AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ನವಜಾತ ಗಂಡು ಶಿಶು ಎಸೆದು ಪರಾರಿಯಾಗಲು ಯತ್ನಿಸಿದ ಬಾಣಂತಿ, ಪೋಷಕರು; ಸ್ಥಳೀಯರಿಂದ ತರಾಟೆ

ಹೊಲದಲ್ಲಿ ನವಜಾತ ಗಂಡು ಶಿಶುವನ್ನು ಎಸೆದು ಪರಾರಿಯಾಗಲು ಯತ್ನಿಸಿದ ಬಾಣಂತಿ ಮತ್ತು ಆಕೆಯ ಸಹೋದರನನ್ನು ಸ್ಥಳೀಯರು ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ: ನವಜಾತ ಗಂಡು ಶಿಶು ಎಸೆದು ಪರಾರಿಯಾಗಲು ಯತ್ನಿಸಿದ ಬಾಣಂತಿ, ಪೋಷಕರು; ಸ್ಥಳೀಯರಿಂದ ತರಾಟೆ
ಬಾಗಲಕೋಟೆಯಲ್ಲಿ ಹೊಲದಲ್ಲಿ ನವಜಾತ ಗಂಡು ಶಿಶುವನ್ನು ಎಸೆದು ಪರಾರಿಯಾಗಲು ಯತ್ನಿಸಿದ ಬಾಣಂತಿ ಮತ್ತು ಆಕೆಯ ಪೋಷಕರಿಗೆ ಸ್ಥಳೀಯರಿಂದ ತರಾಟೆ (ಸಾಂದರ್ಭಿಕ ಚಿತ್ರ)
ರವಿ ಹೆಚ್ ಮೂಕಿ, ಕಲಘಟಗಿ
| Updated By: Rakesh Nayak Manchi|

Updated on:Aug 06, 2023 | 6:57 PM

Share

ಬಾಗಲಕೋಟೆ, ಆಗಸ್ಟ್ 6: ಹೊಲದಲ್ಲಿ ನವಜಾತ ಗಂಡು ಶಿಶುವನ್ನು (Newborn) ಎಸೆದು ಪರಾರಿಯಾಗಲು ಯತ್ನಿಸಿದ ಬಾಣಂತಿ ಮತ್ತು ಆಕೆಯ ಪೋಷಕರನ್ನು ಸ್ಥಳೀಯರು ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಬಾಗಲಕೋಟೆ (Bagalkot) ತಾಲೂಕಿನ ಬೆನಕಟ್ಟಿ ಗ್ರಾಮದ ಬಳಿ ನಡೆದಿದೆ. ಅಕ್ರಮ ಸಂಬಂಧದಿಂದ ಮಹಿಳೆ ಗರ್ಭಿಣಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಸಂಗೊಂದಿ ಗ್ರಾಮದ ಬಾಣಂತಿ ಹಾಗೂ ಆಕೆಯ ಸಹೋದರ ಬೆನಕಟ್ಟಿ ಗ್ರಾಮದ ಬಳಿ ಇರುವ ಹೊಲಕ್ಕೆ ಬಂದು ನವಜಾತ ಗಂಡು ಶಿಶುವನ್ನು ಎಸೆದು ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ನೋಡಿದ ಸ್ಥಳೀಯರು, ಬಾಣಂತಿ ಮತ್ತು ಪೋಷಕರನ್ನು ತಾರಾಟೆಗೆ ತೆಗೆದುಕೊಂಡಿದ್ದು, ಆಕೆಯ ಸಹೋದರನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಇದನ್ನೂ ಓದಿ: Kalaburagi News: ತಿಪ್ಪೆಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ; ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳು ದೌಡು

ನಂತರ ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ. ನಂತರ ಬಾಣಂತಿ ಹಾಗೂ ನವಜಾತ ಶಿಶುವನ್ನು ಆ್ಯಂಬುಲೆನ್ಸ್​​ ಮೂಲಕ ಜಿಲ್ಲಾಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Sun, 6 August 23