ಮನಾಲಿ ಜನಸಾಗರ ದೃಶ್ಯದ ಚಿತ್ರ ಹಳೆಯದಾಗಿರಬಹುದು ಆದರೆ, ಗಿರಿಧಾಮಗಳಲ್ಲಿ ಕೊವಿಡ್​ ನಿಯಮ ಪಾಲಿಸದ ಪ್ರವಾಸಿಗರು ಹೆಚ್ಚುತ್ತಿದ್ದಾರೆ!

ಜನ ಕೋವಿಡ್​ ನಿಯಮಗಳನ್ನು ಪಾಲಿಸದಿದ್ದರೆ, ಕೇಂದ್ರ ಸರ್ಕಾರ ಮತ್ತೊಮ್ಮೆ ನಿರ್ಬಂಧಗಳನ್ನು ಹೇರಬಹುದು ಎಂದು ಅಗರ್​ವಾಲ್ ಹೇಳಿದ್ದಾರೆ. ‘ಕೊವಿಡ್ ಪಿಡುಗು ಇನ್ನೂ ನಮ್ಮಿಂದ ದೂರವಾಗಿಲ್ಲ ಎನ್ನುವ ಅಂಶವನ್ನು’ ಒತ್ತಿ ಹೇಳಿದ ಅವರು, ‘ಹಿಲ್ ಸ್ಟೇಷನ್​ಗಳಲ್ಲಿ ಜನ ಜಾತ್ರೆಗಳತೆ ಸೇರುತ್ತಿರುವುದು ಭೀತಿ ಹುಟ್ಟಿಸುತ್ತಿದೆ,’ ಎಂದು ಹೇಳಿದ್ದಾರೆ.

ಮನಾಲಿ ಜನಸಾಗರ ದೃಶ್ಯದ ಚಿತ್ರ ಹಳೆಯದಾಗಿರಬಹುದು ಆದರೆ, ಗಿರಿಧಾಮಗಳಲ್ಲಿ ಕೊವಿಡ್​ ನಿಯಮ ಪಾಲಿಸದ ಪ್ರವಾಸಿಗರು ಹೆಚ್ಚುತ್ತಿದ್ದಾರೆ!
ವೈರಲ್ ಆಗಿರುವ ಮನಾಲಿ ರೋಡ್ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 13, 2021 | 6:34 PM

ಮನಾಲಿಯ ಮಾಲ್​ ರೋಡ್​ನಲ್ಲಿ ಪ್ರವಾಸಿಗರು ಸಾಗರದಂತೆ ಹರಿದುಬರುತ್ತಿದ್ದ ದೃಶ್ಯದ ಫೋಟೋವೊಂದು ವೈರಲ್ ಆದ ನಂತರ ಎಲ್ಲೆಡೆ ಅದರ ಬಗ್ಗೆ ಚರ್ಚೆಗಳಾದವು. ಮನಾಲಿಯಲ್ಲಿ ಕೊವಿಡ್​​-19 ಸೋಂಕು ನಿಯಂತ್ರಿಸಲು ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲವೇ ಎಂಬ ಸಂದೇಹ ಜನರಲ್ಲಿ ಮೂಡಿದ್ದು ಸತ್ಯ. ಆದರೆ, ಆಸಲು ವಿಷಯವೇನಂದರೆ, ವೈರಲ್ ಆದ ಈ ಇಮೇಜ್ ಇದೇ ವರ್ಷ ಜನೆವರಿಯಲ್ಲಿ ತೆಗೆಯಲಾಗಿದೆ . ಇತ್ತೀಚಿನ ಚಿತ್ರವೆಂಬ ಸುಳ್ಳಿನೊಂದಿಗೆ ಆ ಚಿತ್ರವನ್ನು ಹರಿಬಿಡಲಾಗಿತ್ತು. ಇಂಥ ಪ್ರಕರಣಗಳಲ್ಲಿ ಸತ್ಯಾಸತ್ಯತೆಯನ್ನು ಪರಿಶೋಧಿಸಿ ಅಸಲು ವಿಷಯವನ್ನು ಬಯಲಿಗೆಳೆಯುವ ಆಲ್ಟ್ ನ್ಯೂಸ್ ಎಂಬ ವೆಬ್​ಸೈಟ್​ ಸದರಿ ಚಿತ್ರವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿರುವುದನ್ನು ಪತ್ತೆಮಾಡಿದೆ. ಆ ಚಿತ್ರಕ್ಕೆ ಅಮಿಗೋಸ್​ಬ್ಲಿಂಕ್ ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು.

