ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 1,977 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 48 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 462 ಜನರಿಗೆ ಸೋಂಕು ಖಚಿತಪಟ್ಟಿದ್ದು, 10 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,78,564ಕ್ಕೆ ಏರಿಕೆಯಾಗಿದೆ. ಈವರೆಗೆ ರಾಜ್ಯದಲ್ಲಿ 28,10,121 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,037 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 32,383 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಇಂದು ಒಂದೇ ದಿನ 3,188 ಜನರು ಕೊವಿಡ್ನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಂದಿನ ಕೊವಿಡ್ ಪಾಸಿಟಿವಿಟಿ ಪ್ರಮಾಣ ಶೇಕಡಾ 1.42ರಷ್ಟಿದೆ. (Karnataka Covid Update 1977 new cases and 48 deaths today)
ರಾಜ್ಯದಲ್ಲಿಂದು ಹೊಸದಾಗಿ 1,977 ಜನರಿಗೆ ಕೊರೊನಾ ದೃಢಪಟ್ಟಿದ್ದು, ಬಾಗಲಕೋಟೆ 4, ಬಳ್ಳಾರಿ 5, ಬೆಳಗಾವಿ 94, ಬೆಂಗಳೂರು ಗ್ರಾಮಾಂತರ 56, ಬೆಂಗಳೂರು ನಗರ 462, ಬೀದರ್ 2, ಚಾಮರಾಜನಗರ 31, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 109, ಚಿತ್ರದುರ್ಗ 27, ದಕ್ಷಿಣ ಕನ್ನಡ 224, ದಾವಣಗೆರೆ 23, ಧಾರವಾಡ 12, ಗದಗ 2, ಹಾಸನ 15, ಹಾವೇರಿ 2, ಕಲಬುರಗಿ 8, ಕೊಡಗು 73, ಕೋಲಾರ 36, ಕೊಪ್ಪಳ 3, ಮಂಡ್ಯ 51, ಮೈಸೂರು 197, ಉಡುಪಿ 11, ರಾಯಚೂರು 4, ರಾಮನಗರ 16, ಶಿವಮೊಗ್ಗ 71, ತುಮಕೂರು 86, ಉತ್ತರ ಕನ್ನಡ 71, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಇಂದು 2 ಕೊರೊನಾ ಪ್ರಕರಣ ಪತ್ತೆಯಾಗಿದ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 48 ಜನರ ಸಾವನ್ನಪ್ಪಿದ್ದು, ಬೆಂಗಳೂರು 10, ದಕ್ಷಿಣ ಕನ್ನಡ 7, ಮೈಸೂರು 5, ಬೆಳಗಾವಿ 4, ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆ 3, ಬೆಂಗಳೂರು ಗ್ರಾಮಾಂತರ, ಧಾರವಾಡ, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ತಲಾ ಇಬ್ಬರು, ಚಾಮರಾಜನಗರ, ಹಾಸನ, ಕೊಪ್ಪಳ, ರಾಯಚೂರು, ರಾಮನಗರ, ತುಮಕೂರು, ಉಡುಪಿ, ಚಿಕ್ಕಮಗಳೂರು, ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಇಂದಿನ 15/07/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/m3iNBN6d8U @CMofKarnataka @mla_sudhakar @drashwathcn @GovindKarjol @LaxmanSavadi @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/l1ipKb43Go
— K’taka Health Dept (@DHFWKA) July 15, 2021
ಇದನ್ನೂ ಓದಿ:
ಕೊವಿಡ್ 3ನೇ ಅಲೆ ಆತಂಕ: ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಸಲಹೆ
(Karnataka Covid Update 1977 new cases and 48 deaths today)
Published On - 8:09 pm, Thu, 15 July 21