ಲೋಕಸಭಾ ರಿಸಲ್ಟ್ ವೇಳೆ ಸಮಸ್ಯೆ ನಿವಾರಣೆಗೆ ಟಾಸ್ಕ್​ ಫೋರ್ಸ್ ರಚಿಸಿದ ಕಾಂಗ್ರೆಸ್

Loksabha Election Result 2024: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ(ಜೂನ್ 04) ರಂದು ಬೆಳಗ್ಗೆ 8 ಗಂಟೆಯಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಮತ ಎಣಿಕೆ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಎದುರಾದರೆ ಇತ್ಯರ್ಥ ಮಾಡಲು ಟಾಸ್ಕ್ ಪೋರ್ಸ್ ರಚನೆ ಮಾಡಿದೆ.

ಲೋಕಸಭಾ ರಿಸಲ್ಟ್ ವೇಳೆ ಸಮಸ್ಯೆ ನಿವಾರಣೆಗೆ ಟಾಸ್ಕ್​ ಫೋರ್ಸ್ ರಚಿಸಿದ ಕಾಂಗ್ರೆಸ್
Edited By:

Updated on: Jun 03, 2024 | 7:25 PM

ಬೆಂಗಳೂರು, (ಜೂನ್ 03): ಕರ್ನಾಟಕದ 28 ಲೋಕಸಭಾ (Karnataka Loksabha Elections 2024) ಕ್ಷೇತ್ರಗಳ ಮತ ಎಣಿಕೆ ನಾಳೆ(ಜೂನ್ 04) ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದ್ದು, ರಾಜಕೀಯ ನಾಯಕರಿಗೆ ಫಲಿತಾಂಶ (Loksabha Elections Result 2024) ಏನಾಗಲಿದೆ ಎಂದು ತಳಮಳ ಶುರುವಾಗಿದೆ. ಇನ್ನು ಕರ್ನಾಟಕ ಕಾಂಗ್ರೆಸ್, ಫಲಿತಾಂಶದ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಎದುರಾದರೆ ಇತ್ಯರ್ಥ ಮಾಡಲು ವಿಭಾಗವಾರು ಟಾಸ್ಕ್ ಪೋರ್ಸ್ ರಚನೆ ಮಾಡಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರು, ಸಚಿವರನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಲಾಗಿದ್ದು, ಮಾಧ್ಯಮ ವಕ್ತಾರರು, ಕೆಪಿಸಿಸಿ ಕಾನೂನು ಘಟಕದ ಸದಸ್ಯರನ್ನು ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರನ್ನಾಗಿ ಮಾಡಿ ನೇಮಕ ಮಾಡಲಾಗಿದೆ. ಇನ್ನು ಟಾಸ್ಕ್ ಫೋರ್ಸ್ ಸಂಯೋಜಕರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಅವರನ್ನ ನೇಮಕ ಮಾಡಲಾಗಿದೆ.

ಇದನ್ನೂ ಓದಿ: Lok Sabha Election 2024 Results Live: ರಾಜ್ಯ ಸರ್ಕಾರ ಬದಲಾಗುತ್ತೊ ಇಲ್ಲೋ ಗೊತ್ತಿಲ್ಲ, ರಾಜಕಾರಣ ಬದಲಾಗುತ್ತೆ: ಬೊಮ್ಮಾಯಿ

ವಿಭಾಗವಾರು ಟಾಸ್ಕ್ ಫೋರ್ಸ್ ಹೀಗಿದೆ

ಬೆಂಗಳೂರು ವಿಭಾಗದ ಟಾಸ್ಕ್ ಪೋರ್ಸ್ ಸದಸ್ಯರು

  • ಮಂಜುನಾಥ್ ಭಂಡಾರಿ- ಕೆಪಿಸಿಸಿ ಕಾರ್ಯಾಧ್ಯಕ್ಷ
  • ರಾಮಲಿಂಗರೆಡ್ಡಿ – ಸಾರಿಗೆ ಸಚಿವ
  • ಕೃಷ್ಣಭರೇಗೌಡ- ಸಚಿವರು

ಮೈಸೂರು ವಿಭಾಗದ ಸದಸ್ಯರು

  • ತನ್ವೀರ್ ಸೇಠ್ – ಕೆಪಿಸಿಸಿ ‌ಕಾರ್ಯಾಧ್ಯಕ್ಷ
  • ದಿನೇಶ್ ಗುಂಡೂರಾವ್- ಸಚಿವರು
  • ಸುಧಾಕರ್ – ಸಚಿವರು

ಬೆಳಗಾವಿ ವಿಭಾಗದ ಸದಸ್ಯರು

  • ವಿನಯ್ ಕುಲಕರ್ಣಿ-ಕೆಪಿಸಿಸಿ‌ ಕಾರ್ಯಾಧ್ಯಕ್ಷರು
  • ಹೆಚ್. ಕೆ ಪಾಟೀಲ್ – ಸಚಿವರು
  • ಸತೀಶ್ ಜಾರಕಿಹೊಳಿ‌ – ಸಚಿವರು

ಕಲಬುರಗಿ ವಿಭಾಗದ ಸದಸ್ಯರು

  • ವಸಂತ ಕುಮಾರ್- ಕೆಪಿಸಿಸಿ ಕಾರ್ಯಾಧ್ಯಕ್ಷ
  • ಈಶ್ವರ್ ಖಂಡ್ರೆ- ಸಚಿವರು
  • ಪ್ರಿಯಾಂಕ್ ಖರ್ಗೆ – ಸಚಿವರು

Published On - 7:11 pm, Mon, 3 June 24

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us