ಅಮಿಗೋಸ್​ಬ್ಲಿಂಕ್ ಕೀ ಪದದ ಮೇಲೆ ವೆಬ್​ಸೈಟ್​ ಮತ್ತಷ್ಟು ಶೋಧ ಕಾರ್ಯ ನಡೆಸಿದಾಗ ಜನವರಿ 23, 2021 ರಂದು ಮಾಡಿದ ಒಂದು ಪೋಸ್ಟ್​ನಲ್ಲಿ ಆ ಚಿತ್ರ ಸಿಕ್ಕಿದೆ. ಹೆಚ್ಚಿನ ಮಾಹಿತಿಗಾಗಿ ಆ ಪೇಜನ್ನು ಸಂಪರ್ಕಿಸಿದಾಗ ಅಜಯ ಕುಮಾರ್ ಎನ್ನುವವರು ಆ ಪೇಜ್​ ಅಡ್ಮಿನಿಸ್ಟ್ರೇಟರ್ ಆಗಿದ್ದು ಬೆಳಕಿಗೆ ಬಂದಿದ್ದು ಅವರು ಡಿಸೆಂಬರ್ 31, 2020 ರಂದು ಅ ಚಿತ್ರವನ್ನು ಸೆರೆ ಹಿಡಿದಿದ್ದು ಎಂದು ಹೇಳಿದ್ದಾರೆ.

ಆದರೆ, ಈ ಚಿತ್ರ ವೈರಲ್ ಆದ ನಂತರ ಒಂದು ಸುದ್ದಿಗೋಷ್ಟಿಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಲವ್ ಆಗರ್​ವಾಲ್ ಅವರು, ‘ವೈರಸ್ ಇನ್ನು ನಮ್ಮ ನಡುವೆಯೇ ಇದೆ, ಅದಕ್ಕೆ ಒಂದು ಅವಕಾಶ ಸಿಕ್ಕರೆ ಸಾಕು ಮತ್ತೆ ವೇಗವಾಗಿ ಹಬ್ಬುತ್ತದೆ, ಜನರು ಯಾವ ಕಾರಣಕ್ಕೂ ಎಚ್ಚರ ತಪ್ಪಬಾರದು’ ಎಂದು ಹೇಳಿದ್ದರು.

ಕೇವಲ ಮನಾಲಿ ಮಾತ್ರವಲ್ಲ, ಮುಸ್ಸೋರಿಯ ಕೆಂಪ್ಟಿ ಜಲಪಾತ ಮತ್ತು ಹರಿದ್ವಾರದ ಹರ್ ಕಿ ಪೌರಿಗಳಲ್ಲೂ ಇಪರೀತ ಜನಜಂಗುಳಿಗಳ ಚಿತ್ರಗಳು ಕಾಣಿಸಿಕೊಂಡಿದ್ದು ಕೇಂದ್ರ ಆರೋಗ್ಯ ಇಲಾಖೆಗೆ ಆತಂಕ ಮೂಡಿಸಿದೆ, ಇದೇ ವಿಷಯವನ್ನು ಉಲ್ಲೇಖಿಸಿ ಮಂಗಳವಾರದಂದು ಮಾತಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ‘ಪ್ರಾವಾಸೋದ್ಯಮ ಮತ್ತು ಅದಕ್ಕೆ ಸಂಬಂಧಿಸಿದ ವ್ಯವಹಾರಗಳು ಕೊರೋನಾದಿಂದ ತೀವ್ರ ಸ್ವರೂಪದ ಹಾನಿ ಅನುಭವಿಸಿರುವುದು ನಿಜ, ಆದರೆ ನಾನು ಸ್ಪಷ್ಟಪಡಿಸಲಿರುವ ಒಂದು ವಿಷಯವೇನೆಂದರೆ, ಗಿರಿಧಾಮಗಳಲ್ಲಿ, ಮಾರ್ಕೆಟ್​ ಪ್ರದೇಶಗಳಲ್ಲಿ ಜನ ಮಾಸ್ಕ್ ಧರಿಸದೆ ಓಡಾಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ,’ ಎಂದು ಹೇಳಿದ್ದರು.

