಿನ್ನ ಗೆದ್ದು ವಿಶ್ವಮಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ! ಆರ್ಥಿಕ ನೆರವು ಬೇಕಿದೆ
ಬಾಗಲಕೋಟೆ ಕರಾಟೆ ಕಲಿ-ಆರ್ಥಿಕ ನೆರವು ಬೇಕಿದೆ
Follow us
| Updated By: ಸಾಧು ಶ್ರೀನಾಥ್​

Updated on: Aug 07, 2023 | 1:42 PM

ಕರಾಟೆ ಅದೊಂದು ಸ್ವರಕ್ಷಣಾ ಕಲೆ. ಕರಾಟೆ ಪುರುಷರಿಗೂ ಮಹಿಳೆಯರಿಗೂ ರಕ್ಷಾಕವಚವಿದ್ದಂತೆ.ಇಂತಹ ಕರಾಟೆಯಲ್ಲಿ ಬಡವರ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹುಬ್ಬೇರುವಂತೆ ಮಾಡಿದ್ದಾರೆ.ಚಿನ್ನ ಬೆಳ್ಳಿ ಕಂಚು ದೋಚಿ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಷ್ಟಕ್ಕೂ ಆ ವಿದ್ಯಾರ್ಥಿಗಳು ಯಾರು?ಎಲ್ಲಿಯವರು ಏನು ಅವರ ಸಾಧನೆ ಇಲ್ಲಿದೆ ನೋಡಿ ಡಿಟೇಲ್ಸ್.. ಹರಿತವಾದ ನೋಟ ಕಿರುಚಾಡುತ್ತಾ ಜಬರ್ದಸ್ತ್ ಕಿಕ್,ಎದುರಾಳಿ ಮೇಲೆ ವೇಗವಾದ ಎಗರುವಿಕೆ. ಕಿಕ್ ಕೈ ಹೊಡೆತಕ್ಕೆ ಎದುರಾಳಿ ತೆಪ್ಪಗಾಗಲೆಬೇಕು.ಇದು ‌ಬಾಗಲಕೋಟೆ ಕರಾಟೆ ಚಾಂಪಿಯನ್ ಗಳ ಕರಾಟೆ ಕಿಕ್ ಜಲಕ್.ಹೌದು ಆತ್ಮರಕ್ಷಣಾ ಕಲೆ ಕರಾಟೆಯಲ್ಲಿ ಬಾಗಲಕೋಟೆ ಕರಾಟೆ ಕಲಿಗಳು ರಾಷ್ಟ್ರಮಟ್ಟದಲ್ಲಿ ಇದೀಗ ಸದ್ದು ಮಾಡಿ ಎಲ್ಲರ‌ ಗಮನ ಸೆಳೆದಿದ್ದಾರೆ.

ಇವರು ಚಿನ್ನ, ಬೆಳ್ಳಿ,ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ.ಮೈಸೂರಿನಲ್ಲಿ‌ ನಡೆದ ೨೬ ನೇ ರಾಷ್ಟ್ರಮಟ್ಟದ “ಸಿಟೋರ್ಯು ಕರಾಟೆ ಡು ನ್ಯಾಷನಲ್ ಚಾಂಪಿಯನ್‌ ಷಿಪ್‌‌ ನಲ್ಲಿ ನಾಲ್ಕು ವಿದ್ಯಾರ್ಥಿಗಳು ವಿವಿಧ ಪದಕ ಗೆದ್ದು ಬಾಗಲಕೋಟೆ ಕೀರ್ತಿ ಪತಾಕೆ ಹಾರಿಸಿದ್ದಾರೆ.ಡೆಲ್ಲಿ ಸ್ಪರ್ಧಾಳು ಜೊತೆ ಬಾಗಲಕೋಟೆಯ ೨೨ ವರ್ಷದ ತೇಜಸ್ವಿನಿ ಸೆಣಸಾಡಿ ಚಿನ್ನ ಗೆದ್ದಿದ್ದಾರೆ.

ಇನ್ನು ಕೇರಳ ತಂಡದ ಜೊತೆಗೆ ೨೯ ವರ್ಷದ ಸದ್ದಾಮ್ ಬೆಳ್ಳಿ ಗೆದ್ದರೆ,ಅನಸ್ ಹಾಗೂ ಅಸಿಪ್ ಕಂಚು ಗೆದ್ದು ಬೀಗಿದ್ದಾರೆ.ಐದು ಜನ ಸ್ಪರ್ಧಾಳುಗಳಲ್ಲಿ ನಾಲ್ಕು ಜನರು ಪದಕ ಗೆದ್ದಿದ್ದು ಪದಕ ವಿಜೇತರಿಗೆ ಸ್ಥಳೀಯರು ಶುಭ ಕೋರಿ ಸಂಭ್ರಮಿದ್ದಾರೆ.ಸ್ಪರ್ಧಾಳುಗಳು ಮುಂದೆ ಏಷ್ಯನ್ ಗೇಮ್ಸ್,ಕಾಮನ್ ವೆಲ್ಸ್ ನಂತಹ ಗೇಮ್ಸ್ ನಲ್ಲಿ ಭಾಗಿಯಾಗುವ ಕನಸು ಹೊಂದಿದ್ದಾರೆ.

ಬಾಗಲಕೋಟೆಯ ಮೆಳ್ಳಿಗೇರಿ ಕಾಂಪ್ಲೆಕ್ಸ್ ನಲ್ಲಿ ಸಿಟೊರ್ಯು ಸಂಸ್ಥೆಯ ಕರಾಟೆ ಸ್ಕೂಲ್ ಇದೆ‌.ಬಹುತೇಕ ಬಡ ವಿದ್ಯಾರ್ಥಿಗಳು ಇಲ್ಲಿ ಕರಾಟೆ ಕಲಿಯಲು ಬರುತ್ತಾರೆ.ಬಡ ಕೂಲಿಕಾರ್ಮಿಕರ ಮಕ್ಕಳು ತರಕಾರಿ ವ್ಯಾಪಾರಸ್ಥರ ಮಕ್ಕಳು ಸೇರಿದಂತೆ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಇಲ್ಲಿ ಕರಾಟೆ ಹೇಳಿ ಕೊಡಲಾಗುತ್ತದೆ.ದಿನಾಲು ಬೆಳಿಗ್ಗೆ ಸಂಜೆ ಕರಾಟೆ ತರಬೇತಿ ನಡೆಸಲಾಗುತ್ತದೆ. ಇನ್ನು ಇಲ್ಲಿ ತೇಜಸ್ವಿನಿ ಹೊಟ್ಟಿ ಎಂಬ ಯುವತಿ ಡೆಲ್ಲಿ ಮೂಲದ ಸ್ಪರ್ಧಾಳುವನ್ನು ಸೋಲಿಸಿ ಚಿನ್ನ ಪದಕ ಪಡೆದಿದ್ದಾರೆ.

ಇದನ್ನೂ ಓದಿ:  ಶಿವಮೊಗ್ಗ ನಗರದಲ್ಲಿ ಕರಾಟೆ ಕಲರವ, ಗಮನ ಸೆಳೆದ ಕರಾಟೆ ಫೈಟ್- 4ನೇ ಅಂತರಾಷ್ಟ್ರೀಯ ಶಿವಮೊಗ್ಗ ಓಪನ್ ಕರಾಟೆ

ಎಲೆಕ್ಟ್ರಿಷಿಯನ್ ಮಗಳಾದ ತೇಜಸ್ವಿನಿ ಚಿನ್ನ ಗೆದ್ದು ಎಲ್ಲ ಮೆಚ್ಚುಗೆ ಗಳಿಸಿದ್ದಾಳೆ.ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ಇಂಡೊನೇಷಿಯಾದಲ್ಲಿ ನಡೆಯಲಿರುವ ಸಿಟೋರ್ಯು ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ ಷಿಪ್ ‌ಗೆ ತೇಜಸ್ವಿನಿ ಆಯ್ಕೆಯಾಗಿದ್ದಾಳೆ‌.ಆದರೆ ಹೋಗೋದಕ್ಕೆ ಆರ್ಥಿಕ ಅಡಚಣೆಯಿದ್ದು,ಯಾರಾದರೂ ಆರ್ಥಿಕ‌ ನೆರವು ನೀಡಿದರೆ ಅನುಕೂಲ,ಖಂಡಿತ ನಾನು ನಮ್ಮ ದೇಶದ ಹೆಸರು ಉಳಿಸುತ್ತೇನೆ ಅಂತಾಳೆ ತೇಜಸ್ವಿನಿ.

ಒಟ್ಟಿನಲ್ಲಿ ಬಾಗಲಕೋಟೆ ಕರಾಟೆ ಕಲಿಗಳು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದು ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ತಯಾರಿ ನಡೆಸಿದ್ದಾರೆ. ಇವರಿಗೆ ಆರ್ಥಿಕ ನೆರವು ಸಿಕ್ಕು ಅಲ್ಲೂ ಕೂಡ ಸಾಧನೆಗೈಯಲಿ ಎಂಬುದು ಎಲ್ಲರ ಆಶಯವಾಗಿದೆ

ಬಾಗಲಕೋಟೆ ಜಿಲ್ಲಾ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