Covid 19 Karnataka Update: ಕರ್ನಾಟಕದಲ್ಲಿ 933 ಮಂದಿಗೆ ಕೊವಿಡ್ ಸೋಂಕು, 14 ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 30, 2021 | 7:26 PM

ರಾಜ್ಯದಲ್ಲಿ ಪ್ರಸ್ತುತ 12,780 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 0.81 ಇದೆ. ಸೋಂಕಿತರ ಸಾವಿನ ಪ್ರಮಾಣ ಶೇ 1.50.

Covid 19 Karnataka Update: ಕರ್ನಾಟಕದಲ್ಲಿ 933 ಮಂದಿಗೆ ಕೊವಿಡ್ ಸೋಂಕು, 14 ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ ಒಟ್ಟು 933 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 14 ಜನರು ಸಾವನ್ನಪ್ಪಿದ್ದಾರೆ. 704 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 12,780 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 0.81 ಇದೆ. ಸೋಂಕಿತರ ಸಾವಿನ ಪ್ರಮಾಣ ಶೇ 1.50. ರಾಜ್ಯದಲ್ಲಿ ಈವರೆಗೆ ಒಟ್ಟು 29,76,000 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,25,397 ಮಂದಿ ಚೇತರಿಸಿಕೊಂಡಿದ್ದರು. ಒಟ್ಟು 37,794 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ ಗುರುವಾರ 291 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. 172 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 12,46,430 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,22,651 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 16,155 ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 7623 ಸಕ್ರಿಯ ಪ್ರಕರಣಗಳಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 291, ದಕ್ಷಿಣ ಕನ್ನಡ 94, ಉಡುಪಿ 77, ಮೈಸೂರು 76, ಚಿಕ್ಕಮಗಳೂರು 63, ಹಾಸನ 57, ತುಮಕೂರು 54, ಕೊಡಗು 48, ಮಂಡ್ಯ 42, ಉತ್ತರ ಕನ್ನಡ 40, ಶಿವಮೊಗ್ಗ 25, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 9, ಧಾರವಾಡ, ಕೋಲಾರ 7, ಬಳ್ಳಾರಿ 6, ದಾವಣಗೆರೆ 5, ಚಾಮರಾಜನಗರ, ಚಿತ್ರದುರ್ಗ 4, ಚಿಕ್ಕಬಳ್ಳಾಪುರ, ಕಲಬುರಗಿ, ಯಾದಗಿರಿ, ಕೊಪ್ಪಳ 2, ಹಾವೇರಿ, ಗದಗ, ವಿಜಯಪುರ, ರಾಮನಗರ 1.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?ಬೆಂಗಳೂರು 5, ದಕ್ಷಿಣ ಕನ್ನಡ 3, ಹಾಸನ 2, ಬೆಳಗಾವಿ, ಮೈಸೂರು, ತುಮಕೂರು, ಉತ್ತರ ಕನ್ನಡ 1.

(Karnataka Coronavirus Numbers 933 Infected 14 Deaths Due to Covid on September 30)

ಇದನ್ನೂ ಓದಿ: ಕೊರೊನಾ ವಾರಿಯರ್ಸ್​ಗೆ ಊಟ ಪೂರೈಸಿದ್ದ ಹೋಟೆಲ್ ಮಹಿಳೆಗೆ ಕಿರುಕುಳ; ಅಧಿಕಾರಿಗಳ ವಿರುದ್ಧ ಆರೋಪ

ಇದನ್ನೂ ಓದಿ: Coronavirus cases in India: ದೇಶದಲ್ಲಿ 23,529 ಹೊಸ ಕೊವಿಡ್ ಪ್ರಕರಣ ಪತ್ತೆ, 311 ಸಾವು

Published On - 7:26 pm, Thu, 30 September 21