ಪ್ರಸಿದ್ಧ ಗಿರಿಧಾಮ ಮನಾಲಿಯಲ್ಲದೆ ಬೇರೆ ಪ್ರವಾಸಿ ಸ್ಥಲಗಳಲ್ಲಿ ಜನಸಾಗರದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರ ದೊಡ್ಡ ಗುಂಪು ಅದರಲ್ಲೂ ಕೆಲವರು ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೆ ಅಂಗಡಿಗಳ ಕಡೆ ನುಗ್ಗುತ್ತಿರೋದು ಚಿತ್ರಗಳಲ್ಲಿ ಮತ್ತು ವಿಡಿಯೋಗಳಲ್ಲಿ ಸೆರೆಯಾಗಿವೆ. ಗಿರಿಧಾಮಗಳಿಗೆ ಪ್ರವಾಸ ತೆರೆಳುತ್ತಿರುವ ಜನ ಕೋವಿಡ್​-19 ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆಂದು ಲವ್ ಅಗರ್​ವಾಲ್ ಅವರು ಹೇಳಿದ್ದಾರೆ. ಜನರಿಂದ ಇಥ ವರ್ತನೆ ಮುಂದುವರಿದರೆ, ಇದುವರೆಗೆ ಪಡೆದುಕೊಂಡ ಪ್ರಯೋಜನಗಳೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ಜನ ಕೋವಿಡ್​ ನಿಯಮಗಳನ್ನು ಪಾಲಿಸದಿದ್ದರೆ, ಕೇಂದ್ರ ಸರ್ಕಾರ ಮತ್ತೊಮ್ಮೆ ನಿರ್ಬಂಧಗಳನ್ನು ಹೇರಬಹುದು ಎಂದು ಅಗರ್​ವಾಲ್ ಹೇಳಿದ್ದಾರೆ. ‘ಕೊವಿಡ್ ಪಿಡುಗು ಇನ್ನೂ ನಮ್ಮಿಂದ ದೂರವಾಗಿಲ್ಲ ಎನ್ನುವ ಅಂಶವನ್ನು’ ಒತ್ತಿ ಹೇಳಿದ ಅವರು, ‘ಹಿಲ್ ಸ್ಟೇಷನ್​ಗಳಲ್ಲಿ ಜನ ಜಾತ್ರೆಗಳತೆ ಸೇರುತ್ತಿರುವುದು ಭೀತಿ ಹುಟ್ಟಿಸುತ್ತಿದೆ,’ ಎಂದು ಹೇಳಿದ್ದಾರೆ.

ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ ಚೆನೈ ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರದ ಪ್ರತಿಷ್ಠಿತ ಬಟ್ಟೆ ವ್ಯಾಪಾರದ ಮಳಿಗೆ ಕುಮರನ್ ಸಿಲ್ಕ್ಸ್ ವಿರುದ್ಧ ದಿಟ್ಟ ಕ್ರಮತೆಗೆದುಕೊಂಡು ಅದನ್ನು ಮುಚ್ಚಿಸಿದ್ದಾರೆ. ಜನ ಗುಂಪಾಗಿ ಆ ಅಂಗಡಿಯಲ್ಲಿ ಜಮಾಯಿಸಿದ್ದ ಮತ್ತು ಅದರ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರು ಕೊವಿಡ್ ಸುರಕ್ಷತೆ ಬಗ್ಗೆ ಯಾವುದೇ ಕ್ರಮ ಅನುಸರಿಸದ ವಿಡಿಯೋಗಳು ಪಾಲಿಕೆಗೆ ಲಭ್ಯವಾದ ನಂತರ ಅಧಿಕಾರಿಗಳು ಕ್ರಮ ಜರುಗಿಸಿದರು.

ಇದನ್ನೂ ಓದಿ: Covid Vaccine: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಭಾರತದ ಈ ರಾಜ್ಯಕ್ಕೆ ಪ್ರವೇಶ ನಿಷೇಧ!

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು