Kalaburagi News: ತಿಪ್ಪೆಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ; ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳು ದೌಡು
ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಹೊರವಲಯದಲ್ಲಿ ನಿನ್ನೆ(ಆ.3) ಸಂಜೆ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗಳ ಭೇಟಿ ನೀಡಿ ಮಗುವನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಲಬುರಗಿ, ಆ.4: ಜಿಲ್ಲೆಯ ಯಡ್ರಾಮಿ ಪಟ್ಟಣದ ಹೊರವಲಯದಲ್ಲಿ ನಿನ್ನೆ(ಆ.3) ಸಂಜೆ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಹೌದು, ಬಟ್ಟೆಯಲ್ಲಿ ಸುತ್ತಿ ತಿಪ್ಪೆಗುಂಡಿಯಲ್ಲಿ ಶಿಶುವನ್ನ ಬಿಸಾಕಿ ಹೋಗಿದ್ದಾರೆ. ಈ ಕುರಿತು ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ(Women and Child Department) ಸಿಬ್ಬಂದಿಗಳ ಭೇಟಿ ನೀಡಿದ್ದು, ಮಗುವನ್ನ ರಕ್ಷಿಸಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಲ್ಫಿ ತೆಗೆಯುವ ಸಂದರ್ಭ ಕಾಲು ಜಾರಿಬಿದ್ದು ಯುವಕ ಸಾವು ಪ್ರಕರಣ; ಶೋಧ ಕಾರ್ಯ ಆರಂಭ
ಕೊಡಗು: ಜಿಲ್ಲೆಯ ಹಾರಂಗಿಯಲ್ಲಿ ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಕಾಲು ಜಾರಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸಂದೀಪ್ (46) ನದಿಗೆ ಬಿದ್ದ ವ್ಯಕ್ತಿ. ಇತ ಬೆಂಗಳೂರು ಮೂಲದವನಾಗಿದ್ದು, ನಾಲ್ವರು ಸ್ನೇಹಿತರು ಸೇರಿ ಕೊಡಗು ಜಿಲ್ಲೆಗೆ ನಿನ್ನೆ ಪ್ರವಾಸಕ್ಕೆ ಆಗಮಿಸಿದ್ದರು. ಅಲ್ಲಿದ್ದ ತಡೆಗೋಡೆ ಇಲ್ಲದ ಸೇತುವೆ ಮೇಲೆ ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ಸಂದೀಪ್ ಬಿದ್ದಿದ. ಇದೀಗ ಆತನಿಗಾಗಿ ಶೋಧ ಕಾರ್ಯ ಆರಂಭವಾಗಿದೆ.
ಜಮೀನಿಗೆ ತೆರಳಿದ್ದ ವೇಳೆ ಕರಡಿ ದಾಳಿ ರೈತನಿಗೆ ಗಾಯ
ಕೊಪ್ಪಳ: ತಾಲ್ಲೂಕಿನ ಇಂದರಗಿ ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದೆ. ಈ ವೇಳೆ ರೈತ ಹನುಮಂತಪ್ಪ ಕುರಿ ಎಂಬುವವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಹಳ ದಿನಗಳಿಂದಲೂ ಕರಡಿ ದಾಳಿಯಿಂದ ಅನೇಕ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಈ ಭಾಗದ ಜನರು ಕರಡಿ ಧಾಮಕ್ಕಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